ಮಿತ್ತಲ್ ಘಟಕ ಸ್ಥಾಪನೆಗಾಗಿ ರೈತರಿಗೆ ಪುಡಿಗಾಸು ಹಂಚಿಕೆ

ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿಶೇಷ ಭುಸ್ವಾಧೀನಾಧಿಕಾರಿ ಮಹಾಂತೇಶ ಬೀಳಗಿ ಅವರು ಈ ಮಾಹಿತಿ ನೀಡಿದ್ದಾರೆ. ಈ ಹಣವನ್ನು ಭೂ ಮಾಲೀಕರಿಗೆ ಪರಿಹಾರವಾಗಿ ನೀಡಲು ಮೀಸಲು ಮಾಡಲಾಗಿದೆ. ಭೂಸ್ವಾಧೀನ ಮಾಡಿಕೊಂಡಿರುವ ಜಮೀನಿಗೆ ಸರ್ಕಾರ - ರೈತರು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಎನ್‌ಎ ಭೂಮಿಗೆ ತಲಾ 16 ಲಕ್ಷ ರುಪಾಯಿ, ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡು 500 ಮೀಟರ್ ವ್ಯಾಪ್ತಿ ವರೆಗಿನ ಭೂಮಿಗೆ ತಲಾ 12 ಲಕ್ಷ ರುಪಾಯಿ, ಉಳಿದ ಜಮೀನುಗಳಿಗೆ 8 ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತದೆ ಎಂದರು.
ಭೂಪರಿಹಾರ ವಿವಾದ ಕುರಿತು ಸ್ವೀಕರಿಸಲಾಗಿರುವ 89 ಪ್ರಕರಣಗಳ ಪೈಕಿ 74 ಪ್ರಕರಣಗಳನ್ನು ಪರಿಶೀಲಿಸಿ ವಿವಾದಿತ ಪ್ರಕರಣ ಹೊರತುಪಡಿಸಿ ಬಾಕಿ ಉಳಿದ 68 ಪ್ರಕರಣಗಳಲ್ಲಿ 257.60 ಎಕರೆ ಜಮೀನಿಗೆ ಒಟ್ಟು 19,71,93,480 ರೂ. ಭೂಪರಿಹಾರ ಪಾವತಿ ಮಾಡಲಾಗಿದೆ ಎಂದು ಅವರು ಹೇಳಿದರು.
ಭೂಮಾಲೀಕರು ಪರಿಹಾರ ಪಡೆಯಲು ಮಧ್ಯವರ್ತಿಗಳನ್ನು ಅವಲಂಬಿಸಬಾರದು. ಸೂಕ್ತ ದಾಖಲೆಗಳ ಜೊತೆ ಜಿಲ್ಲಾಡಳಿತ, ತಹಸೀಲ್ದಾರ್ ಅಥವಾ ಕೆಐಎಡಿಬಿ ಧಾರವಾಡ ಕಚೇರಿಯನ್ನು ಸಂಪರ್ಕ ಮಾಡಬೇಕು ಎಂದು ಅವರು ಕೋರಿದರು.
ರೈತರ ತೀವ್ರ ವಿರೋಧ: ಕುಡತಿನಿ - ಹರಗಿನಡೋಣಿ ಭೂ ಸಂತ್ರಸ್ತರ ಹೋರಾಟ ಸಮಿತಿಯು ಪ್ರತಿ ಎಕರೆಗೆ 77 ಲಕ್ಷ ರುಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರು ಚಲೋ ಪಾದಯಾತ್ರೆ, ರಸ್ತೆ ತಡೆ, ದೀರ್ಘದಂಡ ನಮಸ್ಕಾರ, ಹೀಗೇ ನಾನಾ ರೀತಿಯ ಪ್ರತಿಭಟನೆಗಳನ್ನು ನಡೆಸಿದೆ.
ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿರುವ ಸರ್ಕಾರ ಈಗಾಗಲೇ ನಿರ್ಧಾರ ಆಗಿರುವ ಬೆಲೆಯಲ್ಲೇ ಪರಿಹಾರವನ್ನು ವಿತರಣೆ ಮಾಡಲು ಮುಂದಾಗಿರುವುದು ಸಂತ್ರಸ್ತ ರೈತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ, ರೈತರನ್ನು ಒಡೆದು ಆಳುವ ಸರ್ಕಾರದ ನೀತಿ ಇದಾಗಿದೆ ಎಂದು ಟೀಕೆಗೆ ಗುರಿ ಆಗಿದೆ.












Click it and Unblock the Notifications