ಬೆಂಗಳೂರು : ತರಕಾರಿ ಕೊಳ್ಳೋದು ಹೇಗಪ್ಪಾ?

vegetables
ಬೆಂಗಳೂರು, ಜೂ.22: ನಗರದಲ್ಲಿ ತರಕಾರಿ ಬೆಲೆಗಳು ಗಗನಕ್ಕೆ ಏರಿ ಎರಡು ತಿಂಗಳು ಕಳೆದಿವೆ. ಬೆಲೆಗಳು ಕಡಿಮೆ ಆಗುತ್ತದೆ ಎಂದು ಕಾದು ಕುಳಿತು ಜನರಿಗೂ ನಿರಾಸೆ ಉಂಟಾಗಿದೆ. ಜೂನ್ ತಿಂಗಳು ಅಂತ್ಯವಾಗುತ್ತಿದ್ದರೂ, ತರಕಾರಿ ಬೆಲೆ ಕಡಿಮೆ ಆಗುವ ಲಕ್ಷಣಗಳು ಕಾಣುತ್ತಿಲ್ಲ.

ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ತರಕಾರಿ ಬೆಲೆ ಅಧಿಕವಾಗಿತ್ತು. ಜೂನ್ ಮೊದಲವಾರ ಕಡಿಮೆ ಆಗುತ್ತದೆ. ಜೂನ್ ಅಂತ್ಯದ ವೇಳೆಗೆ ಕಡಿಮೆ ಆಗುತ್ತದೆ ಎಂದು ಕಾದ ಜನರು ನಿರಾಸೆಗೊಂಡಿದ್ದಾರೆ. ಮುಂಗಾರು ಮಳೆ ಪ್ರಾರಂಭವಾದರೂ ತರಕಾರಿ ಬೆಲೆಗಳು ಮಾತ್ರ ಕಡಿಮೆ ಆಗುತ್ತಿಲ್ಲ.

ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿದ್ದು, ಆದ್ದರಿಂದ ತರಕಾರಿರ ಬೆಲೆ ಹೆಚ್ಚಾಗಿದೆ. ಮುಂಗಾರು ಮಳೆ ಆರಂಭವಾದ ತಕ್ಷಣ ಬೆಲೆ ಕಡಿಮೆ ಆಗುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಆ ನಂಬಿಕೆ ಸುಳ್ಳಾಗಿದೆ.

ಮುಂಗಾರು ಮಳೆ ಭರ್ಜರಿಯಾಗಿ ಪ್ರಾರಂಭವಾದರೆ, ತರಕಾರಿ ಬೆಲೆ ಶೇ 20ರಷ್ಟು ಕಡಿಮೆ ಆಗುತ್ತದೆ ಎಂದು ಹಾಪ್ ಕಾಮ್ಸ್ ಅಧಿಕಾರಿಗಳು ಹೇಳಿದ್ದರು. ಸದ್ಯ ತರಕಾರಿ ಬೆಲೆ ಕೆ.ಜಿಗೆ 40 ರಿಂದ 50 ರೂ ದರದಲ್ಲಿ ದೊರೆಯುತ್ತಿದೆ. 60 80 ರೂ.ಗಳಿಗೆ ಹೋಗಿದ್ದ ತರಕಾಗಿ ಕೊಂಚ ಇಳಿಮುಖ ಕಂಡಿದೆ.

ಮಾರುಕಟ್ಟೆ, ಸಣ್ಣ ತರಕಾರಿ ಅಂಗಡಿಗಳು ಹಾಗೂ ಮಾಲ್‌ಗ‌ಳಲ್ಲಿ ತರಕಾರಿ ಬೆಲೆ ಹಾಪ್‌ಕಾಮ್ಸ್‌ಗಿಂತ ಶೇ.20 ರಷ್ಟು ಹೆಚ್ಚಿವೆ. ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ರೈತರಿಂದ ನೇರವಾಗಿ ತರಕಾರಿ ಖರೀದಿಸಿ, ಗ್ರಾಹಕರಿಗೆ ನೀಡಲಾಗುತ್ತದೆ. ಆದ್ದರಿಂದ ದರ ಸ್ಪಲ್ಪ ಕಡಿಮೆ ಇದೆ.

ನೀರಿನ ಸಮಸ್ಯೆ, ವಿದ್ಯುತ್‌ ಸಮಸ್ಯೆ, ತರಕಾರಿ ಸರಬರಾಜು ಮಾಡಲು ವಾಹನಗಳ ಅಧಿಕ ಬಾಡಿಗೆ ಮುಂತಾದ ಕಾರಣಗಳಿಂದಾಗಿ ಬೆಲೆ ಹೆಚ್ಚಳವಾಗಿದೆ. ಆದ್ದರಿಂದ ಉತ್ತಮವಾಗಿ ಮಳೆ ಸುರಿದರೂ ತರಕಾರಿ ಬೆಲೆಗಳಲ್ಲಿ ಅಂತಹ ಇಳಿಕೆ ಆಗುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೇಗಿದೆ ತರಕಾರಿ ರೇಟು : ಶುಕ್ರವಾರ ಸಂಜೆಯ ವೇಳೆಗೆ ಟೊಮೆಟೋ ಬೆಲೆ ಕೆಜಿಗೆ 50 ರೂ ಇತ್ತು. ಬೀನ್ಸ್‌ 45 ರೂ, ಡಬ್ಬಲ್ ಬೀನ್ಸ್ 120 ರೂ.ಗಳಿಗೆ ಮಾರಾಟವಾಗುತ್ತಿದೆ. ಬದನೆಕಾಯಿ 35, ಶುಂಠಿ ಕೆಜಿಗೆ 192 ರೂ.ಆಗಿದೆ.

ತರಕಾರಿ ಬೆಲೆ ಪಟ್ಟಿ (ಕೆ.ಜಿ)
ಅವರೆಕಾಯಿ - 78 ರೂ.
ಬೀಟ್ ರೋಟ್ - 35 ರೂ.
ಕ್ಯಾಪ್ಸಿಕಮ್ - 67 ರೂ.
ಕ್ಯಾಪ್ಸಿಕಮ್ (ಕೆಂಪು) - 100 ರೂ.
ಹೂ ಕೋಸು - 35 ರೂ.
ಆಲೂಗೆಡ್ಡೆ - 30 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+