ಜಯಾಗೆ ನೀರುಕುಡಿಸಿದ ಕೋರ್ಟ್: ಸದ್ಯಕ್ಕೆ ರಾಜ್ಯ ಬಚಾವ್

SC puts TN application on hold, Cauvery dispute
ನವದೆಹಲಿ, ಏ 27: ಬೇಸಿಗೆಯಿಂದ ತತ್ತರಿಸಿರುವ ಕಾವೇರಿ ಭಾಗದ ಜಿಲ್ಲೆಗಳ ಜನರ ಪಾಲಿಗೆ ಸುಪ್ರೀಂಕೋರ್ಟ್ ಇಂದು ಸ್ವಲ್ಪ ನಿರಾಳವಾಗುವ ಆದೇಶ ನೀಡಿದೆ. ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಸಂಬಂಧ ತಮಿಳುನಾಡಿನ ಅರ್ಜಿಯನ್ನು ಸದ್ಯಕ್ಕೆ ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಈಗಲೇ ಈ ಅರ್ಜಿಯ ವಿಚಾರಣೆ ಸಾಧ್ಯವಿಲ್ಲ. ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಮೂರು ಮಂದಿ ಸದಸ್ಯರು ಇರುವ ಹೊಸ ಪೀಠ ರಚಿಸಿ ಜುಲೈ ತಿಂಗಳಲ್ಲಿ ಅರ್ಜಿಯ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಯ ಪೀಠಕ್ಕೆ ಆದೇಶಿಸಿದೆ. ಹಾಗಾಗಿ, ಕರ್ನಾಟಕ ಸರಕಾರ ಈ ತಿಂಗಳ ಜುಲೈ ತಿಂಗಳವರೆಗೆ ತಮಿಳುನಾಡಿಗೆ ನೀರು ಬಿಡುವ ಗೋಜಿಗೆ ಹೋಗಬೇಕಾಗಿಲ್ಲ.

ಬೇಸಿಗೆ ಬೆಳೆ ಬೆಳೆಯದಂತೆ ಕರ್ನಾಟಕಕ್ಕೆ ನಿರ್ಭಂದ ಹೇರ ಬೇಕೆಂದು ತಮಿಳುನಾಡು ರಾಜ್ಯದ ವಿರುದ್ದ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಆದೇಶದಿಂದ ತಮಿಳುನಾಡು ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.

ಈ ಮಧ್ಯೆ, ಸರಕಾರ ತಮಿಳುನಾಡಿಗೆ ನೀರು ಹರಿಯ ಬಿಟ್ಟಿಲ್ಲ, ಮಾಧ್ಯಮಗಳಲ್ಲಿ ಬಂದು ವರದಿಯಲ್ಲಿ ನಿಜಾಂಶವಿಲ್ಲ ಎಂದು ಸಿಎಂ ಸದಾನಂದ ಗೌಡ ಸ್ಪಷ್ಟ ಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+