
ಪ್ರಸಕ್ತ ವರ್ಷ 31.5 ಮಿಲಿಯನ್ ಹೆಕ್ಟೇರ್ ಗೋಧಿ ಬಿತ್ತುವ ಸಾಧ್ಯತೆ
ಬೆಂಗಳೂರು, ಡಿಸೆಂಬರ್ 07: ಪ್ರಸಕ್ತ ಗೋಧಿ ಋತುವಿನಲ್ಲಿ ಭಾರತದ ರೈತರು 31.5 ಮಿಲಿಯನ್ ಹೆಕ್ಟೇರ್‌ಗಳಲ್ಲಿ ಗೋಧಿ ಬಿತ್ತನೆ ಮಾಡುವ ಸಾಧ್ಯತೆ ಇದೆ. ಇದು ಕಳೆದ ವರ್ಷಕ್ಕಿಂತ 1.5 ಮಿಲಿಯನ್ ಹೆಕ್ಟೇರ್‌ಗಳಷ್ಟು ಅಧಿಕ ಎಂದು
ದೇಶದ ಗೋಧಿ ಕೃಷಿಯ ಉನ್ನತ ಸಂಸ್ಥೆಯಾಗಿರುವ ಐಸಿಎಆರ್- ಭಾರತೀಯ ಗೋಧಿ ಮತ್ತು ಬಾರ್ಲಿ ಸಂಶೋಧನಾ ಸಂಸ್ಥೆ (ICAR-IIWBR) ನಿರ್ದೇಶಕ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ.
ಗೋಧಿಯನ್ನು ನವೆಂಬರ್ ತಿಂಗಳ ಆರಂಭದಿಂದ ಡಿಸೆಂಬರ್ ಅಂತ್ಯದವರೆಗೆ ಗೋಧಿ ಭಿತ್ತನೆ ಮಾಡಲಾಗುತ್ತದೆ. ಈ ಪೈಕಿ ಇಡೀ ಗೋಧಿ ಸುಗ್ಗಿಯ ಅವಧಿಯಲ್ಲಿ ಈ ವರ್ಷ ಭಾರತ ಬಿತ್ತನೆಯಲ್ಲಿ ಗರಿಷ್ಠ ಸಾಧನೆ ಮಾಡಲಿದೆ. ಅದರಿಂದ ಭಾರತವು 112 ಮಿಲಿಯನ್ ಟನ್ ಗೋಧಿ ಉತ್ಪಾದಿಸುವ ನಿರೀಕ್ಷೆ ಇದೆ. ಇಷ್ಟು ಪ್ರಮಾಣವು ಕಳೆದ ಸಾಲಿಗಿಂತ 5 ಮಿಲಿಯನ್ ಟನ್‌ಗಳಷ್ಟು ಅಧಿಕ ಎಂದು ಅವರು ಹೇಳಿದರು.
ಈ ಮಟ್ಟದಲ್ಲಿ ಇಳುವರಿ ಬರಲು ಒಂದಷ್ಟು ಕಾರಣಗಳಿವೆ. ಈ ವರ್ಷ ರೈತರು ಹೊಸ ಬೀಜಗಳನ್ನು ಬಳಸಿದ್ದಾರೆ. ಇದು ತಾಪಮಾನದಲಾಗುವ ಬದಲಾವಣೆ, ಅಧಿಕ ಶಾಖವನ್ನು ತೆಡೆದುಕೊಂಡು ಬೆಳೆಯುತ್ತದೆ. ಹೀಗಾಗಿ ಈ ಬಾರಿ ಉತ್ತಮ ಉತ್ತಮವಾಗಿ ಇಳುವರಿ ಬರುವ ಸಾಧ್ಯತೆ ಇದೆ. ಬಿತ್ತಲಾದ ಗೋಧಿ ತಳಿಗಳೆಂದರೆ ಡಿಬಿಡಬ್ಲ್ಯೂ (DBW)187, ಡಿಬಿಡಬ್ಲ್ಯೂ 303, ಡಿಬಿಡಬ್ಲ್ಯೂ 222, ಡಿಬಿಡಬ್ಲ್ಯೂ 327 ಮತ್ತು ಡಿಬಿಡಬ್ಲ್ಯೂ 332. ಇವೆಲ್ಲವುಗಳು ಗೋಧಿಯ ಹೊಸ ತಳಿಗಳು ಎಂದು ವಿವರಿಸಿದರು.
ಗೋಧಿ ಕೆ.ಜಿ ಸಗಟು ಬೆಲೆ 29.50ರೂ.ಗೆ ಏರಿಕೆ
ಗೋಧಿಯ ಸಗಟು ಬೆಲೆ ಕೆ.ಜಿಗೆ 30 ರೂ.ವರೆಗೆ ಏರಿಕೆ ಆಗಿದೆ. ದೇಶದ ಬಹುತೇಕ ಭಾಗಗಳಲ್ಲಿ ಗೋಧಿ ಬೆಲೆ ರೂ. ಪ್ರತಿ ಕೆ.ಜಿಗೆ ರೂ.27 ನಿಂದ ರೂ.29.50 ವರೆಗೆ ಮಾರಾಟವಾಗುತ್ತಿದೆ. ಇದು ಕನಿಷ್ಠ ಬೆಂಬೆಲ ಬೆಲೆ (ಎಂಎಸ್‌ಪಿ) ಪ್ರತಿ ಕೆ.ಜಿ. 20.15ರೂಪಾಯಿಗಿಂತಲೇ ಶೇ. 30ರಿಂದ 40ರಷ್ಟು ಅಧಿಕವಾಗಿದೆ.

ಭಾರತದ ಗೋಧಿ ಸಂಗ್ರಹಣೆಯು 2022-23 ಮಾರುಕಟ್ಟೆ ವರ್ಷದಲ್ಲಿ 43.444 ಮಿಲಿಯನ್ ಟನ್ ನಿಂದ 18.792 ಮಿಲಿಯನ್ ಟನ್ ಗೆ ಇಳಿಕೆ ಆಗಿದೆ. ಏಕೆಂದರೆ ದೇಶೀಯ ಉತ್ಪಾದನೆಯಲ್ಲಿನ ಕುಸಿತ ಮತ್ತು ಖಾಸಗಿ ಪಕ್ಷಗಳ ಆಕ್ರಮಣಕಾರಿ ಖರೀದಿಯಿಂದ ಗೋಧಿ ಸಂಗ್ರಹಣೆಯಲ್ಲಿ ಭಾರತಕ್ಕೆ ತುಸು ಹಿನ್ನಡೆ ಆಗಿದೆ.
2022-23 ಗೋಧಿ ಋತುವಿನ ಆರಂಭದಲ್ಲಿ ರಫ್ತುಗಳನ್ನು ಉತ್ತೇಜಿಸಲಾಯಿತು. ನಂತರ ಏರಿಕೆ ಕಂಡ ಅತ್ಯಧಿಕ ತಪಾಮಾನದಿಂದಾಗಿ ಗೋಧಿ ಉತ್ಪಾದನೆ ಕುಂಠಿತಗೊಳ್ಳುವ ಸಾಧ್ಯತೆ ಹಾಗೂ ಸ್ಥಳೀಯವಾಗಿ ಗೋಧಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಗೋಧಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿತು. ಇದಾದ ಬಳಿಕ ಸಗಟು ಗೋಧಿ ಬೆಲೆ ಏರಿಕೆ ಆಗುತ್ತಿದೆ.