Get Updates
Get notified of breaking news, exclusive insights, and must-see stories!

ಸಿಬಿಐ ಮುಖ್ಯಸ್ಥರಾಗಿ ಅಲೋಕ್ ವರ್ಮ ನೇಮಕ

ದೆಹಲಿ ಪೊಲೀಸ್ ಆಯುಕ್ತ ಅಲೋಕ್ ವರ್ಮ ಅವರನ್ನು ಸಿಬಿಐ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಪ್ರಧಾನಿ ಮೋದಿ ಅವರು ಗುರುವಾರ ಸಂಜೆ ನೇಮಕಕ್ಕೆ ಸಮ್ಮತಿ ಸೂಚಿಸಿದ್ದಾರೆ.

ನವದೆಹಲಿ, ಜನವರಿ 19: ದೆಹಲಿ ಪೊಲೀಸ್ ಆಯುಕ್ತ ಅಲೋಕ್ ವರ್ಮ ಅವರನ್ನು ಸಿಬಿಐ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಪ್ರಧಾನಿ ಮೋದಿ ಅವರು ಗುರುವಾರ ಸಂಜೆ ನೇಮಕಕ್ಕೆ ಸಮ್ಮತಿ ಸೂಚಿಸಿದ್ದಾರೆ. ಮುಂದಿನ ಎರಡು ವರ್ಷ ಅವಧಿಗೆ ಮುಖ್ಯಸ್ಥರಾಗಿ ಅಲೋಕ್ ಅವರು ಕಾರ್ಯನಿರ್ವಹಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಖೇಹರ್ ಅವರುಳ್ಳ ಆಯ್ಕೆ ಸಮಿತಿಯು ಸೋಮವಾರ ಸಂಜೆ ಸಭೆ ಸೇರಿ ಆಯ್ಕೆ ಬಗ್ಗೆ ನಿರ್ಣಯ ಕೈಗೊಂಡಿದ್ದರು. ಮೊದಲಿಗೆ ಅಲೋಕ್ ಬಗ್ಗೆ ಅಪಸ್ವರ ಹಾಡಿದ್ದ ಕಾಂಗ್ರೆಸ್ ನಂತರ ತನ್ನ ನಿಲುವು ಬದಲಾಯಿಸಿತು.

 Delhi Police Commissioner Alok Verma appointed as new CBI Chief.

ಅಲೋಕ್ ವರ್ಮಾ ಮಾತ್ರವಲ್ಲದೆ, ಹಿರಿಯ ಐಪಿಎಸ್ ಮಹಿಳಾ ಅಧಿಕಾರಿ ಅರ್ಚನಾ ರಾಮಸುಂದರಂ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಎಂ.ಸಿ. ಬೊರ್ವಾಂಕರ್, ಕೃಷ್ಣಾ ಚೌಧರಿ, ಆರ್.ಕೆ. ದತ್ತಾ, ಅರುಣಾ ಬಹುಗಣ ಹಾಗೂ ಸತೀಶ್ ಮಾಥುರ್ ಅವರ ಹೆಸರುಗಳು ಕೇಳಿಬಂದಿತ್ತು.


ವಿಶೇಷವಾಗಿ, 1979 ಹಾಗೂ 1982 ಬ್ಯಾಚ್ ಗಳ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳ ಬಗ್ಗೆ ಸರ್ಕಾರ ಗಮನ ಹರಿಸಿತ್ತು. 1976ರ ತಂಡದ ಅಧಿಕಾರಿ ಆಗಿರುವ ಅಲೋಕ್ ವರ್ಮ ಸೆರೆಮನೆಗಳ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇತ್ತೀಚೆಗೆ, ಗುಜರಾತ್ ಮೂಲದ ಐಪಿಎಸ್ ಅಧಿಕಾರಿ ರಾಕೇಶ್ ಆಸ್ತಾನಾ ಅವರನ್ನು ಸಿಬಿಐಯ ಹಂಗಾಮಿ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಇದು ವಿವಾದಕ್ಕೆ ಕಾರಣವಾಗಿ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹಾಗಾಗಿ, ಎರಡು ತಿಂಗಳಿಂದ ಇಲ್ಲಿಯವರೆಗೂ ಸಿಬಿಐ ಮುಖ್ಯಸ್ಥರ ಹುದ್ದೆ ತೆರವಾಗಿತ್ತು. (ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+