ಸಾಲಮನ್ನಾ:ಮೊದಲ ಋಣಮುಕ್ತ ಪತ್ರ ಪಡೆಯಲಿದ್ದಾರೆ ದೊಡ್ಡಬಳ್ಳಾಪುರ ರೈತರು

ಬೆಂಗಳೂರು, ಡಿಸೆಂಬರ್ 07: ಸಾಲಮನ್ನಾದ ಮೊದಲ ಋಣಮುಕ್ತ ಪತ್ರವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯ ರೈತರು ಡಿಸೆಂಬರ್ 08 ರಂದು ಪಡೆಯಲಿದ್ದಾರೆ.

ಡಿಸೆಂಬರ್ 12ನೇ ತಾರೀಖಿನಂದು ಕುಮಾರಸ್ವಾಮಿ ಅವರು ಸಾಲಮನ್ನಾ ಆದ ರೈತರಿಗೆ ಋಣಮುಕ್ತ ಪತ್ರವನ್ನು ದೊಡ್ಡಬಳ್ಳಾಪುರದಲ್ಲಿ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವು ಮುಖಂಡರು ಭಾಗವಹಿಸಲಿದ್ದಾರೆ.

ರೈತರ ಬೆಳೆ ಸಾಲಮನ್ನಾವನ್ನು ಮೊದಲಿಗೆ ಪ್ರಯೋಗಿಕವಾಗಿ ದೊಡ್ಡಬಳ್ಳಾಪುರ ಮತ್ತು ಸೇಡಂ ತಾಲ್ಲೂಕುಗಳಲ್ಲಿ ಜಾರಿಗೆ ತರಲಾಗಿತ್ತು. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ರೈತರ ಸಾಲಮನ್ನಾ ಪ್ರಕ್ರಿಯೆ ಮುಗಿದಿದೆ ಎನ್ನಲಾಗಿದ್ದು, ಹಾಗಾಗಿ ಡಿಸೆಂಬರ್ 08 ರಂದು ಋಣಮುಕ್ತ ಪತ್ರ ವಿತರಣೆ ಸಮಾರಂಭ ಆಯೋಜಿಸಲಾಗಿದೆ.

CM Kumaraswamy issuing first debt free letter on December 08

ಇತ್ತೀಚೆಗಷ್ಟೆ ರೈತರ ಸಭೆಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಡಿಸೆಂಬರ್ 8 ರಿಂದ ರಾಜ್ಯದಾದ್ಯಂತ ಎಲ್ಲೆಡೆ ಸಾಲಮನ್ನಾ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಮೊದಲ ಕಂತಾಗಿ ರಾಷ್ಟ್ರೀಯ ಬ್ಯಾಂಕುಗಳ 1 ಲಕ್ಷ ಸಾಲಮನ್ನಾ ಆಗುತ್ತದೆ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+