ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಲು ನಿರ್ಣಯ

|
Google Oneindia Kannada News

ಬೆಂಗಳೂರು, ನವೆಂಬರ್ 29; ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡುವ ಬಗ್ಗೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯುವ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳಿಸಲು ಸಮ್ಮತಿ ಸೂಚನೆ ನೀಡಲಾಗಿದೆ.

ಕಳೆದ ಐದು ತಿಂಗಳ ಹಿಂದೆ ರಿಸರ್ವ್ ಬ್ಯಾಂಕ್ ಮುಂದೆ ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘ, ಪ್ರತಿಭಟನೆ ನಡೆಸಿತ್ತು.

 ಪಿಎಂ ಕಿಸಾನ್ ಯೋಜನೆಯಡಿ ರೈತ ಫಲಾನುಭವಿಗಳ ಸಂಖ್ಯೆ 10 ಕೋಟಿ ಪಿಎಂ ಕಿಸಾನ್ ಯೋಜನೆಯಡಿ ರೈತ ಫಲಾನುಭವಿಗಳ ಸಂಖ್ಯೆ 10 ಕೋಟಿ

ಆಗ ಸಭೆ ಕರೆಯುವ ಭರವಸೆ ನೀಡಿ ಹುಸಿಗೊಳಿಸಿದ ನೀತಿಯ ವಿರುದ್ಧ ಕಳೆದ ಎಂಟು ದಿನಗಳಿಂದ ಧರಣಿ ನಡೆಸುತ್ತಿರುವ ರೈತರು ರಿಸರ್ವ್ ಬ್ಯಾಂಕ್ ಮುಂದೆ ಚಳುವಳಿ ನಡೆಸುತ್ತೇವೆ ಎಂದ ಕಾರಣ ಪೊಲೀಸ್ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರು ರೈತ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಪಾಲ್ಗೊಂಡಿದ್ದರು.

ರೈತ ಚಳವಳಿಯ ಮುಂದಿನ ದಾರಿ, ಮಾರ್ಗೋಪಾಯ ಅವಲೋಕನರೈತ ಚಳವಳಿಯ ಮುಂದಿನ ದಾರಿ, ಮಾರ್ಗೋಪಾಯ ಅವಲೋಕನ

Cibil Score Cancel For Agriculture Loan Of Farmer

ರೈತರಿಗೆ ಕೃಷಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಮಾನದಂಡ ಪರಿಗಣಿಸಬಾರದು. ಕೃಷಿ ಸಾಲಗಳಿಗೆ ನೀಡುವ ರೈತರ ಎಲ್ಲ ಸಾಲದ ಬಡ್ಡಿ ಶೇಕಡ 1ಕ್ಕೆ ಇಳಿಸಬೇಕು ದೇಶದ ಜನರಿಗೆ ಆಹಾರ ಉತ್ಪಾದನೆ ಮಾಡುವ ವಲಯವಾದ ಕಾರಣ, ಕಿಸಾನ್ ಯೋಜನೆ, ಬೆಳೆವಿಮೆ, ಹಾಲು ಮಾರಾಟ ಸಹಾಯಧನ ಇತರೆ ಸಹಾಯಧನವನ್ನು ಹಣ ಬೇರೆ ಹಳೆಯ ಸಾಲಗಳಿಗೆ ಜಮಾ ಮಾಡಬಾರದು ಎಂದು ಒತ್ತಾಯಿಸಲಾಯಿತು.

ಕುಲಾಂತರಿ ಸಾಸಿವೆಯನ್ನು ಬಹಿಷ್ಕರಿಸುವುದಾಗಿ ಹೇಳಿದ ರೈತ ಮುಖಂಡ ಕುಲಾಂತರಿ ಸಾಸಿವೆಯನ್ನು ಬಹಿಷ್ಕರಿಸುವುದಾಗಿ ಹೇಳಿದ ರೈತ ಮುಖಂಡ

ರೈತ ಮಕ್ಕಳ ವಿದ್ಯಾಭ್ಯಾಸ ಸಾಲವನ್ನು ನೀಡುವಾಗ ಪೋಷಕರ ಸಿಬಿಲ್ ಸ್ಕೋರ್, ಬಾಕಿ ಸಾಲಕ್ಕೆ ಲಿಂಕ್ ಮಾಡಬಾರದು ರೈತನ ಕೃಷಿ ಕಾರ್ಯಗಳಿಗೆ ಮನೆ ನಿರ್ಮಾಣ, ಕೃಷಿ ಉಪಕರಣಗಳ ಖರೀದಿ, ಕೃಷಿ ಗೃಹ ಕೈಗಾರಿಕೆ, ಸಾಲ ನೀಡುವಾಗ ಸಮಯಕ್ಕೆ ಸರಿಯಾಗಿ ಅಗತ್ಯಕ್ಕೆ ತಕ್ಕಷ್ಟು ಸಾಲಗಾರನ ಭೂಮಿ ಮೌಲ್ಯದ ಶೇ 70ರಷ್ಟು ಸಾಲ ಮಂಜೂರು ಮಾಡಿ ಅವರ ಅಗತ್ಯಕ್ಕೆ ತಕ್ಕಂತೆ ಸಕಾಲಕ್ಕೆ ನೀಡಬೇಕು ಎಂದು ಆಗ್ರಹಿಸಲಾಯಿತು.

ಕೃಷಿ ಉಪಕರಣಗಳಿಗೆ ನೀಡಿದ ಸಾಲಗಳಿಗೆ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳನ್ನು ಪ್ರಾರಂಭಿಸುವ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಿ ಪ್ರೋತ್ಸಾಹಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳ ಮುಂದೆ ರೈತರು ಒತ್ತಾಯಿಸಿದರು.

Cibil Score Cancel For Agriculture Loan Of Farmer

ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಕೃಷಿ ಪರಿಣಿತ, ಕನ್ನಡ ಭಾಷೆಯ ಅಧಿಕಾರಿಗಳು ಕಡ್ಡಾಯವಾಗಿ ಇರಬೇಕು. ಫಾರ್ಮ್ ಹೌಸ್ ಕೃಷಿಕರ ಮನೆ ಮತ್ತು ಕೃಷಿ ಗೋದಾಮುಗಳ ನಿರ್ಮಾಣಕ್ಕೆ ದುರಸ್ತಿ ವಿಸ್ತರಣೆ ಆದ್ಯತೆ ನೀಡಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಬೇಕು. ಕೃಷಿ ಚಟುವಟಿಕೆಗೆ ಬೆಳೆ ಸಾಲ ನೀತಿ ರೂಪಿಸುವ ಸಭೆಗಳಿಗೆ ಆಯಾ ಭಾಗದ ರೈತ ಪ್ರತಿನಿಧಿಗಳನ್ನು ಆಹ್ವಾನಿಸಿ ಸಲಹೆ ಪಡೆದು ಸಾಲನೀತಿ ರೂಪಿಸಬೇಕು ಕೋಯ್ಲೊತ್ತರ ಕೃಷಿ ಕೈಗಾರಿಕೆಗೆ, ಕೃಷಿ ಆಧಾರಿತ ಉದ್ಯೋಗ ಘಟಕಗಳಿಗೆ ವಿಶೇಷ ನೆರವು ಪ್ರೋತ್ಸಾಹ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ಕಬ್ಬು ಬೆಳೆಗಾರ ರೈತರಿಗೆ ಕಡಿಮೆ ಬಡ್ಡಿ ಸಾಲ ನೀಡಬೇಕು ಸಾಲ ಮರುಪಾವತಿ ಪಾವತಿ ಅವಧಿ 20 ತಿಂಗಳಿಗೆ ವಿಸ್ತರಿಸಬೇಕು, ಸಕ್ಕರೆ ಕಾರ್ಖಾನೆಗಳಿಂದ ಮತ್ತು ಖರೀದಿದಾರರಿಂದ ಬರುವ ಬಾಕಿ ಇದ್ದಾಗ ರೈತರಿಗೆ ಮರುಪಾವತಿಗೆ ಕಿರುಕುಳ ನೀಡದೆ, ಮುಂದಿನ ಹಂಗಾಮಿಗೆ ತುರ್ತು ಸಾಲ ನೀಡಬೇಕು. ರೈತ ಉತ್ಪಾದಕ ಸಂಸ್ಥೆಗಳಿಗೆ ನೀಡುವ ಸಾಲಗಳಿಗೆ ಬಡ್ಡಿ ಶೇ 7ಕ್ಕೆ ಇಳಿಸಬೇಕು. ಸರ್ಕಾರ ಜಾರಿಗೆ ತರುವ ಯಾವುದೇ ಕೃಷಿ ಸಾಲ ನೀತಿಗಳನ್ನು ಬ್ಯಾಂಕುಗಳ ಮುಂದೆ ಕಡ್ಡಾಯವಾಗಿ ಬಿತ್ತಿಫಲಕದಲ್ಲಿ ಪ್ರಕಟಿಸಬೇಕು ಎಂದರು.

ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ರೈತರಿಗೆ ನೀಡುವ ಸಾಲ ಮಂಜೂರು ಮಾಡುವಾಗ ಬ್ಯಾಂಕ್ ಅಧಿಕಾರಿಗಳಿಂದ ಆಗುವ ಕಿರುಕುಳ ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಲಾಯಿತು. ರೈತರ ಸಮಸ್ಯೆಗಳ ಪಟ್ಟಿ ಮಾಡಿ ಆರ್‌ಬಿಐ ಮುಖ್ಯಕಾರ್ಯ ನಿರ್ವಾಹಕ ವ್ಯವಸ್ಥಾಪಕ ಏ. ಕೆ. ಪಾಠಕ್‌ಗೆ ಒತ್ತಾಯ ಪತ್ರ ಸಲ್ಲಿಸಲಾಯಿತು.

English summary
In a meeting with chief executive manager of RBI decided to cancel CIBIL score of farmer's agriculture loan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X