ಈ ಬಾರಿ ಮುಂಗಾರು ಕ್ಷೀಣ, ಜೂನ್ 08ಕ್ಕೆ ರಾಜ್ಯಕ್ಕೆ ಪ್ರವೇಶ

ನವದೆಹಲಿ, ಮೇ 14: ಈ ಬಾರಿಯ ಮಳೆಗಾಲ ಸಾಮಾನ್ಯವಾಗಿರಲಿದ್ದು, ಮುಂಗಾರು ಮಾರುತ ಜೂನ್ 04ಕ್ಕೆ ಕೇರಳವನ್ನು ಪ್ರವೇಶಿಸಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಹೇಳಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮೇ 22 ಕ್ಕೆ ಮುಂಗಾರು ಮಾರುತವು ಅಂಡಮಾನ್ ನಿಕೋಬಾರ್‌ಗೆ ಪ್ರವೇಶಿಸಲಿದೆ, ನಂತರ ಕೇರಳಕ್ಕೆ ಬರಲಿದ್ದು, ಜೂನ್ 7-8 ರ ಸುಮಾರಿಗೆ ಕರ್ನಾಟಕ ಪ್ರವೇಶಿಸುವ ನಿರೀಕ್ಷೆ ಇದೆ. ಜೂನ್ 29 ರ ವೇಳೆಗೆ ದೆಹಲಿಯು ಮುಂಗಾರಿನಲ್ಲಿ ನೆನಯಲಿದೆ.

ದಕ್ಷಿಣ, ಪೂರ್ವ, ಉತ್ತರ, ಪಶ್ಚಿಮ ಭಾರತದೆಲ್ಲೆಡೆ ಈ ಮಾರುತ ಪರಿಣಾಮ ಬೀರಲಿದ್ದು, ಎಲ್ಲೆಡೆ ಈ ಬಾರಿ ಸಾಮಾನ್ಯಕ್ಕಿಂತಲೂ ಕಡಿಮೆ ಮಳೆ ಆಗಲಿದೆ ಎಂದು ಸ್ಕೈಮೇಟ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ಕೃಷಿಗೆ ಮುಂಗಾರು ಮಾರುತ ಅತ್ಯಂತ ಅವಶ್ಯಕವಾಗಿದ್ದು, ಸ್ಕೈಮೆಟ್‌ನ ಈ ವರದಿ ರೈತರಲ್ಲಿ ಆತಂಕ ತರುವಂತಿದೆ.

Below normal mansoon this time in India, Mansoon will arrive on June 04

ಕಳೆದ ವರ್ಷದ ಮುಂಗಾರಿಗೆ ಹೋಲಿಸಿದಲ್ಲಿ 50-70% ಪ್ರತಿಶತವಷ್ಟೆ ಈ ಬಾರಿ ಮಳೆ ಬೀಳಲಿದೆ ಎಂದು ಸ್ಕೈಮೆಟ್ ಹೇಳಿದೆ. ಉತ್ತರ ಕೆಲವು ಭಾಗಗಳಲ್ಲಿ 50% ಕ್ಕಿಂತಲೂ ಕಡಿಮೆ ವಾಡಿಕೆ ಮಳೆ ಆಗಲಿದೆ.

ಈಗಾಗಲೇ ಬರದಿಂದ ತತ್ತರಿಸಿರುವ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶಗಳು, ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿತ್ತು, ಆದರೆ ಸ್ಕೈಮೆಟ್‌ನ ಈ ಹವಾಮಾನ ವರದಿ ಬರ ಇನ್ನಷ್ಟು ತೀವ್ರವಾಗುವ ಮುನ್ಸೂಚನೆಯನ್ನು ನೀಡಿದೆ.

ಕರಾವಳಿ ಕರ್ನಾಟಕಕ್ಕೆ ಹೋಲಿಸಿದಲ್ಲಿ, ಉತ್ತರ ಕರ್ನಾಟಕದಲ್ಲಿ ಕಡಿಮೆ ಮಳೆ ಆಗಲಿದೆ. ಈ ಬಾರಿ ಮುಂಗಾರು ಕ್ಷೀಣಿಸಲು ಎಲ್ ನಿನೋ ಪ್ರಭಾವದಿಂದಾಗಿ ಈ ಬಾರಿ ಮಳೆ ಕಡಿಮೆ ಆಗಲಿದೆ ಎಂದು ಸ್ಕೈಮೆಟ್ ಹವಾಮಾನ ಮುನ್ಸೂಚನೆ ಸಂಸ್ಥೆಯ ಮುಖ್ಯಸ್ಥ ಯತೀಶ್ ಸಿಂಗ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+