Arecanut Price: ಸ್ಥಿರತೆ ಕಾಯ್ದುಕೊಂಡ ಅಡಿಕೆ ಧಾರಣೆ: ಕೊಬ್ಬರಿ ಬೆಲೆ ಹೇಗಿದೆ ತಿಳಿಯಿರಿ
ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಎನ್ನುವಂತಾಗಿದೆ ಅಡಿಕೆ ಧಾರಣೆ. ಈ ಬಾರಿ ಅಡಿಕೆ ಧಾರಣೆ ಏರಿಕೆ ಕಾಣದೇ ಇದ್ದರೂ ಪಾತಾಳಕ್ಕೆ ಕುಸಿದಿಲ್ಲ ಎನ್ನುವ ಸಮಾಧಾನ ಅಡಿಕೆ ಬೆಳೆಗಾರರಲ್ಲಿ ಇದೆ. ಅಲ್ಪ ಪ್ರಮಾಣದಲ್ಲಿ ಏರಿಳಿತ ಕಾಣುತ್ತಿದೆಯಾದರೂ, ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಎಲೆ ಚುಕ್ಕಿ ರೋಗ, ಅನಿಶ್ಚಿತ ಮಳೆಯಿಂದಾಗಿ ಇಳುವರಿ ಕಡಿಮೆಯಾದರೂ ಹೆಚ್ಚಿನ ಬೆಲೆ ಸಿಗದ ಕಾರಣ ರೈತರು ಹೆಚ್ಚಿನ ಲಾಭ ನೋಡಲು ಆಗದೆ ನಿರಾಸೆ ಅನುಭವಿಸಿದ್ದಾರೆ. ಡಿಸೆಂಬರ್ 11ರಂದು ಸೋಮವಾರ ರಾಶಿ, ಬೆಟ್ಟೆ, ಸರಕು ಸೇರಿದಂತೆ ವಿವಿಧ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ.

ಡಿಸೆಂಬರ್ 11ರಂದು ವಿವಿಧ ಮಾರುಕಟ್ಟೆಗಳಲ್ಲಿ ಕನಿಷ್ಠ 30,000 ರೂಪಾಯಿಗಳಿಂದ 48,000 ರೂಪಾಯಿವರೆಗೆ ಮಾರಾಟವಾಗಿದೆ. ದಾವಣಗೆರೆ, ಪಾವಗಡ, ತುಮಕೂರು, ಶಿವಮೊಗ್ಗ, ಸಾಗರ, ಹೊನ್ನಳ್ಳಿ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ.
ಚನ್ನಗಿರಿಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹41,229 ಇದ್ದರೆ ಗರಿಷ್ಠ ₹47,585 ಮಾರಾಟವಾಗಿದೆ. ದಾವಣಗೆರೆಯಲ್ಲಿ ಕನಿಷ್ಠ ₹41,229 ಗರಿಷ್ಠ ₹47,585 ಮೊತ್ತಕ್ಕೆ ಮಾರಾಟವಾಗಿದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ ದರ ₹28,069-₹48,009 ಇದ್ದರೆ, ಸರಕು ದರ ₹57,619-₹73,159 ಮಾರಾಟವಾಗಿದೆ. ಗೋಣಿಕೊಪ್ಪಲು ಮಾರುಕಟ್ಟೆಯಲ್ಲಿ ಸಿಪ್ಪೆ ಅಡಿಕೆ ಧಾರಣೆ ₹5000 ದಂತೆ ಮಾರಾಟವಾಗಿದೆ.
ಡಿಸೆಂಬರ್ 11 ರಂದು ಅಡಿಕೆ ಬೆಲೆ(ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಚನ್ನಗಿರಿ | ರಾಶಿ | ₹41,229 | ₹47,585 | ₹47,055 |
| 2 | ದಾವಣಗೆರೆ | ರಾಶಿ | ₹44,510 | ₹46,369 | ₹45,440 |
| 3 | ಬಂಟ್ವಾಳ | ಕೋಕಾ | ₹15,000 | ₹27,500 | ₹23,500 |
| 4 | ಗೋಣಿಕೊಪ್ಪಲು | ಅಡಿಕೆ-ಸಿಪ್ಪೆ | ₹5,000 | ₹5,000 | ₹5,000 |
| 5 | ಹೊನ್ನಳ್ಳಿ | ರಾಶಿ | ₹46,899 | ₹46,899 | ₹46,899 |
| 6 | ಹೊನ್ನಾವರ | ಹಳೆ ಚಾಲಿ | ₹36,000 | ₹39,000 | ₹37,800 |
| 7 | ಕಾರ್ಕಳ | ಹೊಸ ವೆರೈಟಿ | ₹25,000 | ₹36,500 | ₹30,000 |
| 8 | ಕಾರ್ಕಳ | ಹಳೆಯ ವೆರೈಟಿ | ₹30,000 | ₹46,000 | ₹40,000 |
| 9 | ಕುಮಟಾ | ಚಿಪ್ಪು | ₹26,089 | ₹34,509 | ₹33,269 |
| 10 | ಕುಮಟಾ | ಹೊಸ ಚಾಲಿ | ₹33,019 | ₹35,099 | ₹34,349 |
| 11 | ಪಾವಗಡ | ಕೆಂಪು | ₹40,000 | ₹42,000 | ₹40,260 |
| 12 | ಸಾಗರ | ಚಾಲಿ | ₹33,689 | ₹38,709 | ₹37,899 |
| 13 | ಸಾಗರ | ಕೆಂಪು ಗೋಟು | ₹26,989 | ₹35,799 | ₹34,499 |
| 14 | ಸಾಗರ | ರಾಶಿ | ₹36,899 | ₹47,619 | ₹46,899 |
| 15 | ಶಿವಮೊಗ್ಗ | ಬೆಟ್ಟೆ | ₹45,100 | ₹51,200 | ₹49,559 |
| 16 | ಶಿವಮೊಗ್ಗ | ರಾಶಿ | ₹28,069 | ₹48,009 | ₹47,358 |
| 17 | ಶಿವಮೊಗ್ಗ | ಸರಕು | ₹57,619 | ₹73,159 | ₹61,319 |
| 18 | ಸಿದ್ದಾಪುರ | ಬಿಳೆ ಗೊಟು | ₹33,189 | ₹33,909 | ₹33,889 |
| 19 | ಸಿದ್ದಾಪುರ | ಚಾಲಿ | ₹38,049 | ₹39,139 | ₹38,399 |
| 20 | ಸಿದ್ದಾಪುರ | ರಾಶಿ | ₹46,539 | ₹46,749 | ₹46,699 |
| 21 | ಶಿರಸಿ | ಚಾಲಿ | ₹37,299 | ₹39,661 | ₹38,237 |
| 22 | ಶಿರಸಿ | ರಾಶಿ | ₹44,608 | ₹47,039 | ₹46,205 |
| 23 | ತುಮಕೂರು | ರಾಶಿ | ₹44,500 | ₹46,100 | ₹45,500 |
| 24 | ಯಲ್ಲಾಪುರ | ಅಪಿ | ₹53,479 | ₹53,479 | ₹53,479 |
| 25 | ಯಲ್ಲಾಪುರ | ರಾಶಿ | ₹43,809 | ₹52,565 | ₹49,899 |
ಕೊಬ್ಬರಿ ಕಥೆಯೂ ಅದೆ!
ಇನ್ನು ಅಡಿಕೆಯಂತೆ ಕೊಬ್ಬರಿ ಕೂಡ ಯಥಾಸ್ಥಿತಿ ಕಾಯ್ದುಕೊಂಡಿದೆ, 10 ಸಾವಿರ ದಾಟದಿದ್ದರೂ 6 ಕ್ಕೆ ಕುಸಿದಿಲ್ಲ ಎನ್ನುವುದು ರೈತರಿಗೆ ಸಮಾಧಾನದ ಸಂಗತಿಯಾಗಿದೆ. ಸೋಮವಾರ ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ದರ ₹7800 ಇದ್ದರೆ, ಬೆಂಗಳೂರಿನಲ್ಲಿ ₹8,500-₹11,000 ನಡುವೆ ಮಾರಾಟವಾಗಿದೆ.
ತುಮಕೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹7,450 ಇದ್ದರೆ, ಗರಿಷ್ಠ ₹8,120 ಕ್ಕೆ ಮಾರಾಟವಾಗಿದೆ. ತಿಪಟೂರು ಮಾರುಕಟ್ಟೆಯಲ್ಲಿ ಡಿಸೆಂಬರ್ 9ರ ಮಾರುಕಟ್ಟೆಯಲ್ಲಿ ₹7,200-₹8,200 ನಡುವೆ ಧಾರಣೆಯಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹7,800 | ₹7,800 | ₹7,800 |
| 2 | ಬೆಂಗಳೂರು | ಕೊಬ್ಬರಿ | ₹8,500 | ₹11,000 | ₹9,750 |
| 3 | ತುಮಕೂರು | ಕೊಬ್ಬರಿ | ₹7,450 | ₹8,120 | ₹7,850 |
| 4 | ತುರುವೇಕೆರೆ | ಕೊಬ್ಬರಿ | ₹7,800 | ₹7,900 | ₹7,800 |
| 5 | ತಿಪಟೂರು | ಕೊಬ್ಬರಿ | ₹7,200 | ₹8,200 | ₹7,800 |












Click it and Unblock the Notifications