10 ಎಕರೆ ಜಮೀನು: ಕೃಷಿ ನಿಲ್ಲಿಸಲು ಹೊರಟಿದ್ದ ವ್ಯಕ್ತಿ ಈಗ ಮಾದರಿ ರೈತ

ಧಾರವಾಡ, ಫೆಬ್ರವರಿ 06: ರೈತ ಗಂಗಪ್ಪ ಕಾಲವಾಡ ಬಳಿ 10 ಎಕರೆ ಜಮೀನು ಇದೆ. ಆದರೆ ಅಕಾಲಿಕ ಮಳೆ, ಪ್ರವಾಹ ಮತ್ತು ಬರ ಪರಿಸ್ಥಿತಿಯಿಂದ ಕೃಷಿ ಕಾಯಕ ನಿಂತು ಹೋಗುವ ಸ್ಥಿತಿಗೆ ಬಂದಿತ್ತು. ಆದರೆ ಈಗ ಅವರು ಮಾದರಿ ರೈತರಾಗಿ ಬದಲಾಗಿದ್ದಾರೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯನ್ನು ಬಳಕೆ ಮಾಡಿಕೊಂಡು ಯಶಸ್ಸುಗಳಿಸಿದ್ದಾರೆ.

ಶಾಸಕ ಎನ್. ಎಚ್. ಕೋನರಡ್ಡಿ ಹಾಗೂ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು, ಅಧಿಕಾರಿಗಳು ಕುರಿ ಸಾಕಾಣಿಕೆಯಲ್ಲಿ ಮಾದರಿಯಾದ ಮೊರಬ ಗ್ರಾಮದ ರೈತ ಗಂಗಪ್ಪ ಕಾಲವಾಡ ಅವರ ಕುರಿಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿದ್ದರು.

10 Acre Of Land Success Story Of Dharwad Farmer

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಗತಿಪರ ರೈತನ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದರು. "ರೈತರು ಕೃಷಿ ಜೊತೆಗೆ ಉಪ ಕೃಷಿ ಚುಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಲಾಭದಾಯಕತೆ ಹೊಂದಲು ಸಹಾಯವಾಗುತ್ತದೆ. ಹವಾಮಾನ ವೈಪರಿತ್ಯದಿಂದಾಗಿ ಬೆಳೆಗಳಲ್ಲಿ ಬದಲಾವಣೆ ಆಗುತ್ತಿವೆ. ಇದರಿಂದ ಉತ್ಪಾದನೆ, ಲಾಭದ ಮೇಲೂ ಪರಿಣಾಮ ಬೀರುತ್ತಿದೆ" ಎಂದರು.

ರೈತರು ಕೃಷಿ ಜೊತೆಗೆ ಕುರಿ-ಆಡು ಸಾಕಾಣಿಕೆ, ಹೈನುಗಾರಿಕೆ, ತೋಟಗಾರಿಕೆ, ಸಾವಯವ ಧಾನ್ಯ, ಮಿಶ್ರ ಬೆಳೆ, ಅವಕಾಶವಿದ್ದಲ್ಲಿ ಮೀನುಗಾರಿಕೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಒಂದರಲ್ಲಿ ನಷ್ಟವಾದರೂ ಇನ್ನೊಂದು ಕೈ ಹಿಡಿಯುತ್ತದೆ. ಇಲಾಖೆಯಿಂದ ಹೆಚ್ಚುಹೆಚ್ಚು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.

"ರೈತರು ಕೃಷಿ ಜೊತೆಗೆ ಕುರಿ-ಆಡು ಸಾಕಾಣಿಕೆ, ಹೈನುಗಾರಿಕೆ, ತೋಟಗಾರಿಕೆ, ಸಾವಯವ ಧಾನ್ಯ, ಮಿಶ್ರ ಬೆಳೆ, ಅವಕಾಶವಿದ್ದಲ್ಲಿ ಮೀನುಗಾರಿಕೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಒಂದರಲ್ಲಿ ನಷ್ಟವಾದರೂ ಇನ್ನೊಂದು ಕೈ ಹಿಡಿಯುತ್ತದೆ. ಕೃಷಿ ಇಲಾಖೆಯಿಂದ ಹೆಚ್ಚು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ" ಎಂದು ಹೇಳಿದರು.

ಮಾದರಿಯಾಗಿ ಬೆಳೆದ ರೈತ: ರೈತ ಗಂಗಪ್ಪ ಕಾಲವಾಡ ಮಾತನಾಡಿ, "ನನಗೆ 10 ಎಕರೆ ಜಮೀನು ಇದೆ. ಆದರೆ ಅಕಾಲಿಕ ಮಳೆ, ಪ್ರವಾಹ ಮತ್ತು ಬರ ಪರಿಸ್ಥಿತಿಯಿಂದ ಕೃಷಿಕಾಯಕ ನಿಂತು ಹೋಗುವ ಸ್ಥಿತಿಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಪಶುಪಾಲನೆ ಇಲಾಖೆ ಅಧಿಕಾರಿಗಳು, ಪ್ರಗತಿಪರ ರೈತರಿಗೆ ಇಲಾಖೆ ಯೋಜನೆಗಳ ಪರಿಚಯ ಮತ್ತು ಪರ್ಯಾಯ ಕೃಷಿ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಿ, ಮಾಹಿತಿ, ತರಬೇತಿ ನೀಡಿದರು" ಎಂದರು.

ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ 2023ರಿಂದ ರೈತ ಗಂಗಪ್ಪ ಕಾಲವಾಡ ಕೇಂದ್ರ ಸರ್ಕಾರದ ರೂ. 50 ಲಕ್ಷ ಸಹಾಯಧನದ ಅನುದಾನ ಹಾಗೂ ಫಲಾನುಭವಿ ಪಾಲು ಮತ್ತು ಬ್ಯಾಂಕ್ ಸಾಲ ಸೇರಿ ರೂ. 50 ಲಕ್ಷ ಯೋಜನಾ ಮೊತ್ತದಿಂದ ಕುರಿಸಾಕಾಣಿಕೆ ಕೇಂದ್ರ ಆರಂಭಿಸಿದ್ದಾರೆ.

ಒಂದು ಗುಂಟೆ ಜಾಗದಲ್ಲಿ ಆರಂಭಿಸಿದ್ದ ಕುರಿ ಸಾಕಾಣಿಕೆ ಕೇಂದ್ರದಲ್ಲಿ ಇಂದು 500 ಕುರಿ, ನೂರಕ್ಕು ಹೆಚ್ಚು ಆಡುಗಳು, 300 ಕುರಿಮರಿಗಳು, 50 ಬೀಜದ ಟಗರು ಇವೆ. ವಾರದಲ್ಲಿ ಕನಿಷ್ಠ ನಾಲ್ಕು ದಿನ ಸಮೀಪದ ದನದ ಸಂತೆಗಳಿಗೆ ಹೋಗಿ ಕುರಿ, ಟಗರು ಮಾರಾಟ ಮಾಡುತ್ತಾರೆ. ಒಂದು ಕುರಿ ಕನಿಷ್ಠ 10 ರಿಂದ 20 ಸಾವಿರ, ಆರು ತಿಂಗಳ ಕುರಿ ಮರಿ 5 ರಿಂದ 10 ಸಾವಿರ, ಟಗರು ಕನಿಷ್ಠ 15 ರಿಂದ 30 ಸಾವಿರ ಬೆಲೆಗೆ ಮಾರಾಟವಾಗುತ್ತವೆ. ಕುರಿ ಹಿಕ್ಕೆಯ ಗೊಬ್ಬರ ಪ್ರತಿ ಟೇಲರಗೆ 15 ರಿಂದ 20 ಸಾವಿರ ಬರುತ್ತಿದೆ.

ಶಾಸಕ ಎನ್. ಎಚ್. ಕೋನರಡ್ಡಿ ಮಾತನಾಡಿ, "ಗಂಗಪ್ಪ ಕಶಲವಾಡ ಪ್ರಗತಿಪರ ರೈತ. ಇವರ ಸಾಧನೆ ಉಳಿದ ರೈತರಿಗೂ ಮಾದರಿ ಆಗಿದೆ. ರಾಜ್ಯ ಸರಕಾರ ಕೃಷಿ ಜೊತೆಗೆ ಕೃಷಿಗೆ ಪೂರಕವಾದ ಉಪ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಇಲಾಖೆಗಳ ಮೂಲಕ ಬೆಂಬಲ ನೀಡುತ್ತಿದೆ. ರೈತರು ಈ ಯೋಜನೆ, ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು" ಎಂದು ಕರೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+