Arecanut Price: ಭರ್ಜರಿ ಏರಿಕೆ ಕಂಡ ಅಡಿಕೆ ಬೆಲೆ
ಕಳೆದ ಒಂದು ವಾರದಿಂದ ಸ್ಥಿರವಾಗಿದ್ದ ಅಡಿಕೆ ಬೆಲೆ ಮತ್ತೆ ಏರಿಕೆ ಕಂಡಿದೆ. ರಾಶಿ ಅಡಿಕೆ ಧಾರಣೆ ₹55,000 ಮುಟ್ಟುವ ಸನಿಹದಲಿದ್ದು, ಮುಂದಿನ ವಾರ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.
ಎರಡು ವಾರದ ಮೊದಲೇ ₹55,000 ಸನಿಹಕ್ಕೆ ತಲುಪಿದ್ದ ಅಡಿಕೆ ಧಾರಣೆ ಮತ್ತೆ ಇಳಿಕೆ ಕಂಡಿತ್ತು. ಬಳಿಕ ₹53,000 ಆಸುಪಾಸಿನಲ್ಲಿದ್ದ ಬೆಲೆ ಈಗ ಮತ್ತೆ ಏರಿಕೆಯ ಹಾದಿಯಲ್ಲಿದ್ದು, ಅಡಿಕೆ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.

ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ ₹33,080 ಇದ್ದರೆ ಗರಿಷ್ಠ ₹54,099 ಆಗಿತ್ತು. ಯಲ್ಲಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ ₹44,899 ಇದ್ದರೆ ಗರಿಷ್ಠ ₹54,619 ಆಗಿದೆ.
ಭದ್ರಾವತಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಠ ₹30,099 ಇದ್ದರೆ ಗರಿಷ್ಠ ₹53,599 ಆಗಿದೆ. ಶಿವಮೊಗ್ಗದಲ್ಲಿ ಸರಕು ಅಡಿಕೆ ಧಾರಣೆ ಕನಿಷ್ಠ ₹54,099 ಇದ್ದರೆ ಗರಿಷ್ಠ ₹75,009 ಆಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬಂಟ್ವಾಳ | ಕೋಕಾ | ₹18,000 | ₹28,500 | ₹23,500 |
| 2 | ಬಂಟ್ವಾಳ | ಹೊಸ ವೆರೈಟಿ | ₹28,500 | ₹38,000 | ₹34,500 |
| 3 | ಭದ್ರಾವತಿ | ರಾಶಿ | ₹30,099 | ₹53,599 | ₹50,385 |
| 4 | ಕುಮಟಾ | ಕೋಕಾ | ₹14,019 | ₹26,019 | ₹24,369 |
| 5 | ಕುಮಟಾ | ಚಿಪ್ಪು | ₹27,059 | ₹30,569 | ₹29,579 |
| 6 | ಕುಮಟಾ | ಫ್ಯಾಕ್ಟರಿ | ₹11,569 | ₹20,829 | ₹18,989 |
| 7 | ಪುತ್ತೂರು | ಹೊಸ ವೆರೈಟಿ | ₹26,500 | ₹38,000 | ₹33,000 |
| 8 | ಶಿವಮೊಗ್ಗ | ಬೆಟ್ಟೆ | ₹43,366 | ₹55,129 | ₹53,099 |
| 9 | ಶಿವಮೊಗ್ಗ | ಸರಕು | ₹54,099 | ₹75,009 | ₹66,419 |
| 10 | ಶಿವಮೊಗ್ಗ | ಗೊರಬಲು | ₹20,000 | ₹35,272 | ₹33,899 |
| 11 | ಶಿವಮೊಗ್ಗ | ರಾಶಿ | ₹33,080 | ₹54,099 | ₹53,599 |
| 12 | ಸಿದ್ದಾಪುರ | ಬಿಳೆ ಗೊಟು | ₹28,789 | ₹32,509 | ₹30,409 |
| 13 | ಸಿದ್ದಾಪುರ | ಕೆಂಪು ಗೋಟು | ₹28,800 | ₹29,399 | ₹28,899 |
| 14 | ಸಿದ್ದಾಪುರ | ಕೋಕಾ | ₹26,219 | ₹30,909 | ₹27,819 |
| 15 | ಸಿದ್ದಾಪುರ | ರಾಶಿ | ₹43,999 | ₹49,909 | ₹49,439 |
| 16 | ಶಿರಸಿ | ಬೆಟ್ಟೆ | ₹35,299 | ₹46,001 | ₹39,727 |
| 17 | ಶಿರಸಿ | ರಾಶಿ | ₹45,599 | ₹49,489 | ₹47,937 |
| 18 | ಯಲ್ಲಾಪುರ | ಅಪಿ | ₹58,469 | ₹58,469 | ₹58,469 |
| 19 | ಯಲ್ಲಾಪುರ | ತಟ್ಟಿ ಬೆಟ್ಟೆ | ₹35,100 | ₹44,520 | ₹41,600 |
| 20 | ಯಲ್ಲಾಪುರ | ರಾಶಿ | ₹44,899 | ₹54,619 | ₹49,869 |
| 21 | ಚನ್ನಗಿರಿ | ರಾಶಿ | ₹49,256 | ₹54,821 | ₹53,414 |
ಕೊಬ್ಬರಿ ದರ ಹೇಗಿದೆ?
ರಾಜ್ಯದಲ್ಲಿ ಕೊಬ್ಬರಿ ಬೆಲೆ ಆರಕ್ಕೇರದೆ, ಮೂರಕ್ಕಿಳಿಯದ ಸ್ಥಿತಿಯಲ್ಲಿದೆ. ಹಲವು ತಿಂಗಳಿನಿಂದ ತೆಂಗು ಬೆಳೆಗಾರರು ಕೊಬ್ಬರಿ ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದರೂ, ₹10,000 ಗಡಿಯನ್ನು ದಾಟುವುದು ಕೂಡ ಕಷ್ಟವಾಗಿದೆ.
ಶುಕ್ರವಾರ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕನಿಷ್ಠ ₹8600 ಇದ್ದರೆ ಗರಿಷ್ಠ ₹9,300 ಇತ್ತು. ಅರಸಿಕೆರೆ ಮಾರುಕಟ್ಟೆಯಲ್ಲಿ ಕನಿಷ್ಠ ₹8000 ಇದ್ದರೆ ಗರಿಷ್ಠ ಧಾರಣೆ ₹8810 ಆಗಿತ್ತು.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹8,000 | ₹8,810 | ₹8,460 |
| 2 | ಅರಸೀಕೆರೆ | ಬೇರೆ | ₹6,600 | ₹6,600 | ₹6,600 |
| 3 | ತಿಪಟೂರು | ಕೊಬ್ಬರಿ | ₹8,600 | ₹9,300 | ₹8,900 |
| 4 | ಮಳವಳ್ಳಿ | ಕೊಬ್ಬರಿ | ₹9,000 | ₹9,000 | ₹9,000 |
| 5 | ದಾವಣಗೆರೆ | ಕೊಬ್ಬರಿ | ₹6,900 | ₹7,800 | ₹7,350 |
| 6 | ನಾಗಮಂಗಲ | ಮಧ್ಯಮ | ₹6,800 | ₹8,700 | ₹6,800 |












Click it and Unblock the Notifications