ರೈತರ ಎಲ್ಲಾ ಸಾಲಗಳ ಮನ್ನಾ ಅರ್ಥಹೀನ ಎಂದರೇಕೆ ದೇವೇಗೌಡರು?

Recommended Video

      ರೈತರ ಸಾಲ ಮನ್ನಾ ಬಗ್ಗೆ ಎಚ್ ಡಿ ದೇವೇಗೌಡ್ರು ಈ ರೀತಿ ಹೇಳಿಕೆ ಕೊಡಲು ಕಾರಣ? | Oneindia Kannada

      ಬೆಂಗಳೂರು, ನವೆಂಬರ್ 18: ಬೆಳೆ ಸಾಲ ಮಾತ್ರವಲ್ಲ, ಇತರೆ ಸಾಲಗಳನ್ನೂ ಒಳಗೊಂಡಂತೆ ರೈತರ ಎಲ್ಲ ಸಾಲಗಳನ್ನೂ ಸಂಪೂರ್ಣ ಮನ್ನಾ ಮಾಡಬೇಕೆಂಬ ಬೇಡಿಕೆ ಅರ್ಥಹೀನ ಆಗಬಹುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಎಚ್ಚರಿಸಿದರು.

      ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ರೈತರ ಬೆಳೆ ಸಾಲ ಮನ್ನಾ ಮಾಡುವ ಮುನ್ನ ಯಾವುದೇ ಸರಕಾರ ತನ್ನ ಸಂಪನ್ಮೂಲವನ್ನು ಕ್ರೋಡೀಕರಿಸುವತ್ತಲೂ ಗಮನ ಹರಿಸಬೇಕಾಗುತ್ತದೆ. ಕೇವಲ ತೆರಿಗೆದಾರರ ಮೇಲೆ ಹೊರೆ ಹೊರಿಸಲು ಸಾಧ್ಯವಿಲ್ಲ ಹಾಗೂ ಅದು ಸಾಧುವೂ ಅಲ್ಲ ಎಂದು ಅಭಿಪ್ರಾಯಪಟ್ಟರು.

      ಸಾಲ ಮನ್ನಾ ಮಾಡಲು ಮೊದಲನೆಯದಾಗಿ ಕೇಂದ್ರ ಸರಕಾರದ ನೆರವು ಪಡೆಯಲು ಪ್ರಯತ್ನಿಸಬಹುದು. ಇಲ್ಲವಾದಲ್ಲಿ ಎ. ಟಿ. ರಾಮಸ್ವಾಮಿ ಅವರ ವರದಿಯನ್ನು ಆಧರಿಸಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಜ್ಯ ಸರಕಾರವು ವಶಪಡಿಸಿಕೊಂಡಿರುವ ಐವತ್ತು ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಮಾರಾಟ ಮಾಡಿ, ಸಂಪನ್ಮೂಲ ಸಂಗ್ರಹಿಸುವತ್ತ ಚಿಂತನೆ ನಡೆಸಬಹುದು ಎಂದರು.

      All farmer loan waivers are meaning less: HD Deve Gowda

      ಆತ್ಮಹತ್ಯೆ ತಡೆಗೆ ಸಾಲ ಮನ್ನಾ ಪರಿಹಾರ ಆಗುವುದಿಲ್ಲ. ಎಲ್ಲರಿಗೂ ಅನ್ನ ಕೊಡುವ ರೈತ ಯಾವುದೇ ಕಾರಣಕ್ಕೂ ಅಧೀರನಾಗಬಾರದು. ರೈತ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಕಳಕಳಿಯ ಮನವಿ ಮಾಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+