LIVE: ಕಾಂಗ್ರೆಸ್-19, ಬಿಜೆಪಿ-15 ಸ್ಥಾನದಲ್ಲಿ ಮುನ್ನಡೆ
ಇಂಫಾಲ, ಮಾರ್ಚ್ 11: ಮಣಿಪುರ ವಿಧಾನಸಭೆ ಚುನಾವಣೆ ಫಲಿತಾಂಶ ತಿಳಿಯುವ ಮುನ್ನ ಆ ರಾಜ್ಯದ ಬಗ್ಗೆ ಒಂದಿಷ್ಟು ವಿವರ ನಿಮಗೆ ಗೊತ್ತಿರಲಿ. ಮಣಿಪುರ ತುಂಬ ಚಿಕ್ಕ ರಾಜ್ಯ. 22,327 ಚದರ ಕಿಲೋಮೀಟರ್ ವಿಸ್ತೀರ್ಣ ಇದ್ದು, 28 ಲಕ್ಷದಷ್ಟು ಜನಸಂಖ್ಯೆ ಇದೆ. ಮಣಿಪುರಿ ಇಲ್ಲಿನ ಅಧಿಕೃತ ಭಾಷೆ. ಶೇ 86.5ರಷ್ಟು ಸಾಕ್ಷರತೆ ಪ್ರಮಾಣ ಇದೆ.
[ಗೋವಾ | ಪಂಜಾಬ್ | ಉತ್ತರಾಖಂಡ್ | ಉತ್ತರಪ್ರದೇಶ]
ಒಟ್ಟು 60 ಸಂಖ್ಯಾಬಲದ ವಿಧಾನಸಭೆ ಇದಾಗಿದ್ದು, ಅಧಿಕಾರ ಹಿಡಿಯುವುದಕ್ಕೆ 31 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು. ಕಳೆದ ಹದಿನೈದು ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಒಕ್ರಾಂ ಇಬೋಬಿ ಸಿಂಗ್ ಮುಖ್ಯಮಂತ್ರಿಯಾಗಿದ್ದು, ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಖಾತೆ ಕೂಡ ತೆರೆದಿರಲಿಲ್ಲ.[ಮಣಿಪುರ: ಆಡಳಿತ ವಿರೋಧಿ ಅಲೆಯಲ್ಲಿ ಈಜಿ ದಡ ಮುಟ್ಟುವುದೇ ಕಾಂಗ್ರೆಸ್?]

ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಬಿಗಿಯಾಗಬೇಕು, ಉದ್ಯೋಗ ಸೃಷ್ಟಿಯಾಗಬೇಕು, ಸ್ಥಳೀಯರ ಹಕ್ಕುಗಳ ರಕ್ಷಣೆ, ರಾಜ್ಯದ ಸರ್ವತೋಮುಖ ಅಭಿವೃದ್ಧಿ ಅಲ್ಲಿನ ಜನರ ಪ್ರಮುಖ ಬೇಡಿಕೆ. ಈ ಬಾರಿ ಚುನಾವಣೆಯಲ್ಲಿ ಬಹು ಚರ್ಚೆಯಾದ ವಿಷಯಗಳು ಕೂಡ ಹೌದು. ಕಾಂಗ್ರೆಸ್, ಬಿಜೆಪಿ ಹಾಗೂ ಮಣಿಪುರ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಪ್ರಮುಖ ಪಕ್ಷಗಳು.
ಮುಖ್ಯಮಂತ್ರಿ, ಕಾಂಗ್ರೆಸ್ ನ ಇಬೋಬಿ ಸಿಂಗ್, ಬಿಜೆಪಿಯ ತೌನವೋಜಮ್ ಚವೋಬಾ ಸಿಂಗ್, ಸ್ವಂತ ಪಕ್ಷ ಕಟ್ಟಿ ಕಣಕ್ಕೆ ಇಳಿದಿರುವ ಇರೋಮ್ ಶರ್ಮಿಳಾ, ಬಿಜೆಪಿಯ ಎನ್ ಬೈರೆನ್ ಸಿಂಗ್, ವೈ ಇರಬೊತ್ ಸಿಂಗ್, ಕಾಂಗ್ರೆಸ್ ನ ಗಾಯ್ ಖಂಗಮ್ ಗಂಗ್ಮೈ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.[ಮಣಿಪುರ ಚುನಾವಣಾ ಕಣದಲ್ಲಿ ಕಳಂಕಿತರೇ ಇಲ್ಲ.. ಆಶ್ಚರ್ಯ!]
Manipur CM Okram Ibobi Singh has won from Thoubal seat #ElectionResults pic.twitter.com/yaCIai2h8j
— ANI (@ANI_news) 11 March 2017
ಆದರೆ, ಈ ಬಾರಿ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ ಗೊತ್ತಾ?
ಸಿ ವೋಟರ್
ಬಿಜೆಪಿ 25-31
ಕಾಂಗ್ರೆಸ್ 17-23
ಇತರರು 9-15
ಇಂಡಿಯಾ ಟಿವಿ
ಬಿಜೆಪಿ 25
ಕಾಂಗ್ರೆಸ್ 17
ಇತರರು 9
ಇಂಡಿಯಾ ಟುಡೇ-ಮೈ ಆಕ್ಸಿಸ್ ಇಂಡಿಯಾ
ಬಿಜೆಪಿ 16-22
ಕಾಂಗ್ರೆಸ್ 30-36
ಇತರರು 3-5
#ManipurElection2017 Okram Ibobi Singh leading from Thoubal pic.twitter.com/oRllL6uOqV
— ANI (@ANI_news) 11 March 2017
ಇನ್ನು ಮತ ಎಣಿಕೆಯ ತತ್ ಕ್ಷಣದ ಮಾಹಿತಿ ನಿಮ್ಮ ಮುಂದೆ....
*11.10 AM ಇತರರು-7, ಕಾಂಗ್ರೆಸ್-19, ಬಿಜೆಪಿ-15 ಸ್ಥಾನದಲ್ಲಿ ಮುನ್ನಡೆ
*10.47 AM ಇತರರು-7, ಕಾಂಗ್ರೆಸ್-18, ಬಿಜೆಪಿ-14 ಸ್ಥಾನದಲ್ಲಿ ಮುನ್ನಡೆ
*10.15 AM ಇತರರು-4, ಕಾಂಗ್ರೆಸ್-16, ಬಿಜೆಪಿ-11 ಸ್ಥಾನದಲ್ಲಿ ಮುನ್ನಡೆ
*10.04 AM ಥೌಬಲ್ ಕ್ಷೇತ್ರದಲ್ಲಿ ಜಯಗಳಿಸಿದ ಒಕ್ರಾಂ ಇಬೋಬಿ ಸಿಂಗ್
*10 AM ಇತರರು-5, ಕಾಂಗ್ರೆಸ್-14, ಬಿಜೆಪಿ-9 ಸ್ಥಾನದಲ್ಲಿ ಮುನ್ನಡೆ
*9.55 AM ಇತರರು-5, ಕಾಂಗ್ರೆಸ್-14, ಬಿಜೆಪಿ-8 ಸ್ಥಾನದಲ್ಲಿ ಮುನ್ನಡೆ
*9.53 AM ಥೌಬಲ್ ಕ್ಷೇತ್ರದಿಂದ ಮುಖ್ಯಮಂತ್ರಿ ಒಕ್ರಾನ್ ಇಬೋಬಿ ಸಿಂಗ್ ವಿರುದ್ಧ ಸ್ಪರ್ಧಿಸಿರುವ ಇರೋಮ್ ಶರ್ಮಿಳಾಗೆ ಹಿನ್ನಡೆ
*9.50 AM ಇತರರು-4, ಕಾಂಗ್ರೆಸ್-13, ಬಿಜೆಪಿ-6 ಸ್ಥಾನದಲ್ಲಿ ಮುನ್ನಡೆ
* 9.37 AM ಇತರರು-3, ಕಾಂಗ್ರೆಸ್-10, ಬಿಜೆಪಿ-5 ಸ್ಥಾನದಲ್ಲಿ ಮುನ್ನಡೆ
* 9.33 AM ಇತರರು-3, ಕಾಂಗ್ರೆಸ್-10, ಬಿಜೆಪಿ-4 ಸ್ಥಾನದಲ್ಲಿ ಮುನ್ನಡೆ
*9.30 AM ಇತರರು-3, ಕಾಂಗ್ರೆಸ್-9, ಬಿಜೆಪಿ-4 ಸ್ಥಾನದಲ್ಲಿ ಮುನ್ನಡೆ
*9.25 AM ಇತರರು-3, ಕಾಂಗ್ರೆಸ್-8, ಬಿಜೆಪಿ-3 ಸ್ಥಾನದಲ್ಲಿ ಮುನ್ನಡೆ
*9.20 AM ಇತರರು-2, ಕಾಂಗ್ರೆಸ್-7, ಬಿಜೆಪಿ-3 ಸ್ಥಾನದಲ್ಲಿ ಮುನ್ನಡೆ
*9.10 AM ಇತರರು-2, ಕಾಂಗ್ರೆಸ್-6, ಬಿಜೆಪಿ-1 ಸ್ಥಾನದಲ್ಲಿ ಮುನ್ನಡೆ
*9.04 AM ಇತರರು-1, ಕಾಂಗ್ರೆಸ್-5, ಬಿಜೆಪಿ-1 ಸ್ಥಾನದಲ್ಲಿ ಮುನ್ನಡೆ
*8.52 AM ಇತರರು-2, ಕಾಂಗ್ರೆಸ್-2, ಬಿಜೆಪಿ-1 ಸ್ಥಾನದಲ್ಲಿ ಮುನ್ನಡೆ
*8.40 AM ಒಂದು ಸ್ಥಾನದಲ್ಲಿ ಬಿಜೆಪಿ ಮುನ್ನಡೆ. ಕಾಂಗ್ರೆಸ್-2, ಬಿಜೆಪಿ-1, ಇತರರು-1
*8.26 AM ಒಂದು ಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ
*8.30 AM ಇತರರು ಒಂದು ಸ್ಥಾನದಲ್ಲಿ ಮುನ್ನಡೆ
*8.36 AM ಥೌಬಲ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ, ಕಾಂಗ್ರೆಸ್ ನ ಒಕ್ರಾಂ ಇಬೋಬಿ ಸಿಂಗ್ ಮುನ್ನಡೆ
* ಮಳೆ ಹಾಗೂ ಬಿಗಿ ಭದ್ರತೆ ಮಧ್ಯೆ ಮಣಿಪುರದಲ್ಲಿ ಮತ ಎಣಿಕೆ
Amidst rain and tight security, counting set to begin in Manipur. Will Ibobi make a comeback or will BJP break another bastion? pic.twitter.com/AGm4nzr1q6
— Subhajit Sengupta (@SubhajitSG) 11 March 2017
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications