ಬೆಳಗಾವಿ ಜಲ್ಲಿಕಲ್ಲು ಘಟಕ ಬಂದ್- ನಿರುದ್ಯೋಗ ತಾಂಡವ

stone-crushing-units-closure-in-belgaum-unemployment
ಬೆಳಗಾವಿ, ಸೆ.28: ಕಳೆದ 15 ದಿನಗಳಿಂದ ಜಿಲ್ಲೆಯಾದ್ಯಂತ ಕಲ್ಲು ಕುಟ್ಟುವ (stone-crushing) ಘಟಕಗಳಿಂದ ಕಲ್ಲು ಪುಡಿ ಮಾಡುವ ಸದ್ದು ಕೇಳಿಸುತ್ತಿಲ್ಲ. ಏಕೆಂದರೆ ಈ ಘಟಕಗಳಿಗೆ ಜಿಲ್ಲಾಡಳಿತವು ವಿದ್ಯುತ್ ಸರಬರಾಜನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಇದರಿಂದ ಪುರುಷರು ಮಹಿಳೆಯರು ಎನ್ನದೆ ಸುಮಾರು 5 ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದಾರೆ.

ಇಷ್ಟಕ್ಕೂ ಜಿಲ್ಲಾಡಳಿತ ಹೀಗೆ ಕರೆಂಟ್ ತೆಗೆದಿದ್ದಾದರೂ ಏಕೆ ಅಂದರೆ ಈ ಘಟಕಗಳು ವಿಪರೀತವಾಗಿ ಮಾಲಿನ್ಯವನ್ನುಂಟುಮಾಡುತ್ತಿವೆ. ಆದ್ದರಿಂದ ಅದನ್ನು ಬಂದ್ ಮಾಡಿ ಎಂದು ಸುಪ್ರೀಂಕೋರ್ಟ್ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ (KSPCB) ಆದೇಶ ನೀಡಿತ್ತು. ಹೀಗಾಗಿ ಮಂಡಳಿಯು ಘಟಕಗಳನ್ನು ಸಂಪೂರ್ಣವಾಗಿ ಬಂದ್ ಮಾಡಿವೆ.

ಬೆಳಗಾವಿ ಜಿಲ್ಲೆಯಾದ್ಯಂತ ಸುಮಾರು 250 ನೋಂದಾಯಿತ ಕಲ್ಲು ಪುಡಿ ಘಟಕಗಳಿವೆ. ಇದರ ಮಾಸಿಕ ವಹಿವಾಟು 2 ಕೋಟಿ ರೂ. ಗಿಂತ ಹೆಚ್ಚಾಗಿದೆ. ಇದರ ಹೊರತಾಗಿ ನೋಂದಾವಣಿಯಾಗದ ಅನಧಿಕೃತ ಘಟಕಗಳು ಸಣ್ಣ ಪ್ರಮಾಣದಲ್ಲಿ ನೂರಾರು ಇವೆ.

ಜಲ್ಲಿ ಕಲ್ಲು ಇಲ್ಲದೆ ಜಜ್ಜಿದ ನಿರ್ಮಾಣ ಉದ್ಯಮ:
ಈ ಘಟಕಗಳಲ್ಲಿ ಕೆಲಸ ಮಾಡುವ 5 ಸಾವಿರ ಮಂದಿ ಕಾರ್ಮಿಕರು ಈಗ ಕೆಲಸವಿಲ್ಲದವರಾಗಿದ್ದಾರೆ. ಅವರನ್ನು ನಂಬಿದ ಕುಟುಂಬಗಳ ಹೊಟ್ಟೆಪಾಡಿಗೆ ತ್ರಾಸವಾಗಿದೆ. ಇದೇ ವೇಳೆ, ಈ ಜಲ್ಲಿ ಕಲ್ಲನ್ನು ಅವಲಂಬಿಸಿರುವ ಕಟ್ಟಡ ನಿರ್ಮಾಣ ಉದ್ಯಮಕ್ಕೂ ಭಾರಿ ಹೊಡೆತ ಬಿದ್ದಿದೆ.

ಗಮನಾರ್ಹವೆಂದರೆ ಪಕ್ಕದಲ್ಲೇ ಇರುವ ಮಹಾರಾಷ್ಟ್ರದ ಅನೇಕ ಭಾಗಗಳನನ್ನು ಅಲ್ಲಿನ ಸರಕಾರ ಜಲ್ಲಿಕಲ್ಲು ಪುಡಿ ಘಟಕಗಳಿಗೆ ಸುರಕ್ಷಿತ ಸ್ಥಳ ಎಂದು ಗುರುತಿಸಿದೆ. ಇದರಿಂದ ಕರ್ನಾಟಕ ಈ ಗಡಿ ಭಾಗಗಳ ನಿರ್ಮಾಣಕಾರರು ಇನ್ನು ಮಹಾರಾಷ್ಟ್ರದಿಂದ ಜಲ್ಲಿ ಕಲ್ಲು ತರಿಸಿಕೊಳ್ಳಬೇಕಾಗುತ್ತದೆ. ಇದರಿಂದ ಅಲ್ಲಿನ ಸರಕಾರಕ್ಕೆ ಆದಾಯ ಹೆಚ್ಚಾಗಲಿದೆ. ಜತೆಗೆ, ಇಲ್ಲಿನ ಕಾರ್ಮಿಕರೂ ಅಲ್ಲಿಗೆ ಗುಳೆ ಹೋಗುವ ಪ್ರಸಂಗ ಉದ್ಭವವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+