ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೀಟನಾಶಕಗಳ ಸುರಕ್ಷಿತ ಬಳಕೆ ಬಗ್ಗೆ ರೈತರಿಗೆ ಕೃಷಿ ಇಲಾಖೆಯ ಸಲಹೆಗಳು

|
Google Oneindia Kannada News

ಕೀಟನಾಶಕಗಳ ಸುರಕ್ಷಿತ ಬಳಕೆಯ ವಿಧಾನಗಳು

1. ಶೇಖರಣೆ
* ಕೀಟನಾಶಕಗಳನ್ನು ಆಹಾರ ಪದಾರ್ಥಗಳ ಜೊತೆಗೆ ಶೇಖರಣೆ ಮಾಡಬಾರದು.

* ಮಕ್ಕಳ ಕೈಗೆ ಸಿಗುವ ಹಾಗೆ ಇಡಬಾರದು

* ಬಳಸಿ ಉಳಿದ ಕೀಟನಾಶಕಗಳನ್ನು ಅದೇ ಡಬ್ಬಿ / ಬಾಟಲಿಯಲ್ಲಿ ಇಡಬೇಕು

2. ಸಿಂಪರಣಾ ದ್ರಾವಣ ತಯಾರಿಕೆ
* ರಾಸಾಯನಿಕ ಬಳಸುವ ಮುನ್ನ ಉಪಯೋಗಿಸುವ ವಿಧಾನದ ಬಗ್ಗೆ ಮಾಹಿತಿಯನ್ನು ಓದಿ ತಿಳಿಯಬೇಕು.

* ಕೀಟನಾಶಕ ದ್ರಾವಣವನ್ನು ಬರಿಗೈಯಿಂದ ಮುಟ್ಟಬಾರದು

* ರಾಸಾಯನಿಕಗಳನ್ನು ನೀರಿನಲ್ಲಿ ಬೆರೆಸಲು ಪ್ರತ್ಯೇಕವಾದ ಬಕೆಟ್ ಅಥವಾ ಡ್ರಮ್‍ಗಳನ್ನು ಬಳಸಬೇಕು.

Department of Agriculture Instructions To Farmers On Safe Use Of Pesticides

3. ಸಿಂಪರಣೆ
* ಬೆಳಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಂಪರಣೆ ಮಾಡುವುದು ಉತ್ತಮ.

* ಚಿಕ್ಕಮಕ್ಕಳು, ಮೈ ಮೇಲೆ ಗಾಯವಿರುವವರು ಮತ್ತು ಅನಾರೋಗ್ಯದಿಂದ ಬಳಲುವವರನ್ನು ಸಿಂಪರಣಾ ಕ್ರಿಯೆಯಲ್ಲಿ ತೊಡಗಿಸಬಾರದು.

* ಮೈ ಮೇಲೆ ರಾಸಾಯನಿಕ ಬೀಳದ ಹಾಗೆ ಸಿಂಪರಿಸಬೇಕು.

* ನಾಜಲ್ ಕಟ್ಟಿಕೊಂಡರೆ ಬಾಯಿಯಿಂದ ಊದಿ ಸರಿಪಡಿಸಲು ಪ್ರಯತ್ನಿಸಬಾರದು.

* ಸಂಪೂರ್ಣ ಮೈ ಮುಚ್ಚುವ ಹಾಗೆ ಕೋಟು, ಕನ್ನಡಕ, ಕೈ ಚೀಲಗಳು ಮತ್ತು ಬೂಟುಗಳನ್ನು ಧರಿಸಬೇಕು.

* ಸಿಂಪಡಿಸುವಾಗ ಆಹಾರ ಸೇವನೆ, ಧೂಮಪಾನ ಮಾಡಬಾರದು.

4. ಸಿಂಪರಣೆಯ ನಂತರ
* ಸಿಂಪರಣಾ ಉಪಕರಣಗಳನ್ನು ನೀರು ಉಪಯೋಗಿಸಿ ತೊಳೆದಿಡಬೇಕು. ಬಾವಿಯಲ್ಲಿ/ ಕೆರೆಕಟ್ಟೆಗಳಲ್ಲಿ ಅಥವಾ ನಾಲೆಗಳಲ್ಲಿ ತೊಳೆಯಬಾರದು.

* ಖಾಲಿ ಪೀಡೆನಾಶಕ ಡಬ್ಬ/ ಬಾಟಲಿಗಳನ್ನು ಜಜ್ಜಿ ಮಣ್ಣಿನಲ್ಲಿ ಮುಚ್ಚಬೇಕು.

* ಬಳಸಿ ಉಳಿದ ಸಿಂಪರಣಾ ದ್ರಾವಣವನ್ನು ಶೇಖರಿಸಿಡಬಾರದು.

* ಸಿಂಪರಣೆಯ ನಂತರ ಚೆನ್ನಾಗಿ ಸ್ನಾನಮಾಡಿ, ಬಟ್ಟೆ ಬದಲಾವಣೆ ಮಾಡಬೇಕು.

* ಸಿಂಪಡಿಸಿದ ಪ್ರದೇಶದಲ್ಲಿ ಜಾನುವಾರುಗಳನ್ನು ಹುಲ್ಲು ಮೇಯಲು ಬಿಡಬಾರದು.

* ಸಿಂಪಡಿಸಿದ ಯಾವುದೇ ಪದಾರ್ಥಗಳನ್ನು ಸುರಕ್ಷಿತ ಅವಧಿ ಮುಗಿಯುವವರೆಗೆ ಸೇವಿಸಲು ಬಿಡಬಾರದು. ಅಂದರೆ ಸಿಂಪರಣೆ ನಂತರ ಕನಿಷ್ಟ 10-12 ದಿನಗಳವರೆಗೆ ಬೆಳೆಯನ್ನು ಕಟಾವು ಮಾಡಬಾರದು ಮತ್ತು ಹಣ್ಣು ಕಾಯಿಗಳನ್ನು ಕೀಳಬಾರದು.

Department of Agriculture Instructions To Farmers On Safe Use Of Pesticides

5. ಪ್ರಥಮ ಚಿಕಿತ್ಸೆ
* ಮೈ ಮೇಲೆ ಅಥವಾ ಕಣ್ಣಲ್ಲಿ ರಾಸಾಯನಿಕ ಬಿದ್ದಲ್ಲಿ, ತಕ್ಷಣ ಹೆಚ್ಚು ನೀರನ್ನು ಬಳಸಿ ತೊಳೆದುಕೊಳ್ಳಬೇಕು.

* ರಾಸಾಯನಿಕಗಳನ್ನು ಸೇವಿಸಿದ್ದ ಪಕ್ಷದಲ್ಲಿ, ತಕ್ಷಣ ವಾಂತಿ ಮಾಡಿಸಬೇಕು. ನಂತರ ರೋಗಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ರಾಸಾಯನಿಕದ ಡಬ್ಬ/ ಬಾಟಲ್‌ನ್ನು ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಮಾಡಿಸಬೇಕು.

ವಿಶೇಷ ಸಲಹೆ:
2021-22ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೃಷಿ ಪ್ರಶಸ್ತಿ (ಬೆಳೆ ಸ್ಪರ್ಧೆ)ಗಾಗಿ ಭಾಗವಹಿಸಲಿಚ್ಚಿಸುವ ರೈತರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಲ್ಲಾ ಮಟ್ಟಗಳಿಗೂ (ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿಗೆ) ಅನ್ವಯಿಸುವಂತೆ ನಿಗದಿತ ನಮೂನೆಯಲ್ಲಿ ಒಂದೇ ಅರ್ಜಿಯನ್ನು ಸಲ್ಲಿಸಬೇಕು.

ಪ್ರವೇಶ ಶುಲ್ಕ
ಪ.ಜಾತಿ/ ಪ.ವರ್ಗದ ರೈತರಿಗೆ 25.00 ರೂ. ಮತ್ತು ಸಾಮಾನ್ಯ ರೈತರಿಗೆ 100 ರೂ. 2021-22ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ರೈತರು ಅರ್ಜಿ ಸಲ್ಲಿಸಲು 2021ರ 30ನೇ ನವೆಂಬರ್ ಕೊನೆಯ ದಿನಾಂಕವಾಗಿರುತ್ತದೆ. ಸ್ಪರ್ಧಿಸಬಹುದಾದ ಬೆಳೆಗಳ ವಿವರಗಳು, ಅರ್ಜಿ ನಮೂನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ವಿಸ್ತರಣಾ ಕಾರ್ಯಕರ್ತರನ್ನಾಗಲಿ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನಾಗಲಿ ಸಂಪರ್ಕಿಸಲು ಕೋರಿದೆ.

ಹೆಚ್ಚಿನ ಮಾಹಿತಿಗೆ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನಾ­ಗಲೀ ಅಥವಾ ರೈತ ಸಹಾಯವಾಣಿ ಕೇಂದ್ರಃ 1800 425 3553 ಇಲ್ಲವೇ ಕಿಸಾನ್ ಕರೆ ಕೇಂದ್ರಕ್ಕೆ ಉಚಿತ ಕರೆ ಮಾಡಬಹುದು.

ಮಾಹಿತಿ: ಕರ್ನಾಟಕ ರಾಜ್ಯ ಕೃಷಿ ಇಲಾಖೆ

Recommended Video

Americaದಿಂದ ಪರಭಕ್ಷಕ Drones ಖರೀದಿಸಲು ಮುಂದಾದ India | Oneindia Kannada

English summary
The Karnataka Department of Agriculture has issued suggestions and instructions to the farmers on the safe use of pesticides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X