ಕೋಲಾರ ಗಡಿಯಲ್ಲಿ ಕಾಡಾನೆಗಳ ದಾಂಧಲೆ; ಲಕ್ಷಾಂತರ ಬೆಳೆ ನಾಶ
ಕೋಲಾರ, ಮೇ 23: ಸದಾ ಕಾಡಾನೆ ಹಾವಳಿಗೆ ತುತ್ತಾಗುವ ಕೋಲಾರದ ಗಡಿಯಲ್ಲಿ ಇಂದು ಮತ್ತೆ ಕಾಡಾನೆ ಹಿಂಡು ಕಾಣಿಸಿಕೊಂಡಿದೆ. ತಮಿಳುನಾಡಿನ ಕೃಷ್ಣಗಿರಿ ಕಡೆಯಿಂದ ಬಂದಿರುವ ಹತ್ತಕ್ಕೂ ಹೆಚ್ಚು ಕಾಡಾನೆಗಳು ಹೊಲಗಳಿಗೆ ನುಗ್ಗಿ ರೈತರ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಯನ್ನು ನಾಶ ಮಾಡಿವೆ.
Recommended Video
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾರಾಂಡಹಳ್ಳಿ, ಬೊಮ್ಮಗಾನಹಳ್ಳಿ ಬಳಿ ಇಂದು ಲಗ್ಗೆ ಇಟ್ಟ ಆನೆಗಳು ರೈತರ ಬೆಳೆಗಳನ್ನು ತುಳಿದು ನಾಶ ಮಾಡಿ ಹಾಕಿವೆ. ಟೊಮಾಟೊ ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿವೆ.
ರೈತ ಶಿವಪ್ಪ, ವೆಂಕಟೇಶಪ್ಪ ಎಂಬುವರು ಮೂರು ಎಕರೆ ಟೊಮಾಟೊ ಬೆಳೆಯನ್ನು ಬೆಳೆದಿದ್ದರು. ಅವೆಲ್ಲವೂ ಕಾಡಾನೆ ತುಳಿತಕ್ಕೆ ಒಳಗಾಗಿವೆ. ಆದರೆ ಇಷ್ಟಾದರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸ್ಥಳೀಯ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ನಿರಂತರವಾಗಿ ಕಾಡಾನೆಗಳು ದಾಳಿಯಿಡುತ್ತಿರುವ ಘಟನೆಗಳು ನಡೆಯುತ್ತಿವೆ. ಬೆಳೆ ನಾಶವೂ ಆಗುತ್ತಿದೆ. ಆದರೆ ಅದಕ್ಕೆ ಪರಿಹಾರವೂ ಸಿಗುತ್ತಿಲ್ಲ, ಕಾಡಾನೆ ದಾಳಿಯೂ ನಿಲ್ಲುತ್ತಿಲ್ಲ ಎಂದು ಅರಣ್ಯ ಇಲಾಖೆಗೆ ರೈತರು ಶಾಪ ಹಾಕುತ್ತಿದ್ದಾರೆ.











Click it and Unblock the Notifications