ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಸ್ಟ್ರೀಟ್ ವ್ಯೂಗೆ ಬೆಂಗಳೂರು ಪೊಲೀಸ್ ಬ್ರೇಕ್

By Mahesh
|
Google Oneindia Kannada News

Bangalore Police on Google Street View
ಬೆಂಗಳೂರು ಜೂ 21: ಗೂಗಲ್ ಸ್ಟ್ರೀಟ್ ವ್ಯೂ ಸೇವೆಗೆ ನಗರ ಪೊಲೀಸರು ಅಡ್ಡ ಗೋಡೆ ಕಟ್ಟಿದ್ದಾರೆ. ಕಳೆದ ತಿಂಗಳಿನಿಂದ ನಗರದ ಅಷ್ಟ ದಿಕ್ಕುಗಳಲ್ಲಿ ಚಲಿಸಿ ಫೋಟೋಗಳನ್ನು ಸಂಗ್ರಹಿಸುತ್ತಿದ್ದ ಗೂಗಲ್ ಸಂಸ್ಥೆ ವಾಹನಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿದೆ. ಉಗ್ರರ ಹಿಟ್ ಲಿಸ್ಟ್ ನಲ್ಲಿ ಬೆಂಗಳೂರು ಸೇರಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ(ಹೆಚ್ಚುವರಿ) ಸುನೀಲ್ ಕುಮಾರ್ ಹೇಳಿದ್ದಾರೆ.

ಗೃಹ ಇಲಾಖೆಯಿಂದ ಅನುಮತಿ ಪಡೆಯುವ ತನಕ ಗೂಗಲ್ ತನ್ನ ಕಾರ್ಯವನ್ನು ಮುಂದುವರೆಸುವಂತಿಲ್ಲ. ಬೆಂಗಳೂರಿನಲ್ಲಿ ಇಸ್ರೋ, ಎಚ್ ಎಎಲ್, ಎನ್ಎಎಲ್, ಬಿಇಎಲ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿದ್ದು, ಎಲ್ಲವೂ ಉಗ್ರರ ಭೀತಿಯನ್ನು ಎದುರಿಸುತ್ತಿದೆ. ರಕ್ಷಣಾ ಹಾಗೂ ಬಾಹ್ಯಾಕಾಶ ಸಂಸ್ಥೆಗಳ ಭದ್ರತೆ ವಿಶೇಷದಲ್ಲಿ ಉದಾಸೀನತೆ ತೋರುವಂತಿಲ್ಲ. 2008ರ ಸರಣಿ ಬಾಂಬ್ ಸ್ಫೋಟದ ನಂತರ ಭದ್ರತೆ ವಿಷಯದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ ಎಂದು ಆಯುಕ್ತ ಸುನೀಲ್ ಕುಮಾರ್ ಹೇಳಿದರು.

ಸಾರ್ವಜನಿಕ ರಸ್ತೆ ಹಾಗೂ ಕಟ್ಟಡಗಳ ಚಿತ್ರಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳ ಚಿತ್ರಗಳು ಇದರಲ್ಲಿ ಸೇರುವುದಿಲ್ಲ ಎಂದು ಗೂಗಲ್ ಸಂಸ್ಥೆ ವಿನಯ್ ಗೋಯಲ್ ಪ್ರತಿಕ್ರಿಯಿಸಿದ್ದಾರೆ.ಆದರೆ, ಕಳೆದ ವರ್ಷ 2,50,000 ಜರ್ಮನ್ನರು ತಮ್ಮ ಮನೆ ಚಿತ್ರ ಕಾಣಿಸದಂತೆ ನೋಡಿಕೊಳ್ಳಿ ಎಂದು ಗೂಗಲ್ ಗೆ ಸೂಚಿಸಿದ್ದರು. ಜೆಕ್ ಸರ್ಕಾರ ಕೂಡಾ ಗೂಗಲ್ ನ ಈ ಸೇವೆಗೆ ನಿರ್ಬಂಧ ಹೇರಿದೆ. ಯುಕೆಯಲ್ಲಂತೂ ವೈ ಫೈ ಮೂಲಕ ಖಾಸಗಿ ಇಮೇಲ್ ಐಡಿ, ಪಾಸ್ ವರ್ಡ್ ಕೂಡ ಸಂಗ್ರಹವಾಗಿತ್ತು. ನಂತರ ಎಲ್ಲವನ್ನೂ ಅಳಿಸಿ ಹಾಕಲಾಯಿತು.

English summary
Bangalore City Police has objected to Street View service by Google. Google quickly responded to call from police and has stopped collecting images. Police Commissioner mentioned ISRO and HAL is being on the list of terror targets and hence asked Google to stop the service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X