ನೆರೆ ನೆರವಿಗೆ ಮುಂದಾದ ಬ್ಯಾಂಕ್ ಗಳು

Yeddyurappa
ಬೆಂಗಳೂರು, ಅ. 16 : ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ಥರ ಮನೆ ನಿರ್ಮಾಣಕ್ಕೆ ಶೇ. 4ರ ಬಡ್ಡಿ ದರದಲ್ಲಿ 50 ಸಾವಿರ ರುಪಾಯಿ ಸಾಲ, ಕೃಷಿಕರಿಗೆ ಹೊಸ ಸಾಲ ವಿತರಣೆಗೆ ಹಳ್ಳಿಗಳಲ್ಲಿಯೇ ಸಾಲ ಶಿಬಿರ, ಹಾಲಿ ಇರುವ ಸಾಲ ವಸೂಲಿ ಮುಂದೂಡಿಕೆ ಮತ್ತು ಸಾಲಗಳ ಅವಧಿಯನ್ನು ಪರಿವರ್ತಿಸಲು ಗುರುವಾರ ನಡೆದ ರಾಜ್ಯ ಮಟ್ಟದ ಬ್ಯಾಂಕರ್ಸ್ ಗಳ ಸಮಿತಿ ನಿರ್ಣಯ ಕೈಗೊಂಡಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನೆರೆ ಪೀಡಿತ ಪರಿಹಾರ ಕ್ರಮಗಳ ಬಗ್ಗೆ ನಡೆದ ವಿಶೇಷ ಸಭೆಯಲ್ಲಿ ಈ ಮಹತ್ವದ ತೀರ್ಮಾನಕ್ಕೆ ಬರಲಾಗಿದೆ. ಜೊತೆಗೆ ಎಲ್ಲಾ ಬ್ಯಾಂಕ್ ಗಳ ನೌಕರರು ತಮ್ಮ ಒಂದು ದಿನದ ವೇತನವನ್ನು ದೇಣಿಗೆ ನೀಡಲು ಸಮ್ಮತಿಸಿದ್ದಾರೆ. ರೈತರು ಮತ್ತೆ ಕೃಷಿ ಕಾರ್ಯ ಆರಂಭಿಸಲು ತಕ್ಷಣ ಅವರಿಗೆ ಬಿತ್ತನೆ ಬೀಜ, ಗೊಬ್ಬರದ ಜೊತೆಗೆ ಕೃಷಿ ಕೆಲಸಗಳಿಗೆ ಅಗತ್ಯ ಸಾಲ ಒದಗಿಸಬೇಕಾಗಿದೆ. ಈ ಹಿಂದೆ ಪಡೆದಿದ್ದ ಸಾಲವನ್ನು ಸದ್ಯಕ್ಕೆ ವಸೂಲಿ ಮಾಡಬಾರದು ಎಂಬ ಮುಖ್ಯಮಂತ್ರಿಗಳ ಮನವಿಗೆ ಎಲ್ಲ ಬ್ಯಾಂಕುಗಳು ಒಪ್ಪಿವೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅಲ್ಪಾವಧಿ ಸಾಲವನ್ನು ಮಧ್ಯಮಾವಧಿ, ಮಧ್ಯಮಾವಧಿ ಸಾಲವನ್ನು ದೀರ್ಘಾವಧಿ ಸಾಲಗಳನ್ನಾಗಿ ಪರಿವರ್ತಿಸಲು ಬ್ಯಾಂಕ್ ಗಳು ಸಮ್ಮತಿಸಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಲ ಪಾವತಿಗೆ ಒತ್ತಾಯಿಸದಿರಲು ಒಪ್ಪಿಕೊಂಡಿವೆ ಎಂದು ಅವರು ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+