ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸಿವು ಮುಕ್ತ ರಾಜ್ಯಕ್ಕಾಗಿ ಇಂದಿರಾ ಕ್ಯಾಂಟೀನ್, ಏನಿದರ ವಿಶೇಷ?

By Mahesh
|
Google Oneindia Kannada News

ಬೆಂಗಳೂರು, ಜೂನ್ 14: ಲಕ್ಷಾಂತರ ಮಂದಿ ಹಸಿವು ನೀಗಿಸಲು ಬೆಂಗಳೂರಿನಲ್ಲಿ ರಿಯಾಯತಿ ದರದ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಬಜೆಟ್ ನಲ್ಲ್ ಘೋಷಿಸಿದಂತೆ, ಸಿದ್ದರಾಮಯ್ಯ ಸರ್ಕಾರ ತನ್ನ ಮಹತ್ವ ಯೋಜನೆಯನ್ನು ಸಾಕಾರಗೊಳಿಸುತ್ತಿದೆ. ನಮ್ಮ ಕ್ಯಾಂಟೀನ್ ಎಂಬ ಹೆಸರು ಬದಲಾಗಿ ಇಂದಿರಾ ಕ್ಯಾಂಟೀನ್ ಹೆಸರು ಬಂದಿದೆ. ಬೆಂಗಳೂರಿನ ಪ್ರತಿ ವಾರ್ಡಿನಲ್ಲೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಲಭ್ಯವಾಗಲಿದೆ.

ಸರ್ಕಾರ ರಾಜ್ಯದ ಜನರನ್ನು ಹಸಿವು ಮುಕ್ತಗೊಳಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆ ಬರಗಾಲದಲ್ಲೂ ಜನರು ಹಸಿವಿನಿಂದ ನರಳದಂತೆ ಮಾಡಿದೆ. ಈಗ ಇದೇ ನಿಟ್ಟಿನಲ್ಲಿ ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಸರ್ಕಾರ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಪೂರೈಸುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಿದೆ.

ಸರ್ಕಾರ ರಾಜ್ಯದ ಜನರನ್ನು ಹಸಿವು ಮುಕ್ತಗೊಳಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆ ಬರಗಾಲದಲ್ಲೂ ಜನರು ಹಸಿವಿನಿಂದ ನರಳದಂತೆ ಮಾಡಿದೆ. ಈಗ ಇದೇ ನಿಟ್ಟಿನಲ್ಲಿ ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಸರ್ಕಾರ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಪೂರೈಸುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಿದೆ.

ಜನರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಯೋಜನೆ ಬೆಂಗಳೂರಿನಲ್ಲಿ ಅದರ ಯಶಸ್ಸು ಆಧರಿಸಿ ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ರಾಜ್ಯದಾದ್ಯಂತ ವಿಸ್ತರಿಸಬೇಕೆನ್ನುವುದು ಸರ್ಕಾರದ ಯೋಚನೆಯಾಗಿದೆ.

‘ಇಂದಿರಾ ಕ್ಯಾಂಟೀನ್' ಎಲ್ಲೆಲ್ಲಿ?

‘ಇಂದಿರಾ ಕ್ಯಾಂಟೀನ್' ಎಲ್ಲೆಲ್ಲಿ?

'ಇಂದಿರಾ ಕ್ಯಾಂಟೀನ್' ಆಗಸ್ಟ್ 15ರಿಂದ ಆರಂಭವಾಗಲಿದ್ದು. ಬೆಂಗಳೂರಿನ ಎಲ್ಲಾ 198 ವಾರ್ಡ್ ಗಳಲ್ಲಿ ಏಕ ಕಾಲಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಬಿಬಿಎಂಪಿಗೆ ಸೂಚಿಸಲಾಗಿದೆ. ಅಲ್ಲದೆ, ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಷಷ್ಟನೆ ನೀಡಿದೆ.
ಇಂದಿರಾ ಕ್ಯಾಂಟೀನ್ ಯೋಜನೆಯನ್ನು ತೆರೆಯಲು ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲಾ ವಾರ್ಡ್ ಗಳಲ್ಲಿ ಎರಡರಿಂದ ಮೂರು ಜಾಗಗಳನ್ನು ಗುರುತಿಸಲಾಗಿದೆ. 140 ವಾರ್ಡ್ ಗಳಲ್ಲಿ ಕ್ಯಾಂಟೀನ್ ಗಾಗಿ ಜಾಗವನ್ನು ಈಗಾಗಲೇ ಅಳವಡಿಸಲಾಗಿದೆ.

ಕೇಂದ್ರಿಕೃತ ಅಡುಗೆ ಮನೆ

ಕೇಂದ್ರಿಕೃತ ಅಡುಗೆ ಮನೆ

ಕೇಂದ್ರಿಕೃತ ಅಡುಗೆ ಮನೆ ಮೂಲಕ ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪೂರೈಸಲಾಗುತ್ತದೆ. ಮತ್ತು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಅಡುಗೆ ಮನೆ ನಿರ್ಮಿಸಲಾಗುತ್ತದೆ. ಪ್ರತಿ ಇಂದಿರಾ ಕ್ಯಾಂಟೀನ್ ಗೆ 32 ಲಕ್ಷ ರುಪಾಯಿ ವೆಚ್ಚವಾಗುತ್ತಿದ್ದು, ಲ್ಯಾಂಡ್ ಆರ್ಮಿಯಿಂದ ಕಟ್ಟಡ ನಿರ್ಮಿಸಲಿದೆ. ಶೇ 33ರಷ್ಟು ಅಡುಗೆ ಕೋಣೆಗಳನ್ನು ಸ್ರ್ತೀ ಶಕ್ತಿ ಸಂಘಗಳಿಗೆ ವಹಿಸಲು ನಿರ್ಧರಿಸಲಾಗಿದೆ. ಜೊತೆಗೆ 198 ಕ್ಯಾಂಟೀನ್ ಗಳನ್ನುನೋಡಿಕೊಳ್ಳಲು ಉನ್ನತ ಅಧಿಕಾರಿ ಸಮಿತಿ ನೇಮಕ ಮಾಡಲಾಗಿದೆ.

ಇದರ ಒಟ್ಟು ವೆಚ್ಚ 15 ಕೋಟಿ ರು.ಗಳು

ಇದರ ಒಟ್ಟು ವೆಚ್ಚ 15 ಕೋಟಿ ರು.ಗಳು

ಕ್ಯಾಂಟೀನ್ ನ ಲಾಂಛನ ಮತ್ತು ಕ್ಯಾಂಟೀನ್ ಒಳಾಂಗಣ ವಾಸ್ತು ಶಿಲ್ಪ ವಿನ್ಯಾಸ ರೂಪಿಸಿ ಕಳುಹಿಸುವಂತೆ ಬಿಬಿಎಂಪಿ ಸಾರ್ವಜನಿಕರಿಗೆ ಮನವಿ ಮಾಡಿತ್ತು. ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾಣ ಕೈಗೊಳ್ಳಲು ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಸಮಿತಿಯ ಅಧ್ಯಕ್ಷತೆಯನ್ನು ಸಚಿವ ಜಾರ್ಜ್ ಅವರಿಗೆ ವಹಿಸಲಾಗಿದೆ. ಸಮಿತಿಯಲ್ಲಿ ಬಿಬಿಎಂಪಿ ಮೇಯರ್, ಉಪ ಮೇಯರ್, ಆಯುಕ್ತರು, ಆಹಾರ ಸಚಿವರು, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಜೊತೆ ಇರುತ್ತಾರೆ.

ಮೂರು ಹೊತ್ತು ಊಟ ತಿಂಡಿ ನೀಡಲಾಗುತ್ತದೆ

ಮೂರು ಹೊತ್ತು ಊಟ ತಿಂಡಿ ನೀಡಲಾಗುತ್ತದೆ

* ಇಂದಿರಾ ಕ್ಯಾಂಟೀನ್ ಯೋಜನೆಯಡಿಯಲ್ಲಿ ಮೂರು ಹೊತ್ತು ಊಟ ತಿಂಡಿ ನೀಡಲಾಗುತ್ತದೆ.
* 5 ರೂಪಾಯಿಗೆ ತಿಂಡಿ ಹಾಗೂ 10 ರೂಪಾಯಿಗೆ ಊಟ ನೀಡಲಾಗುತ್ತದೆ. ಇದಕ್ಕಾಗಿ ಮೆನು ಕೂಡ ತಯಾರಾಗಿದ್ದು ಮೆನು ಹೀಗಿದೆ.
ಬೆಳಗ್ಗಿನ ಉಪಹಾರ : ಇಡ್ಲಿ ಸಾಂಬಾರ್, ರೈಸ್ ಬಾತ್, ಅವಲಕ್ಕಿ ಉಪ್ಪಿಟ್ಟು, ಖಾರ ಉಪ್ಪಿಟ್ಟು, ಖಾರ ಪೊಂಗಲ್, (ವಾರದಲ್ಲಿ ಒಂದರಂತೆ,).
ಮಧ್ಯಾಹ್ನ ಮತ್ತು ರಾತ್ರಿ ಊಟ: ಅನ್ನ ಸಾರು, ಉಪ್ಪಿನಕಾಯಿ, ಹಪ್ಪಳ. ಭಾನುವಾರ : ಬಿಸಿಬೇಳೆ ಬಾತ್, ತರಕಾರಿ, ಅನ್ನ, ಪುಳಿಯೊಗರೆ ಜೀರಿಗೆ ಅನ್ನ (ಪ್ರತೀ ವಾರದಲ್ಲಿ ಒಂದು).

ಕಾಂಗ್ರೆಸ್ ಪಕ್ಷದ ಯೋಜನೆ

ಕಾಂಗ್ರೆಸ್ ಪಕ್ಷದ ಯೋಜನೆ

'ಇಂದಿರಾ ಕ್ಯಾಂಟೀನ್' ಎಂಬ ಹೆಸರು ಕಾಂಗ್ರೆಸ್ ಪಕ್ಷದ ಯೋಜನೆ ಎಂಬುದನ್ನು ಬೇಗ ಗುರುತಿಸುತ್ತದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಮತದಾರರನ್ನು ಆಕರ್ಷಿಸಲು ಇದು ನೆರವಾಗುತ್ತದೆ ಎಂಬ ತಂತ್ರ ಎಂದು ಅಪಾದನೆ ಕೇಳಿ ಬಂದಿದೆ. ಆದರೆ, ಸರ್ಕಾರ ತನ್ನ ಯೋಜನೆಯನ್ನು ಮುಂದುವರೆಸಿದೆ. ಏಪ್ರಿಲ್ 1ರಂದೇ ಆರಂಭವಾಗಬೇಕಿದ್ದ ಕ್ಯಾಂಟೀನ್ ಸದ್ಯ ಅಗಸ್ಟ್ 15ರಿಂದ ಆರಂಭವಾಗಲಿದೆ.

English summary
What is Indira canteen Scheme by Siddaramaiah Government. Siddaramaiah in his budget speech introduced subsidised canteens that would be set up in every ward of Bengaluru city. From August 15th all 198 canteens would provide breakfast at Rs 5 and lunch and dinner at Rs 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X