ಕಲ್ಲಂಗಡಿ ಪೂರೈಕೆ ಮಾಡಲಾಗದೇ ಕಲಬುರಗಿ ರೈತ ಆತ್ಮಹತ್ಯೆ
ಕಲಬುರಗಿ, ಮಾರ್ಚ್ 31: ಕೊರೊನಾ ಸೋಂಕು ತಡೆಗಟ್ಟಲು ಇಡೀ ಭಾರತ ದೇಶವನ್ನೇ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ, ಸರಿಯಾದ ಸಮಯಕ್ಕೆ ರೈತರು ಬೆಳೆದ ಬೆಳೆಗಳು ಮತ್ತು ತರಕಾರಿಗಳ ಸರಬರಾಜು ಮಾಡಲಾಗದೇ ಪರದಾಡುತ್ತಿದ್ದಾರೆ.
Recommended Video
ಇನ್ನು ಹೆಂಗಪ್ಪಾ ನಿಮ್ಗೆ ಬುದ್ದಿ ಹೇಳೋದು ಅಂತಿದ್ದಾರೆ ಹಾಸನ್ SP | Oneindia Kannada
ರೈತನೊಬ್ಬ ತನ್ನ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣನ್ನು ಮಾರುಕಟ್ಟೆಗೆ ಸರಬರಾಜು ಮಾಡಲಾಗದೆ ನೊಂದುಕೊಂಡು ನೇಣಿಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಲಾಡ ಚಿಂಚೋಳಿ ಗ್ರಾಮದಲ್ಲಿ ನಡೆದಿದೆ.
ಚಂದ್ರಕಾಂತ ಬಿರಾದಾರ(45) ನೇಣಿಗೆ ಶರಣಾದ ರೈತ. ನಿನ್ನೆ ರಾತ್ರಿ ಜಮೀನಿನಲ್ಲಿಯೇ ನೇಣು ಹಾಕಿಕೊಂಡಿದ್ದಾನೆ. ಚಂದ್ರಕಾಂತ 3 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು.

ಆದರೆ ಲಾಕ್ ಡೌನ್ ಆದ ಹಿನ್ನೆಲೆ ಮತ್ತು ಸಾಗಾಟ ಮಾಡಲು ಸಂಚಾರ ವ್ಯವಸ್ಥೆ ಬಂದ್ ಹಿನ್ನೆಲೆ ಮನನೊಂದು ಕಲಬುರಗಿಯ ರೈತ ನೇಣಿಗೆ ಶರಣಾಗಿದ್ದಾನೆ.












Click it and Unblock the Notifications