ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ಕಾಂಗ್ರೆಸ್ ಆಕ್ರೋಶ: ಮಹಾತ್ಮ ಗಾಂಧಿ ಬಗ್ಗೆ ಅಮಿತ್ ಶಾ ಹೇಳಿದ್ದೇನು

ರಾಷ್ಟ್ರಪಿತ ಮಹಾತ್ಮ ಗಾಂಧಿ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವಹೇಳನಕಾರಿ ಪದ ಬಳಸಿದ್ದಾರೆಂದು, ಶಾ ಕ್ಷಮೆಗೆ ಪಟ್ಟು ಹಿಡಿದ ಕಾಂಗ್ರೆಸ್.

By Balaraj Tantry
|
Google Oneindia Kannada News

ರಾಯಪುರ, ನವದೆಹಲಿ, ಜೂ 10: ರಾಷ್ಟ್ರಪಿತ ಮಹಾತ್ಮ ಗಾಂಧಿಯ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ ಹೊಸ ವಿವಾದವನ್ನು ಹುಟ್ಟುಹಾಕಿದೆ. ಅಮಿತ್ ಶಾ ಹೇಳಿಕೆಯನ್ನು ವಿರೋಧಿಸಿರುವ ಕಾಂಗ್ರೆಸ್ ಕ್ಷಮೆಯಾಚನೆಗೆ ಪಟ್ಟು ಹಿಡಿದಿದೆ.

ಮುಂದಿನ ವರ್ಷ ನಡೆಯಲಿರುವ ಛತ್ತೀಸಗಢ ವಿಧಾನಸಭೆಗೆ ಪೂರ್ವತಯಾರಿಗಾಗಿ ಮೂರು ದಿನಗಳ ಪ್ರವಾಸದಲ್ಲಿರುವ ಅಮಿತ್ ಶಾ, ಮಹಾತ್ಮ ಗಾಂಧಿ ಒಬ್ಬ 'ಚತುರ್ ಬನಿಯಾ' ಆಗಿದ್ದರು ಎಂದು ಶಾ ಹೇಳಿದ್ದರು.

ಅಮಿತ್ ಶಾ ಅವರ ಚತುರ್ ಬನಿಯಾ (ಬನಿಯಾ ಎನ್ನುವುದೊಂದು ಜಾತಿ) ಹೇಳಿಕೆಗೆ, ಅಮಿತ್ ಶಾ ಒಬ್ಬ 'ಅಧಿಕಾರದ ವ್ಯಾಪಾರಿ' ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಡಪಕ್ಷದ ಪ್ರಕಾಶ್ ಕಾರಟ್, ಸುಧಾಕರ ರೆಡ್ಡಿ ಸೇರಿದಂತೆ ಹಲವು ಮುಖಂಡರು ಅಮಿತ್ ಶಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಮಿತ್ ಶಾ ಹೇಳಿಕೆ ಸಾಮಾಜಿಕ ತಾಣದಲ್ಲಿ ಟ್ರೆಂಡಿಂಗ್ ನಲ್ಲಿದ್ದು, ಪರವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಮಿತ್ ಶಾ, ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧಿ ಬಗ್ಗೆ ಹೇಳಿದ್ದೇನು, ಮುಂದೆ ಓದಿ..

ಕಾರ್ಯಕರ್ತರನ್ನು ಉದ್ದೇಶಿಸಿ ಶಾ ಭಾಷಣ

ಕಾರ್ಯಕರ್ತರನ್ನು ಉದ್ದೇಶಿಸಿ ಶಾ ಭಾಷಣ

ರಾಯಪುರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಮಹಾತ್ಮ ಗಾಂಧಿ ಬಹಳ ಚತುರ ಬನಿಯಾ ಆಗಿದ್ದರು. ಕಾಂಗ್ರೆಸ್ ಯಾವ ಸಿದ್ದಾಂತದ ಮೇಲೂ ಹುಟ್ಟಿದ ಪಕ್ಷವಲ್ಲ. ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಹುಟ್ಟಿದ ಪಕ್ಷ - ಅಮಿತ್ ಶಾ.

ಕಾಂಗ್ರೆಸ್ ವಿಸರ್ಜಿಸುವಂತೆ ಗಾಂಧಿ ಸೂಚಿಸಿದ್ದರು

ಕಾಂಗ್ರೆಸ್ ವಿಸರ್ಜಿಸುವಂತೆ ಗಾಂಧಿ ಸೂಚಿಸಿದ್ದರು

ನಿರ್ದಿಷ್ಠ ಉದ್ದೇಶವನ್ನು ಇಟ್ಟುಕೊಂಡು ಬಿಜೆಪಿ ಸ್ಥಾಪನೆಗೊಂಡಿತ್ತು. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ವಿಸರ್ಜಿಸುವಂತೆ ಗಾಂಧಿ ಸೂಚಿಸಿದ್ದರೂ ವಿಸರ್ಜನೆಗೊಂಡಿರಲಿಲ್ಲ. ಈಗ ಕಾಂಗ್ರೆಸ್ ನಿರ್ನಾಮವಾಗುವ ಕೆಲಸವನ್ನು ಈಗಿನ ಗಾಂಧಿಗಳು ಮಾಡುತ್ತಿದ್ದಾರೆ - ಅಮಿತ್ ಶಾ.

ಅಮಿತ್ ಶಾ ಕ್ಷಮೆಯಾಚಿಸಬೇಕು, ಕಾಂಗ್ರೆಸ್

ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಅವಮಾನಿಸಿದ್ದಕ್ಕಾಗಿ ಅಮಿತ್ ಶಾ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಆಗ್ರಹಿಸಿದ್ದಾರೆ.

ಏನು ಬೇಕಾದರೂ ಹೇಳಿಕೆ ನೀಡಬಹುದು

ಅಂಬೇಡ್ಕರ್ ಹೊರತಾಗಿ ದೇಶ, ದೇಶದ ಯಾವ ಮುಖಂಡರ ಮೇಲೆ ಏನು ಬೇಕಾದರೂ ಹೇಳಿಕೆ ನೀಡಬಹುದು - ರಾಜದೀಪ್ ಸರ್ದೇಸಾಯಿ

ಸಚಿನ್ ಪೈಲಟ್ ಟ್ವೀಟ್

ಮಹಾತ್ಮ ಗಾಂಧಿ ಜಾತಿ, ಕೋಮಿಗಿಂತ ಮೇಲಾದವರು, ಬಿಜೆಪಿ ಕ್ಷಮೆಯಾಚಿಸಲಿ - ಸಚಿನ್ ಪೈಲಟ್

ಕಾಂಗ್ರೆಸ್ ಮಾಡಿರುವ ಟ್ವೀಟ್

ಅಮಿತ್ ಶಾ, ಮಹಾತ್ಮ ಗಾಂಧಿ ಬಗ್ಗೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಲು ಸೂಕ್ತವಾದ ಕೋಟ್ ಯಾವುದು?

English summary
Congress, others slam BJP President Amit Shah for calling Mahatma Gandhi as ‘chatur baniya’. Congress called Amit Shah ‘a trader of power’ and demanded an apology from him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X