ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿಗೆ 'ಎಕ್ಸೆಲೆನ್ಸ್' ಗೌರವ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 11: ನಗರದ ಅತ್ಯಂತ ಹಳೆಯ ಹಾಗು ಪ್ರತಿಷ್ಠಿತ ಸೇಂಟ್ ಆಗ್ನೆಸ್ ಮಹಿಳಾ ಕಾಲೇಜಿಗೆ, ಮಂಗಳೂರು ವಿಶ್ವವಿದ್ಯಾಲಯವು 'ಎಕ್ಸೆಲೆನ್ಸ್ ಕಾಲೇಜ್' ಎಂಬ ಪುರಸ್ಕಾರ ನೀಡಿ ಗೌರವಿಸಿದೆ.

ಈ ಪ್ರತಿಷ್ಠಿತ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಆಗ್ನೆಸ್ ಕಾಲೇಜ್ ಈಗ ರಾಜ್ಯದಲ್ಲೇ ಮೂರನೇ ಕಾಲೇಜ್ ಆಗಿದ್ದು, ಭಾರತದಲ್ಲೇ 18 ಕಾಲೇಜುಗಳ ಪೈಕಿ ಈ ಆಗ್ನೆಸ್ ಕಾಲೇಜು ಕೂಡಾ ಒಂದಾಗಿದೆ.[ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ಪರಿಸರ ಪ್ರೇಮ]

St Agnes college gets ‘College Excellence’ status from UGC in Mangaluru, first in city.

ಈ ಹೊಸ ಗರಿಮೆಯಿಂದ ಈ ಕಾಲೇಜಿಗೆ ಹೊಸ ಪ್ರಯೋಗಾಲಯ, ಯಂತ್ರೋಪಕರಣಗಳಂತಹ ಸೌಲಭ್ಯಗಳನ್ನು ಅಪ್ಗ್ರೇಡ್ ಮತ್ತು ಸೆಮಿನಾರ್ ಕಾರ್ಯಾಗಾರ ವ್ಯವಸ್ಥಿತವಾಗಿ ನಡೆಸಲು ಸಹಕಾರಿಯಾಗಿದೆ. ಈ ಮಾನ್ಯತೆ ದೊರಕಿದ ಬಗ್ಗೆ ಸಂತಸ ವ್ಯಕ್ತಪಡಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್ ಎಂ ಜೆಸ್ವಿನ, ಈ "ಎಕ್ಸೆಲೆನ್ಸ್ ಕಾಲೇಜ್" ಎಂಬ ಹೆಗ್ಗಳಿಕೆಗೆ ಪಾತ್ರವಾದ ನಮ್ಮ ಕಾಲೇಜ್ ಇನ್ನು ಮುಂದಿನ ದಿನಗಳಲ್ಲಿ ಯು.ಜಿ.ಸಿ ಮತ್ತು ಪಿ.ಜಿ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸುಧಾರಣೆಯ ಗುರಿಯನ್ನು ಹೊಂದಿದೆ ಎಂದು ಒನ್ ಇಂಡಿಯಾಕ್ಕೆ ಹೇಳಿದರು.

ನಾಕ್ ನಡೆಸಿದ ಮಾನ್ಯತಾ ಪ್ರಕ್ರಿಯೆಯಲ್ಲಿ ಈ ಕಾಲೇಜು 'ಎ' ಗ್ರೇಡ್ ಪಡೆದಿದೆ. ಇದಲ್ಲದೆ 2016 ರಲ್ಲಿ ಯುಜಿಸಿಯಿಂದ 'ಉತ್ಕೃಷ್ಟ ಸಾಧನೆಯ ಸಾಮರ್ಥ್ಯವಿರುವ ಕಾಲೇಜ್' ಎನ್ನುವ ಮಾನ್ಯತೆಯನ್ನು ಪಡೆದ್ದಿದ್ದು ಈಗ ಅದರೊಂದಿಗೆ ಮಂಗಳೂರು ವಿಶ್ವವಿದ್ಯಾಲಯ 'ಎಕ್ಸೆಲೆನ್ಸ್ ಕಾಲೇಜ್' ಎಂದು ಘೋಷಣೆ ಮಾಡಲಾಗಿದೆ.

ಸೇಂಟ್ ಆಗ್ನೆಸ್ ಕಾಲೇಜು ಮಂಗಳೂರು , ಭಾರತದ ಪಶ್ಚಿಮ ಕರಾವಳಿಯ ಮೊದಲ ಕ್ಯಾಥೊಲಿಕ್ ಮಹಿಳೆಯರ ಕಾಲೇಜ್ ಆಗಿದ್ದು ಇದನ್ನು 1921ರಲ್ಲಿ ಮದರ್ ಆಲೋಯ್ಸಿಯ ಸ್ಥಾಪಿಸಿದ್ದಾರೆ.ಇನ್ನು 2021ನೇ ವರ್ಷದಲ್ಲಿ ಶತಮಾನೋತ್ಸವ ಆಚರಿಸಲಿದೆ.

English summary
St. Agnes College (Autonomous), which received it's autonomy in 2007, has now been given the status of 'College of Excellence' by the University Grant Commission in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X