ಬೆಳಗಾವಿ ಸಮ್ಮೇಳನಕ್ಕೆ ಚರಣ್ ರಾಜ್‌ಗೆ ಆಹ್ವಾನವೇ ಇಲ್ಲ
ಚರಣ್
ರಾಜ್ ಎಂದರೆ ತಮ್ಮದೇ ಆದಂತಹ ವಿಶಿಷ್ಟ ಮ್ಯಾನರಿಸಂಗೆ ಹೆಸರಾದವರು. ಇವರು ಹುಟ್ಟೂರು ಗಡಿನಾಡು ಬೆಳಗಾವಿ. ಆದರೆ ಚರಣ್ ರಾಜ್‌ಗೆ ವಿಶ್ವಕನ್ನಡ ಸಮ್ಮೇಳನಕ್ಕೆ ಯಾರೂ ಆಹ್ವಾನಿಸಿಲ್ಲ. ಈ ಘಟನೆಯಿಂದ ಅವರ ಮನಸ್ಸಿಗೆ ತೀವ್ರ ಸಂಕಟವಾಗಿದೆ. ಈ ಬಗ್ಗೆ ಅವರು ಬೇಸರಿಸಿಕೊಂಡಿದ್ದಾರೆ. id="toptextpromo">ಸಮ್ಮೇಳನಕ್ಕೆ
ನನ್ನನ್ನು ಕರೆದಿದ್ದರೆ ಒಲ್ಲೆ ಎನ್ನುತ್ತಿರಲಿಲ್ಲ. ಆದರೆ ಯಾರೂ ನನ್ನನ್ನು ಕರೆಯಲಿಲ್ಲ ಎಂದು ಚರಣ್ ರಾಜ್ ಪ್ರತಿಕ್ರಿಯಿಸಿದ್ದಾರೆ. ನಾನು ಜನಸಿದ ಊರಲ್ಲಿ ದೊಡ್ಡ ಹಬ್ಬ ನಡೆಯುತ್ತಿದೆ. ನಾನೂ ನೋಡಬೇಕು ಎಂಬ ಬೆಟ್ಟದಷ್ಟು ಆಸೆ ಇತ್ತು. ಆದರೆ ನನಗೆ ಆಹ್ವಾನವಿಲ್ಲ ಎಂದು ನೊಂದು ನುಡಿದಿದ್ದಾರೆ. ಕರೆಯದೇ ಹೇಗೆ ಬರಲಿ ನೀವೇ ಹೇಳಿ ಎಂಬುದು ಅವರ ಪ್ರಶ್ನೆ. id='are-slot-1' class='oiad oi-axt oiadv'> id='top-searched-articles'>ಬೆಳಗಾವಿಯಲ್ಲಿ
ಹುಟ್ಟಿದ ಚರಣ್ ರಾಜ್‌ರನ್ನು ಬಣ್ಣದ ಜಗತ್ತಿನ ಮೋಹ ಬೆಂಗಳೂರಿಗೆ ಬರುವಂತೆ ಮಾಡಿತು. ಬಳಿಕ ಅವರು ಅಲ್ಲಿಂದ ತಮಿಳು, ತೆಲುಗು ಚಿತ್ರರಂಗಕ್ಕೆ ಹೋಗಿದ್ದು ಇತಿಹಾಸ. ಸಿದ್ದಲಿಂಗಯ್ಯ ಅವರ 'ಪರಾಜಿತ' ಚಿತ್ರ ಚರಣ್ ರಾಜ್ ಅಭಿನಯದ ಮೊದಲ ಕನ್ನಡ ಚಿತ್ರ. ಅವರು ಕನ್ನಡದಲ್ಲಿ ಅಭಿನಯಿಸಿದ ಕೊನೆಯ ಚಿತ್ರ 'ತಿರುಪತಿ'. ಈಗ 'ಸ್ವಯಂಕೃಷಿ' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.











Click it and Unblock the Notifications