ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಕಿಯಾ ಮಾರಾಟವಿಲ್ಲ, ಮೈಕ್ರೋಸಾಫ್ಟ್ ಖರೀದಿಸುತ್ತಿಲ್ಲ

By Mahesh
|
Google Oneindia Kannada News

Stephen Elop, Nokia CEO
ಲಾಸ್ ಎಂಜಲೀಸ್ ಜೂ 3: ನೋಕಿಯಾ ಸಂಸ್ಥೆ ಮೈಕ್ರೋಸಾಫ್ಟ್ ಗೆ ಮಾರಾಟವಾಗುತ್ತಿದೆ ಎಂಬ ಸುದ್ದಿಯನ್ನು ನೋಕಿಯಾ ಸಂಸ್ಥೆ ಅಲ್ಲಗೆಳೆದಿದೆ. ಫಿನ್ ಲ್ಯಾಂಡ್ ಮೂಲದ ಮೊಬೈಲ್ ದಿಗ್ಗಜ ನೋಕಿಯಾವನ್ನು ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಖರೀದಿಸುತ್ತಿದೆ. ನೋಕಿಯಾ ಸ್ಮಾರ್ಟ್ ಫೋನ್ ಗಳಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಮೊಬೈಲ್ 7 ಆಪರೇಟಿಂಗ್ ಸಿಸ್ಟಮ್ ಬಳಕೆ ಹೆಚ್ಚುತ್ತಿರುವುದು ಈ ಸುದ್ದಿಗೆ ಪೂರಕವಾಗಿದೆ ಎನ್ನಲಾಗಿತ್ತು.

ನೋಕಿಯಾ ಸ್ಮಾರ್ಟ್ ಫೋನ್ ಗಳಲ್ಲಿ ವಿಂಡೋಸ್ ಫೋನ್ 7 ಫ್ಲಾಟ್ ಫಾರ್ಮ್ ಬಳಕೆ ಮಾಡಲು ನಿರ್ಧರಿಸಿರುವುದು ನಿಜ. ಆದರೆ, ಮೈಕ್ರೋಸಾಫ್ಟ್ ನಿಂದ ನೋಕಿಯಾ ಖರೀದಿ ಸುದ್ದಿ ಆಧಾರ ರಹಿತ ಎಂದು ನೋಕಿಯಾ ಸಿಇಒ ಸ್ಟೀಫನ್ ಎಲೋಪ್ ಹೇಳಿದ್ದಾರೆ.

2010ರಲ್ಲಿ ಸಿಇಒ ಹುಡುಕಾಟದಲ್ಲಿದ್ದ ನೋಕಿಯಾ ಕಂಪೆನಿಯಲ್ಲಿ ತನ್ನ ಉದ್ಯೋಗಿಯನ್ನು ಸ್ಥಾಪಿಸಿ ನಂತರ ಇಡೀ ಕಂಪೆನಿಯನ್ನು ತನ್ನ ಮುಷ್ಟಿಗೆ ತೆಗೆದುಕೊಳ್ಳಲು ಮೈಕ್ರೋಸಾಫ್ಟ್ ತಂತ್ರ ರೂಪಿಸಿದೆ. ಮಾಜಿ ಮೈಕ್ರೋಸಾಫ್ಟ್ ಉದ್ಯೋಗಿ ಎಲೋಪ್ ಟ್ರೋಜನ್ ಹಾರ್ಸ್ ರೀತಿ ನೋಕಿಯಾಗೆ ಬಂದು ಕೂತಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಸುಮಾರು 19 ಬಿಲಿಯನ್ ಡಾಲರ್ ಮೊತ್ತಕ್ಕೆ ನೋಕಿಯಾ ಖರೀದಿಯಾಗಿ ಹೋಗಿದೆ ಎಂದು ಅನೇಕ ಟೆಕ್ನಿಕಲ್ ಬ್ಲಾಗ್ ಗಳು ಕೂಡಾ ಬರೆದುಬಿಟ್ಟಿದ್ದವು. ಆದರೆ, ಎಲ್ಲವೂ ಸತ್ಯಕ್ಕೆ ದೂರವಾದವು ಎಂದು ಎಲೋಪ್ ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ 2011, ರಲ್ಲಿ ಮೈಕ್ರೋಸಾಫ್ಟ್ ಹಾಗೂ ನೋಕಿಯಾ ಸಂಸ್ಥೆ ವಿಂಡೋಸ್ ಫೋನ್ 7 ಅಪರೇಟಿಂಗ್ ಸಿಸ್ಟಮ್ ಬಳಕೆ ಬಗ್ಗೆ ಒಪ್ಪಂದ ಮಾಡಿ ಮಾಡಿಕೊಂಡಿವೆ. 2012 ರ ವೇಳೆಗೆ ವಿಂಡೋಸ್ ಫೋನ್ 7 ಮಾರುಕಟ್ಟೆ ಪ್ರವೇಶಿಸಲಿದೆ.

English summary
Nokia users out there, here is the big cheering news for you. Your company is not going to be acquired by Microsoft! The Finnish phone maker Nokia rejected rumours describing the alleged takeover by software giant Microsoft.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X