ದಂಡಾವತಿ ಯೋಜನೆ : ಬಂ, ಗೌಡ ಜುಗಲಬಂಧಿ
ಬೆಂಗಳೂರು,
ಫೆ. 9 : ನೈಸ್ ನಂತರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನಡುವಿನ ಸಮರಕ್ಕೆ ದಂಡಾವತಿ ನೀರಾವರಿ ಯೋಜನೆ ವೇದಿಕೆ ಒದಗಿಸಿದ್ದು, ದಂಡಾವತಿ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರೊಂದಿಗೆ ಗೌಡರು ಕೈಜೋಡಿಸಿರುವುದು ವಿಶೇಷ. id="toptextpromo">ಈ
ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದರೆ, ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಮಾಜಿ ಸಿಎಂ ಬಂಗಾರಪ್ಪಗೆ ಮಾಜಿ ಪಿಎಂ ದೇವೇಗೌಡರು ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಸರಕಾರ ಪ್ರತಿಷ್ಠೆಯಾಗಿ ಪರಿಗಣಿಸಿರುವ ಶಿವಮೂಗ್ಗ ಜಿಲ್ಲೆ ದಂಡಾವತಿ ಯೋಜನೆ ವಿರುದ್ಧ ಹೋರಾಡಲು ದೇವೇಗೌಡರು ಇದೇ 16ರಂದು ಅಧಿಕೃತವಾಗಿ ಕಣಕ್ಕಿಳಿಯಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜಿಲ್ಲೆಯ
ಸೊರಬಕ್ಕೆ ಕುಡಿಯುವ ನೀರು ಮತ್ತು ಸುತ್ತಮುತ್ತಲಿನ ಪ್ರದೇಶದ ಕೃಷಿ ಭೂಮಿಗೆ ನೀರು ಒದಗಿಸುವ ಈ ಯೋಜನೆಯನ್ನು ಕಾರ್ಯಗತಗೊಳಿಸುವುದು ಅನಿವಾರ್ಯ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಆದರೆ, ನೂರಾರು ಕುಟುಂಬಗಳು ಬೀದಿ ಪಾಲಾಗುವ ಯೋಜನೆಯೇ ಬೇಡ ಎಂದು ಬಂಗಾರಪ್ಪ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಅನೇಕ ವರ್ಷಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.











Click it and Unblock the Notifications