ಶಾಸ್ತ್ರೀಯ ಸ್ಥಾನಮಾನಕ್ಕೆ ಒಕ್ಕೊರಲಿನ ಆಗ್ರಹ

ಉಡುಪಿ, ಡಿ.15 : ಅಖಿಲ ಭಾರತ 74ನೇ ಕನ್ನಡ ಸಾಹಿತ್ಯ ಸಮ್ಮೆಳನ ಶನಿವಾರ (ಡಿ.15) ಅಂತ್ಯಗೊಂಡಿತು. ಮುಂದಿನ 75ನೇ ಸಾಹಿತ್ಯ ಸಮ್ಮೇಳನ ಚಿತ್ರದುರ್ಗದಲ್ಲಿ ನಡೆಯಲಿದೆ. ಉಡುಪಿ ಸಮ್ಮೇಳನದಲ್ಲಿ ಹಿಂದಿ ಅಕಾಡೆಮಿ ಸ್ಥಾಪನೆಗೆ ವಿರೋಧ ಸೇರಿದಂತೆ ಹಲವಾರು ಕನ್ನಡ ಪರವಾದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಗಡಿಪ್ರದೇಶಗಳ ಮತ್ತು ಗಡಿಯಾಚೆಗಿನ ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕಗಳನ್ನು ನೀಡಬೇಕು. ಹಿರಿಯ ಸಾಹಿತಿ ಜಯದೇವಿ ತಾಯಿ ಲಿಗಾಡೆ ಅವರ ಮನೆ ಮಾರಾಟ ಮಾಡಬಾರದು ಅದನ್ನು ಸ್ಮಾರಕವಾಗಿಸಬೇಕು ಎಂಬ ನಿರ್ಣಯಗಳನ್ನೂ ಕೈಗೊಳ್ಳಲಾಯಿತು.

ಸಾಹಿತ್ಯ ಸಮ್ಮೇಳನದಲ್ಲಿ ಧ್ವನಿಸಿದ ಪ್ರಮುಖ ನಿರ್ಣಯಗಳು :

*ಹಿಂದಿ ಅಕಾಡೆಮಿ ಸ್ಥಾಪನೆಗೆ ವಿರೋಧ.
*ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೆ ವಲಯಕ್ಕೆ ಆಗ್ರಹ.
*ಆಡಳಿತಾತ್ಮಕವಾಗಿ ಮಂಗಳೂರನ್ನು ನೈಋತ್ಯ ರೈಲ್ವೆಗೆ ಸೇರಿಸಬೇಕು.
*ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ.
*ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು, ಕೊಡವ ಭಾಷೆಗಳ ಸೇರ್ಪಡೆಗೆ ಆಗ್ರಹ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+