• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಡ್ಯ ನಗರದ ಜನಕ್ಕೆ ಆನ್ ಲೈನ್‌ನಲ್ಲೇ ಮಾವಿನ ಹಣ್ಣು ಮಾರಾಟ!

|

ಮಂಡ್ಯ, ಮೇ 13: ಈಗ ಮಾವಿನ ಹಣ್ಣಿನ ಕಾಲ. ಹೀಗಾಗೇ ಯೋಜನೆಯಂತೆ ಮಾವು ಬೆಳೆದ ರೈತರು ಒಂದಷ್ಟು ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಕೊರೊನಾ ಲಾಕ್ ಡೌನ್ ನಿಂದಾಗಿ ಮಾರಾಟ ಮಾಡುವುದು ಕಷ್ಟವಾಗಿ ಪರದಾಡುವಂತಾಗಿದೆ. ಹೀಗಾಗಿ ರೈತರ ನೆರವಿಗೆ ಬಂದಿರುವ ಜಿಲ್ಲಾಡಳಿತ ಮಾವು ಪ್ರಿಯರಿಗೆ ಆನ್ ಲೈನ್ ನಲ್ಲಿ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.

ಮಾವು ಎಲ್ಲರಿಗೂ ಪ್ರಿಯವಾಗಿದ್ದು, ಮಕ್ಕಳಿಂದ ವೃದ್ಧರವರೆಗೂ ಮಾವಿನ ಹಣ್ಣನ್ನು ಇಷ್ಟಪಡುತ್ತಾರೆ. ಆದರೆ ಈಗ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾವಿನ ಹಣ್ಣನ್ನು ಮಾರಾಟ ಮಾಡುವುದು ಮತ್ತು ಖರೀದಿಸುವುದು ಎರಡಕ್ಕೂ ಕಷ್ಟವಾಗಿದ್ದು, ಇದನ್ನು ಮನಗಂಡ ಮಂಡ್ಯ ಜಿಲ್ಲಾಡಳಿತ ಆನ್ ಲೈನ್ ನಲ್ಲಿ ಮಾರಾಟಕ್ಕೆ ಮುಂದಾಗಿರುವುದು ರೈತರಿಗೆ ಖುಷಿ ಕೊಟ್ಟಿದೆ.

ಈ ಬಾರಿ ಮಾವು ಮೇಳವಿಲ್ಲ; ಮನೆ ಬಾಗಿಲಿಗೆ ಬರಲಿದೆ ರುಚಿಯಾದ ಹಣ್ಣು

 ಪ್ರತಿ ವರ್ಷ ನಡೆಯುತ್ತಿದ್ದ ಮಾವಿನ ಮೇಳ

ಪ್ರತಿ ವರ್ಷ ನಡೆಯುತ್ತಿದ್ದ ಮಾವಿನ ಮೇಳ

ಪ್ರತಿ ವರ್ಷವೂ ಅಲ್ಲಲ್ಲಿ ಮಾವಿನ ಹಣ್ಣಿನ ಮೇಳಗಳನ್ನು ನಡೆಸಲಾಗುತ್ತಿತ್ತು. ರೈತರು ತಮ್ಮ ತೋಟದಲ್ಲಿ ಬೆಳೆದಿದ್ದ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಮೇಳಕ್ಕೆ ತಂದು ಮಾರಾಟ ಮಾಡುತ್ತಿದ್ದರು. ಈ ಮೇಳಗಳಿಗೆ ಸಾರ್ವಜನಿಕರು ಬಂದು ತಮಗೆ ಬೇಕಾದ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದರು. ಅಲ್ಲದೆ ರೈತರು ಬೇರೆ ಬೇರೆ ಊರುಗಳಿಗೆ ತೆರಳಿ ಅಲ್ಲಿ ನಡೆಯುತ್ತಿದ್ದ ಮಾವು ಮೇಳಗಳಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಅದೆಲ್ಲವೂ ಸಾಧ್ಯವಾಗದ ಮಾತಾಗಿದೆ. ಹೀಗಿರುವಾಗ ಹಾಪ್ ಕಾಮ್ಸ್ ಆನ್ ಲೈನ್ ನಲ್ಲಿ ಮಾರಾಟ ಮಾಡುತ್ತಿರುವುದು ನೆಮ್ಮದಿ ತಂದಿದೆ.

 ಮನೆಮನೆಗೇ ಮಾವಿನ ಹಣ್ಣು

ಮನೆಮನೆಗೇ ಮಾವಿನ ಹಣ್ಣು

ಈ ಕುರಿತಂತೆ ಜಿಲ್ಲಾಧಿಕಾರಿ ಡಾ.ಎಂವಿ.ವೆಂಕಟೇಶ್ ಮಾತನಾಡಿ, ಇದು ಮಾವಿನ ಹಣ್ಣಿನ ಕಾಲವಾಗಿದ್ದು, ಹಣ್ಣಿನ ಸವಿಯನ್ನು ಸವಿಯಬೇಕೆಂದು ಎಲ್ಲರೂ ಬಯಸುತ್ತಾರೆ. ಹೀಗಾಗಿ ಹಣ್ಣನ್ನು ಖರೀದಿಸಲು ರುಚಿಯಾದ ಮಾವಿನ ಹಣ್ಣನ್ನು ಮನೆ ಮನೆಗಳಿಗೆ ತಲುಪಿಸುವವಂತಹ ವ್ಯವಸ್ಥೆಯನ್ನು ಮಾಡಿರುವುದಾಗಿ ಹೇಳಿದ್ದಾರೆ.

ರೈತರಿಗೆ ಸಿಹಿ ಸುದ್ದಿ; ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಆರಂಭ

 ಒಂದೇ ದಿನದಲ್ಲಿ ಮನೆ ಬಾಗಿಲಿಗೆ ಮಾವು

ಒಂದೇ ದಿನದಲ್ಲಿ ಮನೆ ಬಾಗಿಲಿಗೆ ಮಾವು

ಮಂಡ್ಯ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ನವರು ರೈತರ ತೋಟದಲ್ಲಿ ಬೆಳೆದ ಸಾವಯವ ಮಾವಿನ ಹಣ್ಣುಗಳನ್ನು ಖರೀದಿಸಿ ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡುವುದಲ್ಲದೆ, ಆನ್ ಲೈನ್ ನಲ್ಲಿ ಬುಕ್ ಮಾಡುವವರಿಗೆ ಒಂದೇ ದಿನದಲ್ಲಿ ತಲುಪಿಸುವ ವ್ಯವಸ್ಥೆಯನ್ನು ಮಾಡಲಿದ್ದಾರೆ. ಇದೊಂದು ವಿನೂತನ ಮತ್ತು ವಿಶೇಷ ಪ್ರಯತ್ನವಾಗಿದೆ ಎಂದ ಅವರು, ಗ್ರಾಹಕರು ತಮಗೆ ಬೇಕಾದ ವಿವಿಧ ಬಗೆಯ ಬಾದಾಮಿ, ತೋತಾಪುರಿ ಮತ್ತು ಸಿಂಧೂರ ಮಾವಿನಹಣ್ಣನ್ನು ಆನ್ ಲೈನ್ ನಲ್ಲಿ ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

 ಆನ್ ಲೈನ್ ಮಾರಾಟ ಪ್ರಕ್ರಿಯೆಗೆ

ಆನ್ ಲೈನ್ ಮಾರಾಟ ಪ್ರಕ್ರಿಯೆಗೆ "ಕಾವೇರಿ ಗೋಲ್ಡ್" ಹೆಸರು

ಮಾವಿನ ಹಣ್ಣು ಖರೀದಿಸುವವರು ಕನಿಷ್ಠ ಐದು ಕೆ.ಜಿ. ಮಾವಿನ ಹಣ್ಣನ್ನು ಖರೀದಿಸಬೇಕಾಗುತ್ತದೆ. ಈ ಆನ್ ಲೈನ್ ಮಾರಾಟ ಪ್ರಕ್ರಿಯೆಗೆ ಕಾವೇರಿ ಗೋಲ್ಡ್ ಎಂದು ಹೆಸರಿಡಲಾಗಿದೆ. ಅಲ್ಲದೆ ಈ ಸೌಲಭ್ಯ ಮಂಡ್ಯದ ಪಟ್ಟಣದಲ್ಲಿ ಮಾತ್ರ ಇರಲಿದೆ. ಮಾವಿನ ಹಣ್ಣು ಬೇಕಾದಲ್ಲಿ dcmandya.kar.nic.in/aapcomes ಈ ವೆಬ್ ಸೈಟ್ ಅನ್ನು ಸಂಪರ್ಕಿಸಬಹುದಾಗಿದೆ.

English summary
Mandya district administration has came to help farmers by giving an opportunity to customers to buy mango online,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X