Get Updates
Get notified of breaking news, exclusive insights, and must-see stories!

ಗಾಜಾ ಯುದ್ಧ ನಿಲ್ಲಿಸಲು ಟ್ರಂಪ್ ಮಾಸ್ಟರ್ ಪ್ಲಾನ್, ಶಾಂತಿ ಮಂಡಳಿಗೆ ಯಾರೆಲ್ಲಾ ಎಂಟ್ರಿ?

ಗಾಜಾ ಪಟ್ಟಿಯಲ್ಲಿ ಯುದ್ಧ ಶುರುವಾಗಿ ಬರೋಬ್ಬರಿ 2 ವರ್ಷಕ್ಕೂ ಹೆಚ್ಚು ಸಮಯ ಆಗಿದೆ, ಇಸ್ರೇಲ್ ಮತ್ತು ಹಮಾಸ್ ನಡುವೆ ಶುರುವಾಗಿದ್ದ ಈ ಕಿರಿಕ್ ಹತ್ತಾರು ಸಾವಿರ ಜನರ ಜೀವ ಬಲಿ ಪಡೆದಿರುವ ಆರೋಪ ಕೂಡ ಇದೆ. ಹೀಗಾಗಿಯೇ ಗಾಜಾ ಪಟ್ಟಿಯಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಶಯ. ಹೀಗಿದ್ದರೂ ಏನೆಲ್ಲಾ ಪ್ರಯತ್ನ ಮಾಡುತ್ತಿದ್ದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ. ಗಾಜಾ ಪರಿಸ್ಥಿತಿ ದಿನದಿಂದ ದಿನಕ್ಕೆ ಇನ್ನಷ್ಟು ಭೀಕರವಾಗುತ್ತಾ ಇದ್ದು, ಸಾವಿನ ಸಂಖ್ಯೆ ಕೂಡ ಏರಿಕೆ ಆಗುತ್ತಿದೆ. ಇಷ್ಟೆಲ್ಲದರ ನಡುವೆ ಡೊನಾಲ್ಡ್ ಟ್ರಂಪ್ ಅವರು ಯುದ್ಧ ನಿಲ್ಲಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಗಾಜಾ ಪಟ್ಟಿಯಲ್ಲಿ ಮಾತ್ರವಲ್ಲದೆ, ಇಡೀ ಪ್ಯಾಲೆಸ್ತೀನ್ ಭಾಗದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡಲು ಡೊನಾಲ್ಡ್ ಟ್ರಂಪ್ ರಣತಂತ್ರ ರೂಪಿಸಿದ್ದಾರೆ. ಕೇವಲ ಎರಡು ದೇಶಗಳ ನಡುವೆ ಸಂಧಾನ ಮಾಡಿಸಿದರೆ ಆಗ ಮತ್ತೆ ಮತ್ತೆ ಯುದ್ಧ ಅಥವಾ ಹಿಂಸಾಚಾರ ಶುರುವಾಗುವ ಅಪಾಯ ಕಾಡುತ್ತಲೇ ಇರುತ್ತದೆ. ಹೀಗಾಗಿ ಇಡೀ ಜಗತ್ತನ್ನು ಒಂದು ಕಡೆ ಸೇರಿಸಿ, ಘಟಾನುಘಟಿ ದೇಶಗಳ ಬೆಂಬಲ ಪಡೆದು ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡಲು ಇದೀಗ ಡೊನಾಲ್ಡ್ ಟ್ರಂಪ್ ಹೊಸ ಮಂಡಳಿ ರಚಿಸಲು ಮುಂದಾಗಿದ್ದಾರೆ. ಟ್ರಂಪ್ ಅವರ ಶಾಂತಿ ಮಂಡಳಿಯಲ್ಲಿ ಪ್ರಪಂಚದ ಘಟಾನುಘಟಿ ದೇಶಗಳು ಸದಸ್ಯ ಸ್ಥಾನ ಪಡೆಯಲಿದ್ದು, ಯಾವೆಲ್ಲಾ ದೇಶಗಳನ್ನು ಆಹ್ವಾನಿಸಲಾಗಿದೆ ಎಂಬುದನ್ನು ತಿಳಿಯೋಣ ಬನ್ನಿ.

Trump Peace Board Gaza World Leaders Invited for Diplomatic Talks

ಶಾಂತಿ ಮಂಡಳಿಯಲ್ಲಿ ಯಾರೆಲ್ಲಾ ಇರುತ್ತಾರೆ?

2023 ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಇಸ್ರೇಲ್ ಮತ್ತು ಹಮಾಸ್ ಯುದ್ಧ ವಿನಾಶ ಸೃಷ್ಟಿಸುತ್ತಿದೆ. ಜೊತೆಗೆ ಅಕ್ಕಪಕ್ಕದ ದೇಶಗಳು ಕೂಡ ಬಡಿದಾಡುವ ಸ್ಥಿತಿ ನಿರ್ಮಾಣ ಆಗಿತ್ತು. ಹೀಗಾಗಿ ಇಸ್ರೇಲ್ ಮತ್ತು ಹಮಾಸ್ ಯುದ್ಧಕ್ಕೆ ಬ್ರೇಕ್ ಹಾಕಲು, ಆ ಮೂಲಕ ಗಾಜಾ ಪಟ್ಟಿಯನ್ನು ಶಾಂತಗೊಳಿಸಲು ಟ್ರಂಪ್ ಪ್ಲಾನ್ ಮಾಡಿದ್ದಾರೆ. ಇದಕ್ಕೆ 20 ಅಂಶಗಳ ಯೋಜನೆ ರೂಪಿಸಿದ್ದು ಇದರ ಭಾಗವಾಗಿ ಗಾಜಾ ಶಾಂತಿ ಮಂಡಳಿ ರಚನೆ ಮಾಡಿದ್ದಾರೆ, ಈ ಮಂಡಳಿಗೆ ಯುರೋಪ್ ಒಕ್ಕೂಟದ ದೇಶಗಳು, ದಕ್ಷಿಣ ಅಮೆರಿಕ ಮತ್ತು ಮಧ್ಯಪ್ರಾಚ್ಯ ಮೂಲದ ದೇಶಗಳನ್ನ ಸದಸ್ಯರಾಗಿ ಬರಲು ಆಹ್ವಾನಿಸಿದ್ದಾರೆ ಟ್ರಂಪ್. ಡೊನಾಲ್ಡ್ ಟ್ರಂಪ್ ಆಹ್ವಾನಿಸಿದ ದೇಶಗಳ ಪಟ್ಟಿ ಮುಂದೆ ಇದೆ.

ಶಾಂತಿ ಮಂಡಳಿಗೆ ಸೇರಲು ಆಹ್ವಾನ

ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಮೊದಲು ಗಾಜಾ ಪಟ್ಟಿ ಯುದ್ಧ ನಿಲ್ಲಬೇಕಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಗಾಜಾ ಶಾಂತಿ ಮಂಡಳಿ'ಗೆ ಸೇರಲು ಭಾರತವೂ ಸೇರಿ ಅಲ್ಬೇನಿಯಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಹ್ರೇನ್, ಬೆಲಾರಸ್, ಬ್ರೆಜಿಲ್ & ಕೆನಡಾ, ಚೀನಾ, ಸೈಪ್ರಸ್ ಈಜಿಪ್ಟ್, ಯುರೋಪ್ ಒಕ್ಕೂಟ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಇಂಡೋನೇಷ್ಯಾ, ಐರ್ಲೆಂಡ್, ಇಸ್ರೇಲ್, ಇಟಲಿ, ಜಪಾನ್, ಜೋರ್ಡಾನ್ ಹಾಗೂ ಕಝಕ್‌ ದೇಶಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ.

ಮೊರಾಕೊ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ನಾರ್ವೆ, ಓಮನ್, ಪಾಕಿಸ್ತಾನ, ಪರಾಗ್ವೆ, ಪೋಲೆಂಡ್ ಹಾಗೂ ಪೋರ್ಚುಗಲ್, ಕತಾರ್, ರೊಮೇನಿಯಾ, ಸೌದಿ ಅರೇಬಿಯಾ, ಸ್ಲೊವೇನಿಯಾ ದೇಶಗಳನ್ನೂ ಆಹ್ವಾನಿಸಲಾಗಿದೆ. ಇವರ ಜೊತೆಗೆ ಸಿಂಗಾಪುರ, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಜರ್ಲೆಂಡ್, ಥೈಲ್ಯಾಂಡ್, ಟರ್ಕಿ, ಯುಎಇ, ಯುನೈಟೆಡ್ ಕಿಂಗ್‌ಡಮ್, ಉಕ್ರೇನ್ & ಉಜ್ಬೇಕಿಸ್ತಾನ್, ವಿಯೆಟ್ನಾಂ ದೇಶಗಳಿಗೂ ಆಹ್ವಾನ ಹೋಗಿದೆ. ಆದರೆ ಆಹ್ವಾನ ಹೋಗಿರುವ ಎಲ್ಲಾ ದೇಶಗಳು ಶಾಂತಿ ಮಂಡಳಿ ಸೇರುವ ನಿರೀಕ್ಷೆ ಇಲ್ಲ, ಏಕೆಂದರೆ ಕೆಲವು ದೇಶಗಳು ಈ ಮಂಡಳಿಯಿಂದ ಹಿಂದೆ ಸರಿಯುವ ಸಾಧ್ಯತೆ ದಟ್ಟವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+