Get Updates
Get notified of breaking news, exclusive insights, and must-see stories!

ಮಂಗಳೂರು: ಸೇಂಟ್ ಅಲೋಶಿಯಸ್ ಕಾಲೇಜಿಗೆ ಅಭಿನಂದನೆಗಳು

ಮಂಗಳೂರಿನ ಹೃದಯ ಭಾಗದಲ್ಲಿರುವ ಸಂತ ಅಲೋಶಿಯಸ್ ಕಾಲೇಜು ಇಡೀ ಕರ್ನಾಟಕದಲ್ಲೇ 2ನೇ ಉನ್ನತ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಗಿದೆ. ಇನ್ನು ದೇಶದ ಅತ್ಯುತ್ತಮ ಕಾಲೇಜುಗಳ ಪಟ್ಟಿಯಲ್ಲಿ 44 ನೇ ಸ್ಥಾನ ಪಡೆದುಕೊಂಡಿದೆ.

ಮಂಗಳೂರು, ಏಪ್ರಿಲ್ 6: ಮಂಗಳೂರಿನ ಹೃದಯ ಭಾಗದಲ್ಲಿರುವ ಸೇಂಟ್ ಅಲೋಶಿಯಸ್ ಕಾಲೇಜು ಇಡೀ ಕರ್ನಾಟಕದಲ್ಲೇ ಎರಡನೇ ಉನ್ನತ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಗಿದೆ. ಇನ್ನು ದೇಶದ ಅತ್ಯುತ್ತಮ ಕಾಲೇಜುಗಳ ಪಟ್ಟಿಯಲ್ಲಿ ಸೇಂಟ್ ಅಲೋಶಿಯಸ್ ಕಾಲೇಜು 44 ನೇ ಸ್ಥಾನ ಪಡೆದುಕೊಂಡಿದೆ.

ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕಾಲೇಜುಗಳಿಗೆ ಶ್ರೇಯಾಂಕ ನೀಡಿದ್ದು ಅಲೋಶಿಯಸ್ ಕಾಲೇಜು ಉನ್ನತ ಮಟ್ಟವನ್ನು ಸಂಪಾದಿಸಿದೆ. ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್ಸಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಭಾರತದಲ್ಲೇ ಉನ್ನತ ಸ್ಥಾನದಲ್ಲಿದೆ. ಇದೀಗ ಹೊಸ ಸೇರ್ಪಡೆಯೇಂಬಂತೆ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜ್ (ಅಟೊನೊಮಸ್) ಎರಡನೇ ಸ್ಥಾನ ಪಡೆದಿದೆ.['ನಾಸಾ' ಗೆ ತೆರಳಿದ 'ಎಕ್ಸ್ ಪರ್ಟ್' ವಿದ್ಯಾರ್ಥಿಗಳು]

ದೇಶಾದಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಐದು ನಿಯತಾಂಕಗಳನ್ನು ಆಧರಿಸಿ ಈ ಶ್ರೇಯಾಂಕವನ್ನು ನೀಡಲಾಗಿತ್ತು. ಇವುಗಳಲ್ಲಿ ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರ ಆಚರಣೆಗಳು, ಪದವಿ ಫಲಿತಾಂಶಗಳು ಮತ್ತು ವಿದ್ಯಾರ್ಥಿಗಳ ಗ್ರಹಿಕೆಯ ಆಧಾರದ ಮೇಲೆ ಸೇಂಟ್ ಅಲೋಶಿಯಸ್ ಇಡೀ ಕರ್ನಾಟಕದಲ್ಲೇ ಎರಡನೇ ಸ್ಥಾನ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದೆ. ಮಾತ್ರವಲ್ಲ ಇಡೀ ದೇಶದಲ್ಲೇ 44ನೇ ಸ್ಥಾನದಲ್ಲಿರುವ ಕಾಲೇಜು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಪ್ರಾಂಶುಪಾಲರ ಮಾತು

ಪ್ರಾಂಶುಪಾಲರ ಮಾತು

ಶೈಕ್ಷಣಿಕ ಸಾಧನೆಯಿಂದ ರಾಷ್ಟ್ರೀಯವಾಗಿ ಹಾಗೂ ರಾಜ್ಯದಲ್ಲಿ ಗುರುತಿಸಿಕೊಂಡು ಅಗ್ರಸ್ಥಾನ ಪಡೆದಿರುವ ಕಾಲೇಜಿನ ಬಗ್ಗೆ ಸೇಂಟ್ ಅಲೋಶಿಯಸ್ ಕಾಲೇಜ್ ಪ್ರಾಂಶುಪಾಲರಾದ ಫಾ. ಸ್ವೀಬರ್ಟ್ ಹೇಳುವುದು ಹೀಗೆ. "ನಮ್ಮ ಕಾಲೇಜು ಎಲ್ಲಾ ಶಿಕ್ಷಣ ಸಂಸ್ಥೆಗಳ ಪೈಕಿ ರಾಷ್ಟ್ರೀಯ ಶ್ರೇಣಿಯ ಪಟ್ಟಿಯಲ್ಲಿ ಗುರುತಿಸಿಕೊಂಡಿರುವುದನ್ನು ತಿಳಿದು ಬಹಳ ಹೆಮ್ಮೆಯಾಗುತ್ತದೆ," ಎಂದು ಹೇಳಿದ್ದಾರೆ.

ನಿಜಕ್ಕೂ ಪ್ರಶಂಸನೀಯ

ನಿಜಕ್ಕೂ ಪ್ರಶಂಸನೀಯ

ನಮ್ಮ ಸಂಸ್ಥೆಯು ಅಸಾಧಾರಣ ಸಂಶೋಧನೆ, ಉತ್ತಮ ಬೋಧನೆ, ಸಂಪನ್ಮೂಲ ಹಾಗೂ ವಿದ್ಯಾರ್ಥಿಗಳ ಉನ್ನತ ಫಲಿತಾಂಶದ ಫಲವಾಗಿ ರಾಜ್ಯದಲ್ಲೇ ಎರಡನೇ ಸ್ಥಾನ ಹಾಗೆಯೇ ದೇಶದಲ್ಲೇ 44ನೆ ಸ್ಥಾನ ಪಡೆಯಲು ಸಾಧ್ಯವಾಗಿದೆ. ನಮ್ಮ ಕಾಲೇಜು ಇಷ್ಟೆಲ್ಲಾ ಸಾಧನೆಯ ಮೈಲಿಗಲ್ಲನ್ನು ಸೃಷ್ಟಿಸಿದ್ದು ನಿಜಕ್ಕೂ ಪ್ರಶಂಸನೀಯ ಎಂದು ಪ್ರಾಂಶುಪಾಲರು ಹೇಳಿದ್ದಾರೆ.[ಪುತ್ತೂರು ಮೂಲದ ವೈದ್ಯೆ ಅನ್ನಪೂರ್ಣ ಕಿಣಿಗೆ ಅಮೆರಿಕದ ಪರಮೋಚ್ಚ ಪ್ರಶಸ್ತಿ]

ಮತ್ತಷ್ಟು ಅತ್ಯುತ್ತಮ ಸ್ಥಾನಕ್ಕೆ

ಮತ್ತಷ್ಟು ಅತ್ಯುತ್ತಮ ಸ್ಥಾನಕ್ಕೆ

ಪ್ರತಿ ವರ್ಷ ನಾವು ಪಠ್ಯಕ್ರಮದ ಜೊತೆಗೆ ಹೊಸ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತೇವೆ. ಹಾಗೆಯೇ ಈ ವರ್ಷ ನಾವು ಮಾಹಿತಿ ವಿಶ್ಲೇಷಣೆ ಮತ್ತು ಆಹಾರ ವಿಜ್ಞಾನ ಹಾಗೂ ಪೋಷಣೆಯ ವಿಷಯವನ್ನು ಪರಿಚಯಿಸಿದ್ದೇವೆ. ನಾವು ಸಂಸ್ಥೆಯನ್ನು ಮತ್ತಷ್ಟು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುವ ಬಗ್ಗೆ ಶ್ರಮ ವಹಿಸುತ್ತೇವೆ ಎಂದು ಸಂತಸದ ಮಾತುಗಳನ್ನಾಡುತ್ತಾರೆ ಫಾ. ಸ್ವೀಬರ್ಟ್.

ಉಳಿದ ಕಾಲೇಜುಗಳ ಪಟ್ಟು

ಉಳಿದ ಕಾಲೇಜುಗಳ ಪಟ್ಟು

ದಕ್ಷಿಣ ಕನ್ನಡ ಜಿಲ್ಲೆಯ ಇತರ ಶೈಕ್ಷಣಿಕ ಸಂಸ್ಥೆಗಳ ಪೈಕಿ, ವಿಶ್ವವಿದ್ಯಾಲಯಗಳಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯ 83 ನೇ ಸ್ಥಾನ, ಕಾಲೇಜುಗಳ ಪೈಕಿ ಉಜಿರೆಯ ಎಸ್ಡಿಎಂ ಕಾಲೇಜ್ 71 ನೇ ಸ್ಥಾನ ಪಡೆದಿದೆ. ಒಟ್ಟಾರೆಯಾಗಿ ಶ್ರೇಯಾಂಕ ಪಟ್ಟಿಯಲ್ಲಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ 30 ನೇ ಸ್ಥಾನ ಎನ್ಐಟಿ-ಕೆ ಸುರತ್ಕಲ್ 65 ನೇ ಸ್ಥಾನ ಪಡೆದಿದೆ.

ಸಮೀಕ್ಷೆ

ಸಮೀಕ್ಷೆ

ಈ ಬಾರಿಯ ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟು 2,995 ಸಂಸ್ಥೆಗಳನ್ನು ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯು 232 ವಿಶ್ವವಿದ್ಯಾಲಯಗಳು, 1,024 ಎಂಜಿನಿಯರಿಂಗ್ ಸಂಸ್ಥೆಗಳು, 546 ಮ್ಯಾನೇಜ್ ಮೆಂಟ್ ಸಂಸ್ಥೆಗಳು, 318 ವೈದ್ಯಕೀಯ ಸಂಸ್ಥೆಗಳು ಮತ್ತು 637 ಸಾಮಾನ್ಯ ಪದವಿ ಕಾಲೇಜುಗಳನ್ನು ಒಳಗೊಂಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+