ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ: ಕೃಷಿ ಸಚಿವ ಬಿಸಿ ಪಾಟೀಲ್

|
Google Oneindia Kannada News

ಬೆಂಗಳೂರು, ಮೇ 9: ಕೃತಕವಾಗಿ ಯಾರಾದರೂ ರಸಗೊಬ್ಬರ, ಬಿತ್ತನೆ ಬೀಜ ಅಭಾವ ಸೃಷ್ಟಿಸಿದರೆ ಅಂತವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.

ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಕಾಲಕ್ಕೆ ರಸಗೊಬ್ಬರ ಬಿತ್ತನೆಬೀಜ ಕೊರತೆಯಾಗದಂತೆ ಹಂತಹಂತವಾಗಿ ನೋಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತನಿಗೆ ತೊಂದರೆಯಾಗಲು ಬಿಡುವುದಿಲ್ಲಎಂದು ತಿಳಿಸಿದ್ದಾರೆ.

 ರೈತರಿಗೆ ರಸಗೊಬ್ಬರ ಸರಬರಾಜು ವಿವರ

ರೈತರಿಗೆ ರಸಗೊಬ್ಬರ ಸರಬರಾಜು ವಿವರ

ರೈತರಿಗೆ ರಸಗೊಬ್ಬರವನ್ನು 2022-23ರ ಸಾಲಿನ ಮುಂಗಾರು ಹಂಗಾಮಿಗೆ ( ಏಪ್ರಿಲ್ -2022 ರಿಂದ ಸೆಪ್ಟೆಂಬರ್ 2022 ರವರೆಗೆ ) 26.76 ಲಕ್ಷ ಮೆ.ಟನ್ ( ಯೂರಿಯಾ -10.50 ಲಕ್ಷ ಮೆ.ಟನ್ , ಡಿ.ಎ.ಪಿ - 4.00 ಲಕ್ಷ ಮೆ.ಟನ್ , ಎಂ ಒ ಪಿ - 2.00 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 10.26 ಲಕ್ಷ ಮೆ.ಟನ್ ) ಪ್ರಮಾಣದ ವಿವಿಧ ಗ್ರೇಡ್ ಗಳ ರಸಗೊಬ್ಬರದ ಬೇಡಿಕೆಯಿರುತ್ತದೆ .

ಏಪ್ರಿಲ್ 2022 ರ ಮಾಹೆಯಿಂದ ಮೇ ಮಾಹೆಯವರೆಗೆ ಒಟ್ಟು 7.61 ಲಕ್ಷ ಮೆ.ಟನ್ ( ಯೂರಿಯಾ - 2.23 ಲಕ್ಷ ಮೆ.ಟನ್ , ಡಿ.ಎ.ಪಿ - 1.56 ಲಕ್ಷ ಮೆ.ಟನ್ , ಎಂ ಒ ಪಿ - 0.64 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 3.18 ಲಕ್ಷ ಮೆ.ಟನ್ ) ಬೇಡಿಕೆಯಿರುತ್ತದೆ . ದಿನಾಂಕ 01.04.2022 ರಂತೆ ಆರಂಭಿಕ ಶಿಲು ಒಟ್ಟು 5.94 ಲಕ್ಷ ಮೆ.ಟನ್ ( ಯೂರಿಯಾ -3,12 ಲಕ್ಷ ಮೆ.ಟನ್ , ಡಿ.ಎ.ಪಿ - 0.58 ಲಕ್ಷ ಮೆ.ಟನ್ , ಎಂ ಒ ಪಿ - 0.19 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 2.05 ಲಕ್ಷ ಮೆ.ಟನ್ ) ಇರುತ್ತದೆ .

ದಿನಾಂಕ 09.05.2022 ರ ಅಂತ್ಯಕ್ಕೆ 3.91 ಮೆ.ಟನ್ ( ಯೂರಿಯಾ -1.74 ಲಕ್ಷ ಮೆ.ಟನ್ , ಡಿ.ಎ.ಪಿ - 0.88 ಲಕ್ಷ ಮೆ.ಟನ್ ಎಂ . ಒ . ಪಿ - 0.10 ಲಕ್ಷ ಮೆ.ಟನ್ ಮತ್ತು ಕಾಂಪ್ಲೆಕ್ಸ್- 1.19 ಮ.ಟನ್ ) ಪಮಾಣದ ರಸಗೊಬ್ಬರ ಸರಬರಾಜಾಗಿರುತ್ತದೆ . ಒಟ್ಟು 9.85 ಲಕ್ಷ ಮೆ.ಟನ್ ದಾಸ್ತಾನಿನಲ್ಲಿ 2.70 ಲಕ್ಷ ಮೆ.ಟನ್ ಲಕ್ಷ ಮೆ.ಟನ್ ಪುಮಾಣದ ರಸಗೊಬ್ಬರವು ಮಾರಾಟವಾಗಿರುತ್ತದೆ .

ಪುಸ್ತುತ ಒಟ್ಟು 7.15 ಲಕ್ಷ ಮೆ.ಟನ್ ( ಯೂರಿಯಾ -3.45 ಲಕ್ಷ ಮೆ.ಟನ್ , ಡಿ.ಎ.ಪಿ - 1.02 ಲಕ್ಷ ಮೆ.ಟನ್ , ಎಂ ಒ ಪಿ - 0.20 ಲಕ್ಷ ಮ.ಟನ್ ಮತ್ತು ಕಾಂಪ್ಲೆಕ್ಸ್- 2.48 ಲಕ್ಷ ಮೆ.ಟನ್ ) ಪುಮಾಣದ ರಸಗೊಬ್ಬರವು ಖಾಸಗಿ ಮಾರಾಟಗಾರರು ಮತ್ತು ಸಹಕಾರ ಸಂಘಗಳಲ್ಲಿ ( ಒಟ್ಟು , 0.83 ಲಕ್ಷ ಮೆ.ಟನ್ ಕಾಪು ದಾಸ್ತಾನು ಒಳಗೊಂಡಿದದಾಸ್ತಾನಿದ್ದು , ರಸಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ ಎಂದು ವಿವರವಾಗಿ ಬಿ.ಸಿ. ಪಾಟೀಲ್ ತಿಳಿಸಿದರು.

 ಬಿತ್ತನೆ ಬೀಜ ವಿತರಣೆ ಕ್ರಮ:

ಬಿತ್ತನೆ ಬೀಜ ವಿತರಣೆ ಕ್ರಮ:

ರಾಜ್ಯ ಸರ್ಕಾರದ ರಿಯಾಯಿತಿ ಯೋಜನೆಯಡಿ ಭತ್ತ , ರಾಗಿ , ಜೋಳ , ಮೆಕ್ಕೆಜೋಳ, ಉದ್ದು , ಹೆಸರು , ಕಡಲೆ , ಅಲಸಂದೆ , ನೆಲಗಡಲೆ , ಸೋಯಾವರೆ , ಸೂರ್ಯಕಾಂತಿ , ಗೋಧಿ, ಕುಸುಬೆ ಮತ್ತು ನವಣೆ ಬಿತ್ತನೆ ಬೀಜಗಳನ್ನು ರಾಜ್ಯದ ಎಲ್ಲಾ ವರ್ಗದ ರೈತರಿಗೆ ( ಸಾಮಾನ್ಯ ರೈತರಿಗೆ ಶೇ 50 ರ ವರೆಗೆ ಹಾಗು ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ವರಿಗೆ ಶೇ .75 ರ ವರೆಗೆ ) ಒಟ್ಟಾರೆ ಗರಿಷ್ಟ 2.00 ಹೆಕ್ಟೇರ್‌ ಅಥವಾ ಅವರ ವಾಸ್ತವಿಕ ಹಿಡುವಳಿ ಯಾವುದಿದೆಯೋ ಆ ವಿಸ್ತೀರ್ಣದ ಮಿತಿಯೊಳಗೆ ರೈತರಿಗೆ ಸಕಾಲದಲ್ಲಿ ಹೋಬಳಿ ಮಟ್ಟದಲ್ಲಿಯೇ ಉತ್ತಮ ಬಿತ್ತನೆ ಬೀಜಗಳು ಲಭ್ಯವಾಗುವಂತೆ ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ಗುರುತಿಸಿದ ಹೆಚ್ಚುವರಿ ಮಾರಾಟ ಕೇಂದ್ರಗಳು ಹಾಗೂ ಗ್ರಾಮ ಮಟ್ಟದಲ್ಲಿಯೇ ಲಭ್ಯವಾಗುವಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.

ಈವರೆಗೆ 1.30 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಮುಂಗಾರು ಬಿತ್ತನೆ

ಈವರೆಗೆ 1.30 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಮುಂಗಾರು ಬಿತ್ತನೆ

ಬಿತ್ತನೆ ಪೂರ್ವ, 2022 ರ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರದ ಬೀಜಗಳ ಪೂರೈಕೆ ಮತ್ತು ಇತರೆ ಹಿಡುವಳಿ ಯೋಜನೆಯಡಿ 8267 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಕೈಗೊಳ್ಳುವ ಗುರಿ ಇದ್ದು ಇದುವರೆವಿಗೆ 1.30 ಲಕ್ಷ ಹೆಕ್ಟೇರು ಪ್ರದೇಶದಲ್ಲಿ ಮುಂಗಾರು ಬಿತ್ತನೆ ಕೈಗೊಳ್ಳಲಾಗಿರುತ್ತದೆ . 5.38 ಲಕ್ಷ ಕ್ವಿಂ . ಬಿತ್ತನೆ ಬೀಜಗಳ ಬೇಡಿಕೆಗೆ , 8.65 ಲಕ್ಷ ಕ್ವಿಂ ಬಿತ್ತನೆ ಬೀಜಗಳು ಲಭ್ಯವಿದ್ದು , ರಾಜ್ಯಾದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ದಿನಾಂಕ : 09.05.2022 ರವರೆಗೆ ರೈತ ಸಂಪರ್ಕ ಕೇಂದ್ರಗಳಲ್ಲಿ 3505.8 ಕ್ವಿಂಟಾಲ್ ಗಳಷ್ಟು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದ್ದು , 2185.8 ಕ್ವಿಂಟಾಲ್ ಗಳಷ್ಟು ದಾಸ್ತಾನು ಇರುತ್ತದೆ . ವಿತರಣೆ ಕಾರ್ಯ ಪ್ರಗತಿಯಲ್ಲಿದೆ . ಯಾವುದೇ ಬಿತ್ತನೆ ಬೀಜದ ಕೊರತೆಯಿರುವುದಿಲ್ಲ ಎಂಬ ಮಾಹಿತಿ ನೀಡಲಾಯಿತು.

12.67 ಲಕ್ಷ ರೈತರು ಬೆಳೆ ವಿಮೆಗಾಗಿ ನೊಂದಣಿ

12.67 ಲಕ್ಷ ರೈತರು ಬೆಳೆ ವಿಮೆಗಾಗಿ ನೊಂದಣಿ

2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 12.67 ಲಕ್ಷ ರೈತರು ಬೆಳೆ ವಿಮೆಗಾಗಿ ನೊಂದಣಿ ಮಾಡಿಕೊಂಡಿದ್ದು , ಇದರ ಪೈಕಿ ಈಗಾಗಲೇ ರಾಜ್ಯದ ವಿವಿಧೆಡೆ ಬಿತ್ತನೆ ವಿಫಲಗೊಂಡಲ್ಲಿ ಮಧ್ಯಂತರ ಬೆಳೆವಿಮಾ ನಷ್ಟ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳು ಹಾಗೂ ಕೊಯ್ಲೋತ್ತರ ನಷ್ಟ ಅಡಿಯಲ್ಲಿ ಒಟ್ಟು 2.10 ಲಕ್ಷ ರೈತರಿಗೆ ರೂ . 135,72 ಕೋಟಿ ಬೆಳೆವಿಮೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.

ಉಳಿದ ರೈತರ ಬೆಳೆ ವಿಮೆಯನ್ನು ಈಗಾಗಲೇ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೆಶನಾಲಯದಿಂದ ಬೆಳೆ ಇಳುವರಿ ಮಾಹಿತಿ ಬಂದಿದ್ದು , ಬೆಳೆ ಸಮೀಕ್ಷೆ ವಿವರವನ್ನು ತಾಳೆ ಮಾಡಲಾಗಿದ್ದು , ಇನ್ನು ಒಂದು ವಾರದೊಳಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು.

English summary
No scarcity of seeds, fertilizers; we have sufficient stock of fertilizer and seeds in Karnataka, says Agriculture Minister BC Patil. We will take Action against creation of fertilizer and sowing seed artificial deprivation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X