Get Updates
Get notified of breaking news, exclusive insights, and must-see stories!

ತೇಜ್ ಪುರ್ ಬಳಿ ಸುಖೋಯ್ 30 ಯುದ್ಧ ವಿಮಾನ ನಾಪತ್ತೆ

ಭಾರತ ಹಾಗೂ ಚೀನಾ ಗಡಿಭಾಗದ ತೇಜ್ ಪುರ್ ಬಳಿ ಹಾರಾಟ ನಡೆಸಿದ್ದ ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಸುಖೋಯ್ 30 ಮಂಗಳವಾರದಂದು ಕಣ್ಮರೆಯಾಗಿದೆ.

ತೇಜ್ ಪುರ್(ಅಸ್ಸಾಂ), ಮೇ 23: ಭಾರತ ಹಾಗೂ ಚೀನಾ ಗಡಿಭಾಗದ ತೇಜ್ ಪುರ್ ಬಳಿ ಹಾರಾಟ ನಡೆಸಿದ್ದ ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಸುಖೋಯ್ 30 ಮಂಗಳವಾರದಂದು ಕಣ್ಮರೆಯಾಗಿದೆ.

ಮಂಗಳವಾರ ಮಧ್ಯಾಹ್ನ ತೇಜ್ ಪುರ್ ದ ವಾಯುನೆಲೆಯಿಂದ ಟೇಕಾಫ್ ಆದ ಬಳಿಕ 60 ಕಿ.ಮೀ ದೂರದ ನಂತರ ರೇಡಿಯೋ ಹಾಗೂ ರಡಾರ್ ಸಂಪರ್ಕ ಕಳೆದುಕೊಂಡಿದೆ. ಯುದ್ಧವಿಮಾನದಲ್ಲಿ ಇಬ್ಬರು ಪೈಲಟ್ ಗಳಿದ್ದರು ಎಂದು ತಿಳಿದು ಬಂದಿದೆ.

IAF's Sukhoi-30 with two pilots on board goes missing
ಮಂಗಳವಾರ ಬೆಳಗ್ಗೆ 9.30ರ ಸಮಯದಲ್ಲಿ ಇದೇ ವಿಮಾನ, ಅರುಣಾಚಲ ಪ್ರದೇಶದಿಂದ ಮೊದಲ ಬಾರಿಗೆ ಸಂಪರ್ಕ ಕಳೆದುಕೊಂಡಿತ್ತು. ಬಳಿಕ ಸುಮಾರು 11.30 ರ ಸಮಯದಲ್ಲಿ ತೇಜ್​ಪುರ್​ ವಾಯುನೆಲೆ ಸಮೀಪದಲ್ಲಿ ಕೊನೆಯ ಸಂಪರ್ಕಕ್ಕೆ ಸಿಕ್ಕಿತ್ತು.

ಆದರೆ, ನಂತರ ಪುನಃ ಹಾರಾಟ ಆರಂಭಿಸಿ 60 ಕಿ.ಮೀ ಕ್ರಮಿಸುವಷ್ಟರಲ್ಲಿ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ. ವಾಯುಸೇನೆಯಿಂದ ತೀವ್ರ ಶೋಧ ಕಾರ್ಯ ಮುಂದುವರಿದಿದೆ.ಚೀನಾ ಗಡಿಭಾಗ ಕೇವಲ 170 ಕಿಮೀ ಅಂತರದಲ್ಲಿ ತೇಜ್​ಪುರ್​ ವಾಯುನೆಲೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+