ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರುಕಟ್ಟೆಗೆ ಹಣ್ಣುಗಳ ರಾಜ: ತಿನ್ನುವ ಮುನ್ನ ಇರಲಿ ಎಚ್ಚರ!

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿದೆ. ಇದು ಮಾವು ಪ್ರಿಯರಿಗೆ ಖುಷಿಯ ಸುದ್ದಿಯಾದರೆ, ಬೆಳೆಗಾರರಿಗೂ ಸಂತಸದ ಸುದ್ದಿ. ಆದರೂ ಕೊಳ್ಳುವ ಮುನ್ನ ಕೆಲ ಎಚ್ಚರಿಕೆ ವಹಿಸಿ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಏಪ್ರಿಲ್ 27 - ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿದೆ. ಇದು ಮಾವು ಪ್ರಿಯರಿಗೆ ಖುಷಿಯ ಸುದ್ದಿಯಾದರೆ, ಬೆಳೆಗಾರರಿಗೂ ಸಂತಸದ ಸುದ್ದಿ. ಮೈಸೂರಿನ ಪ್ರಮುಖ ರಸ್ತೆ ಬದಿಯಲ್ಲಿ, ಹಣ್ಣಿನ ಅಂಗಡಿಗಳಲ್ಲಿ ಜೋಡಿಸಿಟ್ಟ ವಿವಿಧ ಬಗೆಯ ಮಾವಿನ ಹಣ್ಣುಗಳು ಕಾಣಿಸತೊಡಗಿವೆ.

ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿ ತಳ್ಳುವ ಗಾಡಿಗಳಲ್ಲಿ ಜೋಡಿಸಿಟ್ಟ ಮಾವಿನ ಹಣ್ಣು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ರಸಪುರಿ ಮಾವಿನಹಣ್ಣು ಕೆ.ಜಿ.ಗೆ 50 ರೂ. ಆಗಿದೆ. ಬಾದಾಮಿ, ಮಲಗೋವಾ, ಮಲ್ಲಿಕಾ ಮದನಪಲ್ಲಿ, ತೋತಾ ಪುರಿ, ನೀಲಂ ಸೇರಿದಂತೆ ವಿವಿಧ ಜಾತಿಯ ಮಾವಿನ ಹಣ್ಣುಗಳು ಹೆಚ್ಚಾಗಿ ಬಂದಿಲ್ಲ. ಅಲ್ಲೊಂದು ಇಲ್ಲೊಂದು ಅಂಗಡಿಗಳಲ್ಲಿ ಮಾತ್ರ ಕಾಣಸಿಗುತ್ತಿವೆ. ಆದರೆ ಬೆಲೆ ಮಾತ್ರ ದುಬಾರಿ! [10 ಸಾವಿರ ಟನ್ ದಾಟಲಿದೆ ಕರ್ನಾಟಕದ ಮಾವು ರಫ್ತು]

King of fruits, mango has come to market: Be careful while buying


ರಾಜ್ಯದಲ್ಲಿ ಬರಗಾಲ ಮತ್ತು ಅಕಾಲಿಕ ಮಳೆಯಿಂದಾಗಿ ಈ ಬಾರಿ ಮಾವು ಬೆಳೆ ಕಡಿಮೆಯಾಗಿದ್ದರೂ, ವಿದೇಶಗಳಿಂದ ಮಾವಿಗೆ ಒಳ್ಳೆ ಬೇಡಿಕೆಗಳು ಬಂದಿವೆ. ಅಂದಾಜು 10 ಸಾವಿರ ಟನ್ ಮಾವು ವಿದೇಶಗಳಿಗೆ ರಫ್ತಾಗುವ ಸಾಧ್ಯತೆ ಇದೆ. ರೈತರು ವರ್ಷವೊಂದಕ್ಕೆ 13-18 ಲಕ್ಷ ಟನ್ ಮಾವು ಬೆಳೆಯುತ್ತಾರೆ. ಇದರಲ್ಲಿ ಕೋಲಾರದ ಪಾಲೇ ಅತೀ ಹೆಚ್ಚಾಗಿದೆ.

ದೇಶದಲ್ಲಿ ಉತ್ತರಪದೇಶ ಮತ್ತು ಆಂಧ್ರ ಹೊರತುಪಡಿಸಿದರೆ ಅತೀ ಹೆಚ್ಚು ಮಾವು ಬೆಳೆಯುವ ರಾಜ್ಯ ಕರ್ನಾಟಕ. ಈ ಬಾರಿ ಮಾತ್ರ ರಾಜ್ಯದಲ್ಲಿ ಅತೀವ ಬರಗಾಲ ಬಂದಿರುವುದರಿಂದ ಕೇವಲ 10 ಲಕ್ಷ ಟನ್ ಬೆಳೆ ಸಿಗಬಹುದು ಎಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ 14 ಲಕ್ಷ ಟನ್ ಮಾವು ಉತ್ಪಾದನೆಯಾಗಿತ್ತು. [ಮಾವಿನ ತೋಟದಲ್ಲಿ ಬೇಕೆಂದ ಹಣ್ಣು ಖರೀದಿಸಬೇಕಾ, ಹತ್ತಿ ಬಸ್ಸು..]

ರಸ್ತೆಯಲ್ಲೇ ಮಾವಿನ ಸಂತೆ

ಈ ಮಧ್ಯೆ ಮೈಸೂರಿನಿಂದ ಹುಣಸೂರಿಗೆ ತೆರಳುವ ರಸ್ತೆಯಲ್ಲಿ ಅದಾಗಲೇ 'ಮಾವಿನಸಂತೆ' ಆರಂಭವಾಗಿದೆ. ಮೈಸೂರಿನಿಂದ ಹುಣಸೂರು ಕಡೆಗೆ ತೆರಳುವ ರಾಜ್ಯ ಹೆದ್ದಾರಿ 88ರಲ್ಲಿ ಸುಮಾರು 20 ಕಿ.ಮೀ ದೂರದಲ್ಲಿರುವ ಚಿಕ್ಕಾಡನ 1,500 ಟನ್ ಮಾವಿಗೆ ಬೇಡಿಕೆ ಬಂದಿದೆ. ಕರ್ನಾಟಕದಲ್ಲಿ ಸುಮಾರು 2.2 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮಾವು ಬೆಳೆಯಲಾಗುವ ಹಳ್ಳಿಯೇ ಮಾವಿನಸಂತೆಗೆ ಕೇಂದ್ರ ಬಿಂದು. ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಸಾಗುವವರು ಚಿಕ್ಕಾಡನಹಳ್ಳಿಯಲ್ಲಿ ತಳ್ಳುವ ಗಾಡಿಗಳಲ್ಲಿ ಕಿಲೋಮೀಟರ್ ಗಟ್ಟಲೆ ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಜೋಡಿಸಿಟ್ಟು ಮಾರಾಟ ಮಾಡುವುದನ್ನು ನೋಡುವುದೇ ಒಂದು ಸುಂದರ ದೃಶ್ಯ. ಹಾಗೆ ನೋಡಿದರೆ ಇಲ್ಲಿ ನಡೆಯುವ ಮಾವಿನ ಹಣ್ಣಿನ ಸಂತೆಗೆ ಹಲವು ದಶಕಗಳ ಇತಿಹಾಸವಿದೆ.

King of fruits, mango has come to market: Be careful while buying


ರಾಸಾಯನಿಕ ಬಳಕೆ

ಜನರು ಮಾವನ್ನು ಕೊಳ್ಳುವದಕ್ಕಿಂತ ಮುಂಚಿತವಾಗಿ ಸಾವಿರ ಬಾರಿ ಯೋಚಿಸದುತ್ತಿದ್ದಾರೆ. ಕಾರಣ ಕೆಲ ವ್ಯಾಪಾರಿಗಳು ಮರದಲ್ಲಿರುವ ಕಾಯಿಗಳನ್ನೇ ಕಿತ್ತು ಹಣ್ಣು ಮಾಡಿ ಮಾರಾಟಕ್ಕೆ ಮುಂದಾಗಿರುವುದರಿಂದ ಹಣ್ಣು ಮಾಡಲು ರಾಸಾಯನಿಕ ಬಳಕೆ ಮಾಡುತ್ತಾರೆ ಎಂಬುದು. ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕ ವಸ್ತುವನ್ನು ಮಾವಿನ ಕಾಯಿಯನ್ನು ಹಣ್ಣಾಗಿ ಪರಿವರ್ತಿಸಲು ಬಳಕೆ ಮಾಡುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ.

ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ

ಹಣ್ಣುಗಳ ಮೇಲೆ ಚುಕ್ಕೆಗಳಿರುವುದು. ಅಲ್ಲಲ್ಲಿ ಒಣಗಿದ ರೀತಿಯಲ್ಲಿ ಕಾಣುವುದು. ರುಚಿ ಇಲ್ಲದೇ ಇರುವುದು. ಇಂತಹ ಅಂಶಗಳು ಗಮನಿಸಿದರೆ ಅದು ರಾಸಾಯನಿಕ ವಸ್ತುವಿನಿಂದ ಮಾಗಿಸಿದ ಹಣ್ಣು ಎಂಬುವುದು ತಿಳಿಯಲಿದೆ. ಈ ಹಣ್ಣುಗಳ ಸೇವೆನೆಯಿಂದ ಮೊದಲಿಗೆ ಹೊಟ್ಟೆ ನೋವು ಕಾಣಿಸಿಕೊಂಡರೆ ನಂತರ ನಿಧಾನವಾಗಿ ಗ್ಯಾಸ್ಟ್ರಿಕ್, ಉಬ್ಬಸ ವಾಂತಿ ಹೊಟ್ಟೆ ಹುರಿ, ಅತಿಸಾರದಂತೆ ಸಮಸ್ಯೆ ಮಾವು ಹಣ್ಣು ಸೇವಿಸಿದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಏನೂ ಆಗುವುದಿಲ್ಲವೆಂದು ತಿನ್ನಲು ಹೋದರೆ ಕರುಳಿನ ತೊಂದರೆಯಾಗುವುದರ ಜೊತೆಗೆ ಕ್ಯಾನ್ಸರ್ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಮಾವು ಖರೀದಿಯ ಮುನ್ನ ಸರಿಯಾಗಿ ವಿಚಾರಿಸಿ ಖರೀದಿಸಿ ಎಂಬುದು ನಮ್ಮ ಕಾಳಜಿ.

English summary
King of fruits, mango has come to Mysuru market already. People of palace city are eager to by sweet mangos. But chemicles use to ripe the fruits are very dangerous to health. People should aware this before they buy the fruits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X