ಬೆಳೆ ವಿಮೆ ನೋಂದಣಿಯಲ್ಲಿ ರಾಜ್ಯದಲ್ಲಿಯೇ ಬೀದರ್ ನಂ.1
ಬೀದರ್, ಜನವರಿ 03: ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪಟ್ಟಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂತ ಹಿಂದಿರುವ ಜಿಲ್ಲೆ ಎಂದು ಬಿಂಬಿಸಿಕೊಂಡಿರುವ ಬೀದರ್, ಬೆಳೆ ವಿಮೆ ನೋಂದಣಿಯಲ್ಲಿ ರಾಜ್ಯದಲ್ಲಿಯೇ ನಂಬರ್ ಸ್ಥಾನ ಪಡೆದುಕೊಂಡಿದೆ.
ಬೆಳೆ ವಿಮೆ ನೋಂದಣಿಯಲ್ಲಿ ಬೀದರ್ ಜಿಲ್ಲೆ ಈ ಬಾರಿಯೂ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. 2017-18ರ ಪ್ರಸಕ್ತ ಮುಂಗಾರಿಗೆ ಜಿಲ್ಲೆಯಲ್ಲಿ 1,80,239 ಜನ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ಕೆ ಕೇಂದ್ರ ಸರ್ಕಾರ ಕೂಡ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಕೃಷಿ ಭಾಗ್ಯ" ಯೋಜನೆಯಡಿ 2013-14ರಿಂದ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ಒಟ್ಟು 2311 ಕೃಷಿ ಹೊಂಡಗಳು ಹಾಗೂ 30 ಪಾಲಿಹೌಸ್ ಗಳ ನಿರ್ಮಾಣ ಪೂರ್ಣಗೊಂಡಿದೆ.
ಹಾಗೂ ಈ ಸಾಲಿನಲ್ಲಿ "ಕೃಷಿ ಭಾಗ್ಯ" ಯೋಜನಾ ವ್ಯಾಪ್ತಿಗೆ 5 ತಾಲೂಕುಗಳು ಸೇರಿದ್ದು, ಅದರ ಯೋಜನಾ ಮೊತ್ತ 2143.57 ಲಕ್ಷರೂ ಆಗಿದೆ. 2311 ಜನರು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೀದರ್ ನಲ್ಲಿ ನಡೆದ ನವ ಕರ್ನಾಟಕ ನಿರ್ಮಾಣ ಯಾತ್ರೆಯಲ್ಲಿ ಹೇಳಿದ್ದರು.












Click it and Unblock the Notifications