ರೈತರ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವ ನೈತಿಕತೆಯೂ ಇಲ್ಲ: ಪರಮೇಶ್ವರ
ತುಮಕೂರು, ನವೆಂಬರ್ 21: ರೈತರ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವ ನೈತಿಕ ಹಕ್ಕಿಲ್ಲ ಎಂದು ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರೈತರ ಸಮಸ್ಯೆ ಎಂದು ಕೇಂದ್ರದ ಬಳಿ ತೆರಳಿದಾಗ ಅವರು ಯಾವುದೇ ರೀತಿ ಸ್ಪಂದಿಸಿರಲಿಲ್ಲ ಇದೀಗ ಕಬ್ಬು ಬೆಳಗಾರರ ಪರ ಇದ್ದೇವೆ ಎಂದು ಪ್ರತಿಭಟನೆ ಮಾಡಿದ್ದಾರೆ ಎಂದರು.
ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್‌ಆರ್‌ಪಿ ಬೆಲೆ ಏರುಪೇರಾಗುತ್ತದೆ. ಅದರ ಮೇಲೆ ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ಬೆಲೆ ನಿಗದಿಪಡಿಸುತ್ತಾರೆ. ಕೆಲವು ಸಂದರ್ಭ ಎಫ್ಆರ್‌ಪಿ ಬೆಲೆಗಿಂತಾ ಹೆಚ್ಚು ಸಿಗುತ್ತದೆ, ಕಡಿಮೆಯೂ ಸಿಗುತ್ತದೆ ಎಂದರು.

ಕಾರ್ಖಾನೆಗಳು ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳಂತೆ ನಡೆದುಕೊಳೊಳ್ಳುವುದಿಲ್ಲ. ರೈತರಿಗೆ ಸಹಾಯ ಮಾಡಲೆಂದು ಕಾರ್ಖಾನೆಗಳಿಗೆ ಸರ್ಕಾರ ಹಣ ನೀಡಿದೆ ಎಂದು ಹೇಳಿದರು.
ಕಬ್ಬು ಬೆಳಗಾರರಿಗೆ ಹಲವು ಕಾರ್ಖಾನೆಗಳು ಬಾಕಿ ಹಣವನ್ನು ನೀಡಬೇಕಾಗಿದೆ, ಜೊತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ರೈತ ಮಹಿಳೆಯ ಬಳಿ ಹೇಳಿರುವ ಹೇಳಿಕೆ ವಿರುದ್ಧವಾಗಿ ಬಿಜೆಪಿ ಪ್ರತಿಭಟನೆ ನಡೆಸಿದೆ.












Click it and Unblock the Notifications