ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE : ಅತಂತ್ರ ವಿಧಾನಸಭೆಯತ್ತ ಗೋವಾ

ಪ್ರವಾಸೋದ್ಯಮವನ್ನೇ ಜೀವಾಳವಾಗಿಸಿಕೊಂಡ ಪುಟ್ಟ ರಾಜ್ಯ ಗೋವಾದ ರಾಜಕೀಯ ಭವಿಷ್ಯ ಇನ್ನೇನು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ.

By Sachhidananda Acharya
|
Google Oneindia Kannada News

ನವದೆಹಲಿ, ಮಾರ್ಚ್ 11: ಪ್ರವಾಸೋದ್ಯಮವನ್ನೇ ಜೀವಾಳವಾಗಿಸಿಕೊಂಡ ಪುಟ್ಟ ರಾಜ್ಯ ಗೋವಾದ ರಾಜಕೀಯ ಭವಿಷ್ಯ ಇನ್ನೇನು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ.

ಗೋವಾದಲ್ಲಿ ಫೆಬ್ರವರಿ 4 ರಂದು 40 ಸ್ಥಾನಗಳಿಗೆ ಏಕಕಾಲದಲ್ಲಿ ಮತದಾನ ನಡೆದಿದೆ. ಇದೀಗ ಮಾರ್ಚ್ 11ರಂದು ಇನ್ನೇನು ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿಗಳ ಲೈವ್ ಅಪ್ಡೇಟ್ ನಿಮಗೆ ಇಲ್ಲಿ ಸಿಗಲಿದೆ.

40 ವಿಧಾನಸಭಾ ಸ್ಥಾನಗಳಿರುವ ಗೋವಾದಲ್ಲಿ 2012ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 21, ಕಾಂಗ್ರೆಸ್ 9, ಎಂಜಿಪಿ (ಮಹರಾಷ್ಟ್ರವಾದಿ ಗೋಮಂತಕ್ ಪಾರ್ಟಿ) 3 ಗೋವಾ ವಿಕಾಸ್ ಪಾರ್ಟಿ 2 ಹಾಗೂ ಇತರರು 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.[ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್]

1.37: ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ದಿಗಂಬರ ಕಾಮತ್ ಮರ್ಗೋವಾ ಕ್ಷೇತ್ರದಲ್ಲಿ 4177 ಮತಗಳಿದಂ ಗೆದ್ದಿದ್ದಾರೆ.
ಸದ್ಯದ ಚಿತ್ರಣ: ಗೆಲುವು/ಮುನ್ನಡೆ (ಒಟ್ಟು)
ಬಿಜೆಪಿ 9/3 (12)
ಕಾಂಗ್ರೆಸ್ 11/2 (13) + ಎನ್.ಸಿ.ಪಿ 1
ಎಂಜಿಪಿ 1
ಪಕ್ಷೇತರ 1
ಗೋವಾ ಫಾರ್ವರ್ಡ್ 3 (2)

11. 55: ಕಾಂಗ್ರೆಸಿನ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಪೋರಿಯಂ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಗೋವಾ ಅತಂತ್ರವಾಗುವ ಸಾಧ್ಯತೆಗಳು ಕಾಣಿಸುತ್ತಿವೆ.
ಗೆಲುವು (16/40): ಬಿಜೆಪಿ 6, ಕಾಂಗ್ರೆಸ್ 6, ಎನ್.ಸಿ.ಪಿ 1, ಎಂಜಿಪಿ 1, ಪಕ್ಷೇತರ 1, ಗೋವಾ ಫಾರ್ವರ್ಡ್ 2

11.30: ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಹೀನಾಯ ಸೋಲು ಕಂಡಿದ್ದಾರೆ. ದಯಾನಂದ್ ರಘುನಾಥ್ ಸೋಪ್ಟೆ ವಿರುದ್ದ ಮ್ಯಾಂಡ್ರಮ್ ಕ್ಷೇತ್ರದಲ್ಲಿ ಪರ್ಸೇಕರ್ ಮುಖಭಂಗ ಅನುಭವಿಸಿದ್ದಾರೆ.
ಗೆಲುವು: ಬಿಜೆಪಿ 5, ಕಾಂಗ್ರೆಸ್ 4, ಎನ್.ಸಿ.ಪಿ 1, ಎಂಜಿಪಿ 1, ಪಕ್ಷೇತರರು 1

11. 20: ಡಬೋಲಿಂ ಕ್ಷೇತ್ರದಲ್ಲಿ ಬಿಜೆಪಿಯ ಮೌವಿಮ್, ಬೆನೌಲಿಂನಲ್ಲಿ ಎನ್.ಸಿ.ಪಿಯ ಚರ್ಚಿಲ್ ಅಲೆಮಾವೋ, ಶಿರೋಡದಲ್ಲಿ ಕಾಂಗ್ರೆಸಿನ ಸುಭಾಶ್ ಶಿರೋಡ್ಕರ್, ಮಪುಸಾದಲ್ಲಿ ಬಿಜೆಪಿಯ ಫ್ರಾನ್ಸಿಸ್ಕೊ ಡಿ ಸೋಜಾ, ಪ್ರಿಯೊಲ್ ನಲ್ಲಿ ಪಕ್ಷೇತರ ಻ಅಭ್ಯರ್ಥಿ ಗೋವಿಂದ್ ಗೌಡೆ ಜಯಶಾಲಿಯಾಗಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ 9 ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದ್ದು ಬಿಜೆಪಿ 4, ಕಾಂಗ್ರೆಸ್ 2, ಎನ್.ಸಿ.ಪಿ 1, ಎಂಜಿಪಿ 1, ಪಕ್ಷೇತರರು 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

11.05: ಸಾವೊರ್ಡೆಂ ಕ್ಷೇತ್ರದಲ್ಲಿ ಎಂಜಿಪಿಯ ದೀಪಕ್ ಪವಾಸ್ಕರ್ ಹಾಗೂ ಬಿಚೋಲಿಂ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ಪಟ್ನೇಕರ್, ಮಾಯೆಮ್ ನಲ್ಲಿ ಬಿಜೆಪಿಯ ಪ್ರವೀಣ್ ಝಾಟ್ಯೆ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸಿನ ಅ಻ಭ್ಯರ್ಥಿ ಫ್ರಾನ್ಸಿಸ್ಕೊ ಸಿಲ್ವೆರಿಯಾ ಗೆಲುವು ಸಾಧಿಸಿದ್ದಾರೆ.

ಒಟ್ಟು ಬಿಜೆಪಿ2, ಕಾಂಗ್ರೆಸ್1, ಎಂಜಿಪಿ1 ಕ್ಷೇತ್ರದಲ್ಲಿ ಗೆಲುವು

10.40: ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ ಮೊದಲ ಖಾತೆ ತೆರೆದಿದೆ. ಬಿಜೆಪಿಯ ಗಣೇಶ್ ಗಾವ್ಕರ್ ರನ್ನು ಎಂಜಿಪಿಯ ದೀಪಕ್ ಪವಾಸ್ಕರ್ ಸಾನ್ವೊರ್ಡೆಂ ಕ್ಷೇತ್ರದಲ್ಲಿ ಸೋಲಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಮೊದಲ ಸೋಲು ತನ್ನ ಮಾಜಿ ಮಿತ್ರ ಪಕ್ಷದಿಂದಲೇ ಬಂದಿದೆ.

Goa Election Result 2017 Live

10.15: ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಭಾರೀ ಹಿನ್ನಡೆ ಅನುಭವಿಸುತ್ತಿದ್ದಾರೆ. ಎರಡನೇ ಸುತ್ತಿನ ಮತ ಎಣಿಕೆಯ ನಂತರ ಅವರು ಕಾಂಗ್ರೆಸ್ ಅಭ್ಯರ್ಥಿಯಿಂದ 4,000 ಮತಗಳ ಹಿನ್ನಡೆಯಲ್ಲಿದ್ದಾರೆ. ಇನ್ನು ಬಿಜೆಪಿಯ ಫ್ರಾನ್ಸಿಸ್ ಡಿ ಸೋಜಾ ಮತ್ತು ಗೋವಿಂದ್ ಗೌಡೆ 4000ಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದು ಗೆಲುವಿನತ್ತ ಮುನ್ನಡೆದಿದ್ದಾರೆ.

ಕಾಂಗ್ರೆಸ್ 9, ಬಿಜೆಪಿ 8 ಹಾಗೂ ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

9.55: ಕಾಂಗ್ರೆಸ್ 8, ಬಿಜೆಪಿ 7, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ. ಬೆನೌಲಿ ಕ್ಷೇತ್ರದಲ್ಲಿ ಚರ್ಚಿಲ್ ಅಲೆಮಾವೋಗೆ ಭಾರೀ ಮುನ್ನಡೆ

9.40: ಕಣದಲ್ಲಿರು ಸ್ಟಾರ್ ಅಭ್ಯರ್ಥಿಗಳಾದ ಬಿಜೆಪಿಯ ಫ್ರಾನ್ಸಿಸ್ ಡಿ ಸೋಜ ಮುನ್ನಡೆ ಕಾಯ್ದುಕೊಂಡಿದ್ದರೆ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಲ್ವಿಸ್ ಗೋಮ್ಸ್ ಹಾಗೂ ಬಿಜೆಪಿಯ ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಹಿನ್ನಡೆಯಲ್ಲಿದ್ದಾರೆ.

9.30: ಬಿಜೆಪಿಯ ಸುಭಾಷ್ ಅಲಿಯಾಸ್ ರಂಜನ್ ನಾಯಕ್ ಕನ್ಕೋಲಿಂನಲ್ಲಿ, ಕಾಂಗ್ರೆಸಿನ ಸುಭಾಷ್ ಶಿರೋಡ್ಕರ್ ಶಿರೋಡದಲ್ಲಿ, ಕಾಂಗ್ರೆಸಿನ ಪ್ರತಾಪ್ ಇಂಗ್ ರಾಣೆ ಪೊರಿಯಂನಲ್ಲಿ, ಬಿಜೆಪಿಯ ಮಿಲಿಂದ ನಾಯಕ್ ಮುರ್ಗಾವ್ ನಲ್ಲಿ, ಪಕ್ಷೇತರ ಅಭ್ಯರ್ಥಿ ಕ್ಯಾಟೆನೋ ರೊಸಾರಿಯೋ ಸಿಲ್ವ ಬೆನಾಲಿಂ ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಒಟ್ಟಾರೆ - ಕಾಂಗ್ರೆಸ್ 8, ಬಿಜೆಪಿ 6, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ

9. 25: ಮಂಡ್ರೆಂನಲ್ಲಿ ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಗೆ ಹಿನ್ನಡೆ. ಇಲ್ಲಿ ಕಾಂಗ್ರೆಸಿನ ದಯಾನಂದ್ ರಘುನಾಥ್ ಸೋಪ್ಟೆಗೆ 1000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ತಲೆಗಾಂವ್ ನಲ್ಲಿ ಕಾಂಗ್ರೆಸಿನ ಜೆನ್ನಿಫರ್ ಅಟಾನ್ಸಿಯೋ ಮುನ್ನಡೆ ಕಾಯ್ದುಕೊಂಡಿದ್ದಾರೆ.

9:20 ಬೆನಾಲಿಮ್ ನಲ್ಲಿ ಎನ್.ಸಿ.ಪಿಯ ಚರ್ಚಿಲ್ ಅಲೆಮಾವೋ, ಕ್ವಾಪೆಮ್ ನಲ್ಲಿ ಕಾಂಗ್ರೆಸಿನ ಬಾಬು ಕಾವ್ಲೇಕರ್ ಮುನ್ನಡೆ ಹೊಂದಿದ್ದಾರೆ. ಸಾಚರ್ಡೆಂ ನಲ್ಲಿ ಎಂಜಿಪಿಯ ದೀಪ್ ಪವಾಸ್ಕರ್, ಫಟೋರ್ದಾ ದಲ್ಲಿ ಗೋವಾ ಫ್ರಂಟ್ ನ ವಿಜಯ್ ಸರ್ದೇಸಾಯಿ ಮುನ್ನಡೆಯಲ್ಲಿದ್ದಾರೆ.

ಮಂಡ್ರೆಂ ನಲ್ಲಿ ಗೋವಾದ ಬಿಜೆಪಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

9.10: ಪ್ರಿಯೋಲ್ ನಲ್ಲಿ ಬಿಜೆಪಿಯ ಗೋವಿಂದ್ ಶೇಪು ಗೌಡೆ, ಮಯೀಮ್ ನಲ್ಲಿ ಬಿಜೆಪಿಯ ಪರ್ವಿನ್ ಹರೀಶ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಒಟ್ಟಾರೆ ಕಾಂಗ್ರೆಸ್ 3 ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿವೆ.

9.00: ಕಾಂಗ್ರೆಸಿನ ಫ್ರಾನ್ಸಿಸ್ಕೊ ಸಿಲ್ವೆರಾ ಸೈಂಟ್ ಆ್ಯಂಡ್ರೆ ಕ್ಷೇತ್ರದಲ್ಲಿ ಮತ್ತು ವಿಶ್ವಜಿತ್ ಪ್ರತಾಪ್ ಸಿಂಗ್ ರಾಣೆ ವಲ್ಪೋಯಿ ಕ್ಷೇತ್ರದಲ್ಲಿ, ವಿಲ್ಫ್ರೆಡ್ ಡಿ ಸಾ ನುವೆಮ್ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

8:50: ಕಾಂಗ್ರೆಸ್ 2 ಸ್ಥಾನಗಳಲ್ಲಿ ಹಾಗೂ ಇತರರು 1 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಂಚೆ ಮತಗಳ ಎಣಿಕೆ ಮುಗಿಯುತ್ತಿದ್ದು ಎಲೆಕ್ಟ್ರಾನಿಕ್ ಮತ ಪೆಟ್ಟಿಗೆಗಳ ಮತ ಎಣಿಕೆ ಆರಂಭವಾಗಿದೆ.

8: 40: ಆರಂಭಿಕ ಹಂತದ ಮತ ಎಣಿಕೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಗೋವಾದಲ್ಲಿ ಮಾಜಿ ಆರ್.ಎಸ್.ಎಸ್ ನಾಯಕ ಸುಭಾಷ್ ವೆಲಿಂಕರ್ ಅವರ ಗೋವಾ ಸುರಕ್ಷಾ ಮಂಚ್, ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ ಹಾಗೂ ಶಿವಸೇನೆ ಮೈತ್ರಿ ಮಾಡಿಕೊಂಡಿದ್ದು ಕ್ರಮವಾಗಿ 5, 26 ಹಾಗೂ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ಚುನಾವಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.

8.19: ಮೊದಲ ಹಂತದಲ್ಲಿ 20 ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದೆ. ಻ಅಂಚೆ ಮತಗಳನ್ನು ಅಧಿಕಾರಿಗಳು ಎಣಿಕೆ ಮಾಡಲು ಆರಂಭಿಸಿದ್ದಾರೆ.

8.00: ಗೋವಾದಲ್ಲಿ ಮತ ಎಣಿಕೆ ಆರಂಭವಾಗಿದೆ. ಅಧಿಕಾರಿಗಳು ಮತ ಯಂತ್ರಗಳನ್ನು ತೆರೆಯುತ್ತಿದ್ದಾರೆ. ರಕ್ಷಣಾ ಸಚಿವ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪಣಜಿಯಲ್ಲಿರುವ ಬಿಜೆಪಿ ಕಚೇರಿ ತಲುಪಿದ್ದಾರೆ.

7.40 : ಮತ ಎಣಿಕೆ ಕೇಂದ್ರದ ಹೊರಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆರಂಭದಲ್ಲಿ 8 ಗಂಟೆಗೆ ಅಂಚೆ ಮತಗಳ ಎಣಿಕೆ ಆರಂಭವಾಗಲಿದೆ. ನಂತರ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಚುನಾವಣಾ ಅಧಿಕಾರಿಗಳು ತೆರೆಯಲಿದ್ದಾರೆ.

ಆರಂಭದಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್ ಮುಖ್ಯಮಂತ್ರಿಯಾಗಿದ್ದರು. ನಂತರ ಪರಿಕ್ಕರ್ ಕೇಂದ್ರ ಸಂಪುಟಕ್ಕೆ ರಕ್ಷಣಾ ಸಚಿವರಾಗಿ ನೇಮಕಗೊಂಡ ನಂತರ ಲಕ್ಷ್ಮೀಕಾಂತ್ ಪರ್ಸೇಕರ್ ಮುಖ್ಯಮಂತ್ರಿಯಾಗಿದ್ದಾರೆ. ['ಗೋವಾದಲ್ಲಿ ಬಿಜೆಪಿ ದರ್ಬಾರ್' ಇಂಡಿಯಾ ಟುಡೇ -ಮೈ ಆಕ್ಸಿಸ್]

Goa Election Result 2017 Live

ಅಂದಹಾಗೆ ಗೋವಾದಲ್ಲಿ ಬಹುಮತಕ್ಕೆ 21 ಸ್ಥಾನಗಳ ಅವಶ್ಯಕತೆ ಇದೆ. ಸಿ ವೋಟರ್ ಹಾಗೂ ಇಂಡಿಯಾ ಟುಡೇ-ಮೈ ಆಕ್ಸಿಸ್ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಆದರೆ ನ್ಯೂಸ್ ಎಕ್ಸ್-ಎಂಆರ್ಸಿ ಮಾತ್ರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ತನ್ನ ಚುನಾವಣೋತ್ತರ ಸಮೀಕ್ಷೆಯಲ್ಲಿ ಹೇಳಿದೆ. ಜತೆಗೆ ಆಮ್ ಆದ್ಮಿ ಪಕ್ಷ ಇಲ್ಲಿ ಮೊದಲ ಬಾರಿಗೆ ಖಾತೆ ತೆರಯಲಿದೆ ಎಂದೂ ಸಮೀಕ್ಷೆಗಳು ಹೇಳಿವೆ.

ಏನಾಗಲಿದೆ ಎಂಬುದು ಇನ್ನೇನು ಕೆಲವೇ ಕ್ಷಣಗಳಲ್ಲಿ ನಿಮಗೇ ಗೊತ್ತಾಗಲಿದೆ.

English summary
Goa Election Result 2017 Live. Here are the updates for Goa Assembly Election Results 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X