ಪರಿಸರ ಸ್ನೇಹಿ ಗಣೇಶನ ಪೂಜಿಸಿ: ಬೆಂಗಳೂರಿನ ಬೆಳಕು ಸಂಸ್ಥೆಯ ಮನವಿ
ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಯಿಂದ ಪರಿಸರದ ಮೇಲಾಗುವ ಹಾನಿಯ ಕುರಿತು ಜನಜಾಗೃತಿ ಮೂಡಿಸುವ ವವಿನೂತನ ಕಾರ್ಯಕ್ರಮವನ್ನು ಬೆಂಗಳೂರಿನ ಬೆಳಕು ಸಂಸ್ಥೆ ಮಾಡುತ್ತಿದೆ.
ಬೆಂಗಳೂರು, ಆಗಸ್ಟ್ 21: ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿಯಿಂದ ಪರಿಸರದ ಮೇಲಾಗುವ ಹಾನಿಯ ಕುರಿತು ಜನಜಾಗೃತಿ ಮೂಡಿಸುವ ವವಿನೂತನ ಕಾರ್ಯಕ್ರಮವನ್ನು ಬೆಂಗಳೂರಿನ ಬೆಳಕು ಸಂಸ್ಥೆ ಮಾಡುತ್ತಿದೆ.
ಅದಕ್ಕೆಂದೇ ಸಂಸ್ಥೆಯ ವತಿಯಿಂದ ರಾಸಾಯನಿಕ ವಸ್ತುಗಳ ಮಿಶ್ರಣದಿಂದ ಮಾಡಿದ ಗೌರಿ-ಗಣೇಶನ ಮೂರ್ತಿಯ ಬದಲಾಗಿ ಶುದ್ಧ ಮಣ್ಣಿನಿಂದ ಮಾಡಿದ ವಿಗ್ರಹ ಪೂಜಿಸುವಂತೆ ಕರಪತ್ರದೊಂದಿಗೆ ಮನೆಗೊಂದು ಮಣ್ಣಿನ ಗೌರಿ ಗಣೇಶ ಪ್ರತಿಮೆಯನ್ನು ನೀಡುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಎಸ್. ಎ ರಾಮದಾಸ್ ಹಾಗೂ 1ನೇ ವಾರ್ಡ್ ನ ನಗರ ಪಾಲಿಕಾ ಸದಸ್ಯರಾದ ಬಿ.ವಿ ಮಂಜುನಾಥ್ ರವರು ಕಾರ್ಯಕ್ರಮಕ್ಕೆ ಚಾಲನೆ ನಿಡಿದರು.
ನಂತರ ಮಾತನಾಡಿದ ಅವರು, ಹಿಂದು ಸಂಸ್ಕೃತಿಯಲ್ಲಿ ಶ್ರದ್ಧಾ ಭಕ್ತಿಗಳಿಂದ ವಿಘ್ನವಿನಾಶಕ ಗಣಪತಿಯನ್ನು ಪ್ರತಿವರ್ಷವೂ ಪೂಜಿಸುತ್ತಾ ಬರುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಂತಾದ ನೀರಿನಲ್ಲಿ ಕರಗದ ಮತ್ತು ಪರಿಸರಕ್ಕೆ ಹಾಗೂ ನಮ್ಮ ನಂಬಿಕೆಗೆ ಹಾನಿಯುಂಟು ಮಾಡುವ ರಾಸಾಯನಿಕ ವಸ್ತುಗಳ ಮಿಶ್ರಣದಿಂದ ತಯಾರಿಸಿದ ಗಣಪತಿ ಪ್ರತಿಮೆಗಳು ಮಾರುಕಟ್ಟೆಯನ್ನು ಪ್ರವೇಶಿಸಿರುವುದು ದೌರ್ಭಾಗ್ಯದ ಸಂಗತಿ, ನಮ್ಮ ಕಲಾವಿದರು ತಯಾರಿಸಿದ ರಾಸಾಯನಿಕ ರಹಿತ ಗೌರಿ ಗಣಪತಿ ವಿಗ್ರಹಗಳನ್ನು ಪಡೆದು ಅದನ್ನು ಪೂಜಿಸಿ ಎಂದು ಕರೆನೀಡಿದರು.
ಬೆಳಕು ಸಂಸ್ಥೆಯ ಸಂಚಾಲಕ ಕೆ.ಎಂ ನಿಶಾಂತ್ ರವರು ಮಾತನಾಡಿ ನಮ್ಮ ದೇಶದ ಮೇಲೆ ಆಂತರಿಕವಾಗಿ ಅತಿಕ್ರಮಣ ಮಾಡಲು ಹೊಂಚುಹಾಕುತ್ತಿರುವ ಚೀನಾ ದೇಶದ ಉತ್ಪನ್ನಗಳನ್ನು ಬಹಿಷ್ಕರಿಸಿ ಸಂಪೂರ್ಣ ದೇಶಿ ವಸ್ತುಗಳನ್ನು ಬಳಸುವ ಮೂಲಕ ನಮ್ಮ ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯೋಣ ಎಂದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಕೆ.ಎಂ ನಿಶಾಂತ್, ಸಹ ಸಂಚಾಲಕ ಧನುಷ್, ಸುಭಾಷ್, ವಿನಯ್, ಅಕ್ಷಯ್, ದೀಪಕ್, ಸಂತೋಷ್, ಗಣೇಶ್, ಸುಮುಖ್, ಋತ್ವಿಕ್ ಮೊಹೊಲ್ಲಾ ನಿವಾಸಿಗಳಾದ ವೆಂಕಟೇಶ್, ಮದನ್ ಹಾಗೂ ಅನೇಕ ಹಿರಿಯರು, ಮುಖಂಡರುಗಳು, ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications