ಅಮ್ಮಾತಾಯಿ ಆದ ಸಾಹಿತ್ಯ ಪ್ರೇಮಿಗಳು
ಚಿತ್ರದುರ್ಗ, ಫೆ. 6 : ಕನ್ನಡದ ಕಂಪು ಪಸರಿಸಬೇಕಿದ್ದ ಏಳು ಸುತ್ತಿನ ಕೋಟೆಯ ಪಟ್ಟಣ ಚಿತ್ರದುರ್ಗದಲ್ಲಿ ಊಟಕ್ಕಾಗಿ ಮತ್ತು ಕುಡಿಯುವ ನೀರಿಗಾಗಿ ಸಂಪು ನಡೆಯುತ್ತಿರುವ ಸುದ್ದಿ ಸಮ್ಮೇಳನದ ಮೂರನೆಯ ದಿನದ ಪ್ರಮುಖ ಆಕರ್ಷಣೆಯಾಗಿದೆ. ಸಮ್ಮೇಳನ ಪ್ರತಿನಿಧಿಗಳ ಪ್ರತಿಭಟನೆ, ಆಕ್ರೋಶ, ಘೋಷಣೆ, ದಿಕ್ಕಾರ ಹಾಗೂ ಅಸಮಾಧಾನದಿಂದ ಇಲ್ಲಿನ ಓನಕೆ ಓಬವ್ವನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಂಭ್ರಮಾಚರಣೆ ಕಳೆಗುಂದಿದೆ.
ನೋಂದಾಯಿತ ಸದಸ್ಯರಿಗೆ ಊಟ ಮತ್ತು ವಸತಿ ಸರಿಯಾಗಿ ನೀಡದಿರುವುದು ಸಮ್ಮೇಳನ ಮತ್ತಷ್ಟು ಗೊಂದಲದ ಗೂಡಾಗಲು ಕಾರಣವಾಗಿದೆ. ಅವ್ಯವಸ್ಥೆಗೆ ಮತ್ತೊಂದು ಹೆಸರು ಎಂಬಂತಿರುವ ಈ ಸಲದ ಸಮ್ಮೇಳನ ಇತ್ತೀಚೆಗೆ ನಡೆದ ಅತ್ಯಂತ ಕಳಪೆ ವ್ಯವಸ್ಥೆಯ ಸಮ್ಮೇಳನ ಎಂಬ ಅಪಖ್ಯಾತಿಗೆ ಒಳಗಾಗಿದೆ. ಊಟ ದೊರೆಯದ ಹಿನ್ನೆಲೆಯಲ್ಲಿ ಕೋಪೋದ್ರಿಕ್ತವಾದ ಸಾಹಿತ್ಯಾಭಿಮಾನಿಗಳು ಇಂದು ಕೂಡ ಸಮ್ಮೇಳನ ಪ್ರಧಾನ ವೇದಿಕೆಯಾದ ತರಾಸು ವೇದಿಕೆಯಲ್ಲಿ ವಿಚಾರಗೋಷ್ಠಿಗಳು ನಡೆಯುತ್ತಿದ್ದರೂ ಲೆಕ್ಕಿಸದೆ ಪ್ರತಿಭಟನೆಗಿಳಿದರು. ದುಡ್ಡು ಕೊಡುತ್ತೇವೆಂದರೂ ಊಟ ಸಿಗದ ಪರಿಸ್ಥಿತಿ ಇದೆ. ಇಲ್ಲಿ ಹೋಟೆಲುಗಳು ತೀರಾ ಕಡಿಮೆ ಎಂದು ಹೊಳಲ್ಕೆರೆಯಿಂದ ಬಂದಿರುವ ನಾಗರಾಜಪ್ಪ ದಟ್ಸ್ ಕನ್ನಡ ಪ್ರತಿನಿಧಿಗೆ ಹೇಳಿದರು.
ಸಮ್ಮೇಳನಕ್ಕೆ ಆಗಮಿಸಿರುವ ಪ್ರತಿನಿಧಿಗಳಿಗೆ ಕೊಡುವ ಬ್ಯಾಗ್, ವಸತಿ, ಊಟ ಹಾಗೂ ಕುಡಿಯುವ ನೀರಿಗಾಗಿ ಮೊದಲ ದಿನದಿಂದಲೇ ನೂಕುನುಗ್ಗಲು ಆರಂಭವಾಗಿತ್ತು. ತಕ್ಷಣ ಕ್ರಮಕೈಗೊಳ್ಳತ್ತೇವೆ ಎಂದು ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ ಹೇಳಿದ್ದರು. ಆದರೆ, ಮೂರು ದಿನಗಳು ಕಳೆದರೂ ಅದೇ ಅವ್ಯವಸ್ಥೆ ಮುಂದುವರಿದಿದೆ. ದೂರದೂರದಿಂದ ಬಂದಿರುವ ಸಾಹಿತ್ಯಾಭಿಮಾನಿಗಳು ಸಮ್ಮೇಳನ ಆಯೋಜಕರಿಗೆ ತರಾಟೆಗೆ ತೆಗೆದುಕೊಳ್ಳುವ ಮೂಲಕ ಹಿಡಿ ಶಾಪ ಹಾಕುತ್ತಿರುವ ಸಾಮಾನ್ಯವಾಗಿತ್ತು. ಕನ್ನಡದ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಅನೇಕರ ನಿರಾಶೆಯಿಂದ ಮರಳುತ್ತಿರುವುದು ಎಲ್ಲೆಲ್ಲೂ ಕಂಡು ಬರುವ ದೃಶ್ಯವಾಗಿತ್ತು.
ಇದರ ಜೊತೆಗೆ ಕೋಟೆ ನಗರಕ್ಕೆ ಸಮ್ಮೇಳನಕ್ಕೆ ಲಕ್ಷಾಂತರ ಜನರು ಆಗಮಿಸಿದ್ದು, ಅವ್ಯವಸ್ಥೆಯ ಆಗರದ ನಡುವೆ ಸಂಚಾರ ದಟ್ಟಣೆಯಿಂದಾಗಿ ಎಲ್ಲೆಲ್ಲೂ ಧೂಳು, ಬಿಸಿಲಿನ ಧಗೆ ಜನರನ್ನು ಮತ್ತಷ್ಟು ಕಂಗಾಲಾಗಿಸಿದೆ. ಈ ಅಧ್ವಾನಗಳ ನಡುವೆ ಸಿಹಿ ಸುದ್ದಿಯೆಂದರೆ ಭರ್ಜರಿ ಪುಸ್ತಕ ಮಾರಾಟ. ಸಮ್ಮೇಳನಕ್ಕೆ ಆಗಮಿಸಿರುವ ಸಾಹಿತ್ಯಾಭಿಮಾನಿಗಳು ಪುಸ್ತಕ ಖರೀದಿ ಮಾಡುವುದನ್ನು ಮರೆಯುತ್ತಿಲ್ಲ. ಕಳೆದ ಮೂರು ದಿನದ ಸಮ್ಮೇಳನದಲ್ಲಿ ಪುಸ್ತಕಗಳ ಮಾರಾಟ ಜೋರಾಗಿ ನಡೆದಿದೆ. ಅಂತೆಯೇ, ನಾನಾ ಜಿಲ್ಲೆಗಳಿಂದ ಪ್ರಥಮ ಬಾರಿಗೆ ದುರ್ಗಕ್ಕೆ ಬಂದಿರುವ ಜನರು ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳದೆ ಏಳು ಸುತ್ತಿನ ಕೋಟೆ ಪ್ರದಕ್ಷಿಣೆ ಹಾಕುತ್ತಿರುವುದು ಜೋರಾಗಿ ನಡೆದಿದೆ.
ಇದೇ ವೇಳೆ, ಸಮ್ಮೇಳನಾಧ್ಯಕ್ಷ ಪ್ರೊ. ಎಲ್. ಬಸವರಾಜು ಅವರ ವಿರೋಧಾಭಾಸದ ಹೇಳಿಕೆ ಮತ್ತು ತರಳಬಾಳು ಸ್ವಾಮೀಜಿಗಳ ಮಾರುತ್ತರದ ಪ್ರಕರಣ ಇಡೀ ಚಿತ್ರದುರ್ಗದಲ್ಲಿ ಮಾರ್ದನಿಸುತ್ತಿದೆ. ಒಂದು ಕಡೆಯ ಸಾಹಿತ್ಯದ ಒಲವು, ಇನ್ನೊಂದೆಡೆ ಉತ್ಸವದ ಮೆರಗು , ಮತ್ತೊಂದೆಡೆ ಸಿರಿಗೆರೆಯ ಭಕ್ತಿ, ಮೂರೂ ಕಲೆತು ಜನಕ್ಕೆ ಏನು ಹೇಳಬೇಕೋ ಏನು ಹೇಳಬಾರದೋ ಎಂಬಂಥ ಸ್ಥಿತಿ ನಿರ್ಮಾಣವಾಗಿತ್ತು. ಆದರೂ, ಅಧ್ಯಕ್ಷತೆ ವಹಿಸಿಕೊಂಡು ನಮ್ಮೂರಿಗೆ ಆಗಮಿಸಿದ ಬಸವರಾಜು ಅವರು ಹೇಳಿಕೆ ಅನಗತ್ಯ ಮುಜಗರ ತಂದಿದೆ ಎಂದು ಸ್ಥಳೀಯ ಸಾಹಿತಿ ನೀರಜ ಒಡೆಯರ್ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಮುಂದಿನ ಸಮ್ಮೇಳನ : 2010ರ ಅಖಿಲ ಭಾರತದ ಸಮ್ಮೇಳನದ ಅತಿಥ್ಯ ವಹಿಸಲು ಈಗಾಗಲೇ ಪೈಪೋಟಿ ಕಂಡು ಬಂದಿದೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಘಟಕಗಳು ತೀವ್ರ ಲಾಭಿ ನಡೆಸುತ್ತಿವೆ. ನಮ್ಮ ಭಾತ್ಮೀದಾರರ ನೀಡಿರುವ ಸುದ್ದಿ ಸುಳಿವಿನ ಪ್ರಕಾರ ಮುಂದಿನ ಸಮ್ಮೇಳನ ಬಳ್ಳಾರಿ ಒಲಿಯುವ ಸಾಧ್ಯತೆ ಹೆಚ್ಚಾಗಿದೆ. ಅಂತೂ ಕಳೆದ ಎರಡು ಸಮ್ಮೇಳನಗಳಾದ ಮೂಡುಬಿದಿರೆ, ಉಡುಪಿ ನಂತರ ಈ ಬಾರಿ ಸಮ್ಮೇಳನ ಬಯಲು ಸೀಮೆಯ ದುರ್ಗದ ಪಾಲಾಯಿತು. ದುರ್ಗದಿಂದ ಮತ್ತೆ ಸಾಹಿತ್ಯದ ಜಾತ್ರೆ ಬಯಲು ಸೀಮೆಯ ಇನ್ನೊಂದು ಮಗ್ಗಲನ್ನು ಅರಸಿ ಹೊರಟಿದೆ.
(ದಟ್ಸ್ ಕನ್ನಡ ವಾರ್ತೆ)
ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಚಿತ್ರಗಳು
ಪೂರಕ ಓದಿಗೆ
ಅಧ್ಯಕ್ಷರಿಗೆ ತರಳಬಾಳು ಶ್ರೀಗಳ ತಿರುಗೇಟು
ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications