ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ದಾಳಿ: ರಮೇಶ್ ಜಾರಕಿಹೊಳಿ ರಾಜೀನಾಮೆ ಸಾಧ್ಯತೆ

By Ananthanag
|
Google Oneindia Kannada News

ಬೆಂಗಳೂರು, ಜನವರಿ 24: ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಮಹಿಳಾ ಘಟದಕ ರಾಜ್ಯಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮೇಲೆ ಐಟಿ ದಾಳಿಯಾಗಿ 162 ಕೋಟಿಗೂ ಅಧಿಕ ಘೋಷಣೆಯಾಗದ ಅಕ್ರಮ ಹಣ ದೊರೆತಿರುವುದು ಕಾಂಗ್ರೆಸ್ಸಿಗೆ ತೀವ್ರ ತಲೆನೊವಾಗಿ ಪರಿಣಮಿಸಿದೆ. ಈ ಹಿನ್ನೆಲೆ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಸಾಧ್ಯತೆಯಿದೆ ಎನ್ನಲಾಗಿದೆ.

ಜನವರಿ 19 ರಂದು ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ರವರ ಮನೆ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು, ಈ ವೇಳೆ ಅವರ ಮನೆಯಲ್ಲಿ ಘೋಷಣೆಯಾಗದ 162 ಕೋಟಿಗೂ ಅಧಿಕ ಹಣ ಮತ್ತು 12.8 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ಬಾರಿ ಮುಖಭಂಗವಾಗಿದ್ದು, ಜೊತೆಗೆ ವಿರೋಧ ಪಕ್ಷದಿಂದ ಒತ್ತಡ ಹೆಚ್ಚುತ್ತಿರುವ ಕಾರಣ ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಅವರ ಮೇಲೆ ಪ್ರಕರಣ ದಾಖಲಾಗಲಿದ್ದು, ನಂತರ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.[ಅಕ್ರಮ ಸಂಪತ್ತು ಮುಲಾಜಿಲ್ಲದೆ ವಶಪಡಿಸಿಕೊಳ್ಳಿ : ರಮೇಶ್ ಕುಮಾರ್]

IT raid on congress party leader: possibility of minister Ramesh Jarkiholi resignation

ಅಲ್ಲದೆ ಪಕ್ಷದಲ್ಲಿ ರಮೇಶ್ ಜಾರಕಿಹೊಳಿ ಅಕ್ರಮ ಆಸ್ತಿ ಸಂಬಂಧ ಆರೋಗ್ಯ ಸಚಿವ ರಮೇಶ್ ಕುಮಾರ್ ಉಪ್ಪುತಿಂದವರು ನೀರು ಕುಡಿಯಲೇ ಬೇಕು. ಆಕ್ರಮವನ್ನು ಎಸಗಿದವರು ಯಾರೇ ಆಗಿದ್ದರು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಇದರಲ್ಲಿ ಪಕ್ಷಭೇದ ಮಾಡಬಾರದು ಎಂದು ಹೇಳಿದ್ದರು.[ಐಟಿ ದಾಳಿ: ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಸಿಕ್ಕ ಒಟ್ಟು ನಗದೆಷ್ಟು?]

IT raid on congress party leader: possibility of minister Ramesh Jarkiholi resignation

ಇನ್ನು ಈ ಪ್ರಕರಣಕ್ಕೆ ಕುರಿತು ಕಾಂಗ್ರೆಸ್ಸಿನಲ್ಲಿಯೇ ಚರ್ಚೆ ನಡೆಯುತ್ತಿದೆ. ಅಲ್ಲದೆ ಈಗಾಗಲೇ ಶ್ರೀನಿವಾಸ ಪ್ರಸಾದ್ ರಾಜೀನಾಮೆ ನೀಡಿ ಪಕ್ಷ ಬದಲಿಸಿದ್ದಾರೆ. ಮೇಟಿಯವರು ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಮಹದೇವ್ ಪ್ರಸಾದ್ ನಿಧನ ಹೊಂದಿದ್ದು ರಮೇಶ್ ಜಾರಕಿಹೊಳಿ ಸಣ್ಣ ಕೈಗಾರಿಕೆ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಿದ್ದರಾಮಯ್ಯನವರಿಗೆ ಜವಾಬ್ದಾರಿ ಹೆಚ್ಚಲಿದೆ.

English summary
IT raid on Karnataka cabinet minister Ramesh Jarkiholi, and KPCC women state president laxmi hebbalkar the houses. There is unease in Congress. The possibility of minister Ramesh Jarkiholi resignation today(Jan 25).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X