• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಸನ; ಮಳೆಗೆ ಕಾಫಿ ಬೆಳಗೆ ಹಾನಿ, ಸಮೀಕ್ಷೆಗೆ ಸೂಚನೆ

|
Google Oneindia Kannada News

ಹಾಸನ, ನವೆಂಬರ್ 18; ಹಾಸನ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿ ಬೆಳೆಗೆ ಹಾನಿಯಾಗಿದೆ. ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಬೆಳಗಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಳೆಹಾನಿ ಸಮೀಕ್ಷೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಗುರುವಾರ ಹಾಸನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಸಂವಾದ ನಡೆಸಿ ಮಾನಾಡಿದ ಕಾಫಿ ಮಂಡಳಿಯ ಕಾರ್ಯದರ್ಶಿ ಜಗದೀಶ್ ಬೆಳೆ ಹಾನಿ ಸಮೀಕ್ಷೆ ಬಳಿಕ ರೈತರಿಗೆ ಪರಿಹಾರ ಒದಗಿಸುವಂತೆ ಸೂಚಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ; ತತ್ತರಿಸಿದ ಕಾಫಿ ಬೆಳೆಗಾರರುಹಾಸನ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ; ತತ್ತರಿಸಿದ ಕಾಫಿ ಬೆಳೆಗಾರರು

"ಮಳೆಯಿಂದಾಗಿ ಅರೇಬಿಕಾ ಕಾಫಿ ಬೆಳೆಯ ಗುಣಮಟ್ಟ ಕಡಿಮೆಯಾಗಿದ್ದು, ಶೇಕಡ 33ಕ್ಕಿಂತ ಅಧಿಕ ಪ್ರಮಾಣದಲ್ಲಿ ಹಾಳಾಗಿರುವ ಪ್ರದೇಶದಲ್ಲಿ ಕಾಫಿ ಬೋರ್ಡಿನ ಸಿಬ್ಬಂದಿಯ ಜೊತೆಗೆ ಜಿಲ್ಲಾಡಳಿತವು ವಿಶೇಷ ತಂಡವನ್ನು ರಚಿಸಿ ಸಮೀಕ್ಷೆ ನಡೆಸಿ ರೈತರಿಂದ ಅರ್ಜಿಯೊಂದಿಗೆ ಹಾಳಾಗಿರುವ ಬೆಳೆಯ ಫೋಟೋಗಳನ್ನು ಪರಿಹಾರ ಪೋರ್ಟಲ್‍ನಲ್ಲಿ ಸಲ್ಲಿಸುವಂತೆ" ತಿಳಿಸಿದರು.

ದಾವಣಗೆರೆಯಲ್ಲಿ ಮಳೆ; ಬೆಳೆ ಹಾನಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು ದಾವಣಗೆರೆಯಲ್ಲಿ ಮಳೆ; ಬೆಳೆ ಹಾನಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು

ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, "ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಕಾಫಿ ಬೆಳೆ ಸಮೀಕ್ಷೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದರು.

ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿ; ರೈತರ ಬೆಳೆ ನಾಶ ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿ; ರೈತರ ಬೆಳೆ ನಾಶ

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಮ್, ಕಾಫಿ ಮಂಡಳಿ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಯೋಗೇಶ್ ಮತ್ತಿತರರು ಹಾಜರಿದ್ದರು.

ಸಂಸದ ಪ್ರಜ್ವಲ್ ರೇವಣ್ಣ ಭೇಟಿ; ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹಾಗೂ ಬಿಕ್ಕೋಡು ಭಾಗಗಳಲ್ಲಿ ಇತ್ತೀಚಿಗೆ ಬಿದ್ದ ಭಾರೀ ಮಳೆಯಿಂದಾಗಿ ಕಾಫಿ ಬೆಳೆ ಹಾನಿಯಾಗಿರುವ ಭಾಗಗಳಿಗೆ ಭೇಟಿ ನೀಡಿ ಬೆಳೆಗಾರರ ಹಾಗೂ ಕೂಲಿ ಕಾರ್ಮಿಕರ ಸಂಕಷ್ಟದ ಕುರಿತು ಸಂಸದ ಪ್ರಜ್ವಲ್ ರೇವಣ್ಣ ಮಾಹಿತಿ ಪಡೆದರು.

ಮಳೆಯಿಂದಾಗಿ ಕೈಗೆ ಬಂದಂತ ಫಸಲು ಗಿಡದಲ್ಲೇ ಕೊಳೆಯುವಂತಹ ಪರಿಸ್ಥಿತಿ ಉಂಟಾಗಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಭಾಗವನ್ನು ರಾಷ್ಟ್ರೀಯ ವಿಪತ್ತು ಪರಿಹಾರಕ್ಕೆ ಸೇರಿಸದಿರುವುದು ದುರಾದೃಷ್ಟಕರ, ಸರ್ಕಾರ ಹಾಗೂ ಕಂದಾಯ ಇಲಾಖೆ ಸರಿಯಾಗಿ ಯಾವುದೇ ವೈಜ್ಞಾನಿಕವಾಗಿ ವರದಿಯನ್ನು ನೀಡುತ್ತಿಲ್ಲ ಎಂದರು.

ಕಾಫಿ ಬೊರ್ಡ್ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಎಸಿ ಹಾಗೂ ತಹಶೀಲ್ದಾರ್ ಅವರಿಗೆ ಇನ್ನೆರಡು ದಿನಗಳಲ್ಲಿ ಸಭೆ ಕರೆದು ಇದರ ಬಗ್ಗೆ ಗಮನ ಹರಿಸಲು ಸೂಚಿಸುತ್ತೇನೆ. ಕೇವಲ ಕಾಫಿ ಬೆಳೆಗಾರರು ಮಾತ್ರವಲ್ಲದೆ, ಕೂಲಿ ಕಾರ್ಮಿಕರು ಸಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾರ್ಮಿಕ ಇಲಾಖೆಯ ಸಹಾಯ ಪಡೆದು ನೋಂದಾಯಿತ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಯಾವುದಾದರೂ ರೀತಿಯಲ್ಲಿ ಅನುಕೂಲ ಮಾಡಿಸುವುದಾಗಿ ಸಂಸದರು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಸುರಿದ ಮಳೆ ಮಾಹಿತಿ; ಹಾಸನ ಜಿಲ್ಲೆಯಲ್ಲಿ ನವೆಂಬರ್ 17ರಂದು ಸುರಿದ ಮಳೆ ವಿವರವನ್ನು ಜಿಲ್ಲಾಡಳಿತ ನೀಡಿದೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮ 12 ಮಿ. ಮೀ, ಗೊರೂರು 6.4 ಮಿ. ಮೀ, ಸಾಲಗಾಮೆ 2 ಮಿ. ಮೀ, ಕಟ್ಟಾಯ 5.7 ಮಿ. ಮೀ, ಕಸಬಾ 10.8 ಮಿ. ಮೀ, ದುದ್ದ 10.4 ಮಿ. ಮೀ, ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಹಾನುಬಾಳು 8 ಮಿ. ಮೀ, ಮಾರನಹಳ್ಳಿ 18.2 ಮಿ. ಮೀ, ಹೊಸೂರು 18 ಮಿ. ಮೀ, ಯಸಳೂರು 42 ಮಿ. ಮೀ, ಹೆತ್ತೂರು 25.4 ಮಿ. ಮೀ ಮಳೆ ಸುರಿದಿದೆ. ಬೇಲೂರು ತಾಲ್ಲೂಕಿನ ಹಳೇಬೀಡು 55.4 ಮಿ. ಮೀ, ಹಗರೆ 27.8 ಮಿ. ಮೀ, ಅರೆಹಳ್ಳಿ 2 ಮಿ. ಮೀ, ಬಿಕ್ಕೊಡು 2.2 ಮಿ. ಮೀ, ಬೇಲೂರು 28.2 ಮಿ. ಮೀ, ಮಳೆಯಾಗಿದೆ.

ಇನ್ನು ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 8.6 ಮಿ. ಮೀ, ನುಗ್ಗೇಹಳ್ಳಿ 6.6 ಮಿ. ಮೀ, , ಶ್ರವಣಬೆಳಗೊಳ 2.1 ಮಿ. ಮೀ, ಬಾಗೂರು 21 ಮಿ. ಮೀ, ಉದಯಪುರ 7 ಮಿ. ಮೀ ಹಾಗೂ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ 76.4 ಮಿ. ಮೀ, ಹೊಳೆನರಸೀಪುರ 38.2 ಮಿ. ಮೀ, ಹಳ್ಳಿಮೈಸೂರು 45.6 ಮಿ. ಮೀ, ಮಳೆಯಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಅರಕಲಗೂಡು ತಾಲ್ಲೂಕಿನ ಕಸಬಾ 13.2 ಮಿ. ಮೀ, ಮಲ್ಲಿಪಟ್ಟಣ 35.2 ಮಿ. ಮೀ, ದೊಡ್ಡಮಗ್ಗೆ 6.8 ಮಿ. ಮೀ, ಬಸವಪಟ್ಟಣ 19.2 ಮಿ. ಮೀ, ರಾಮನಾಥಪುರ 14.2 ಮಿ. ಮೀ, ಕೊಣನೂರು 2 ಮಿ. ಮೀ, ದೊಡ್ಡಬೆಮ್ಮತ್ತಿ 16.2 ಮಿ. ಮೀ ಮಳೆಯಾಗಿದೆ.

   ಗೇಮ್ ಪ್ಲ್ಯಾನ್ ಸಕ್ಸಸ್ ಆಗಿದ್ದು ಹೇಗೆ ಅಂತಾ ಹೇಳಿದ ರೋಹಿತ್ | Oneindia Kannada

   ಅರಸೀಕೆರೆ ತಾಲ್ಲೂಕಿನ ಕಸಬಾ 9 ಮಿ. ಮೀ, ಜಾವಗಲ್ 10.2 ಮಿ. ಮೀ, ಕಣಕಟ್ಟೆ 18.2 ಮಿ. ಮೀ, ಬಾಣಾವರ 18 ಮಿ. ಮೀ, ಗಂಡಸಿ 75.8 ಮಿ. ಮೀ, ಯಳವಾರೆ 14.8 ಮಿ. ಮೀ ಮಳೆಯಾಗಿದೆ.

   English summary
   Due to untimely rain trouble for coffee harvest at Hassan. Crop damaged by rain and ordered for survey.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X