• search
  • Live TV
keyboard_backspace

ಕೋಟಿ ಕೋಟಿ ಇದ್ದರೂ 'ಇಂಡಿಯಾ'ದಲ್ಲಿ ಇರುವುದಿಲ್ಲವಂತೆ ಶ್ರೀಮಂತರು!?

Google Oneindia Kannada News

ನವದೆಹಲಿ, ನವೆಂಬರ್ 6: ನಾವು ನಿಮ್ಮ ದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತೇವೆ. ನಮಗೆ ನಿಮ್ಮ ದೇಶದ ಪೌರತ್ವ ಅಥವಾ ವಾಸದ ಹಕ್ಕನ್ನು ನೀಡಬೇಕು. ವಿದೇಶಗಳಲ್ಲಿ ನಡೆಯುವ ಇಂಥ ಕಾರ್ಯಕ್ರಮಗಳಲ್ಲಿ ಪೌರತ್ವ ಮತ್ತು ನಿವಾಸದ ಹಕ್ಕನ್ನು ಪಡೆಯಲು ಇಚ್ಛಿಸುವವರ ಪಟ್ಟಿಯಲ್ಲಿ ಭಾರತೀಯರೇ ಹೆಚ್ಚಾಗಿದ್ದಾರೆ.

ಭಾರತದಲ್ಲಿ ಕೋಟ್ಯಧಿಪತಿ ಎನಿಸಿಕೊಂಡವರಿಗೆಲ್ಲ ವಿದೇಶಗಳಲ್ಲಿ ನೆಲೆ ಕಂಡುಕೊಳ್ಳುವ ಉದ್ದೇಶವಿರುವುದು ಇತ್ತೀಚಿನ ವರದಿಯೊಂದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ದೇಶ ಹೊರೆತು ವಿದೇಶಗಳಲ್ಲಿ ಬದುಕು ಕಂಡುಕೊಳ್ಳುವತ್ತ ಲಕ್ಷ್ಯ ವಹಿಸಿದವರ ಸಂಖ್ಯೆ ಹೆಚ್ಚಾಗಿದೆ.

ಭಾರತದ ಆರ್ಥಿಕತೆಗೆ ಎನ್‌ಡಿಎ ಸರ್ಕಾರ ಕೊಟ್ಟ 7 ಪೆಟ್ಟುಗಳು!?ಭಾರತದ ಆರ್ಥಿಕತೆಗೆ ಎನ್‌ಡಿಎ ಸರ್ಕಾರ ಕೊಟ್ಟ 7 ಪೆಟ್ಟುಗಳು!?

ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ಶ್ರೀಮಂತರು ವಿದೇಶಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಅಲ್ಲಿಯೇ ವಾಸಿಸುವುದಕ್ಕೆ ಅಥವಾ ಹೊಸ ಉದ್ಯಮವನ್ನು ವಿದೇಶದಲ್ಲಿಯೇ ಆರಂಭಿಸಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಗೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗುವೊಂದೇ ಪ್ರಮುಖ ಕಾರಣವಾಗಿಲ್ಲ. ಭಾರತೀಯ ಧನವಂತರು ವಿದೇಶಗಳತ್ತ ಚಿತ್ತ ಹರಿಸುತ್ತಿರುವುದು ಏಕೆ, ಇಲ್ಲಿ ಕೋಟಿ ಕೋಟಿ ಗಳಿಸಿದರೂ ವಿದೇಶಗಳಲ್ಲಿ ಹೆಚ್ಚು ಹಣ ಹೂಡಿಕೆ ಮಾಡುತ್ತಿರುವುದು ಏಕೆ, ಭಾರತದ ನಂಟು ಕಡಿದುಕೊಂಡು ವಿದೇಶಗಳ ಮೇಲಿನ ವ್ಯಾಮೋಹ ಹೆಚ್ಚಾಗುತ್ತಿರುವುದಕ್ಕೆ ಮುಖ್ಯ ಕಾರಣಗಳೇನು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ತೆರಿಗೆ ನೀತಿಯಿಂದ ದೇಶ ತೊರೆಯಬೇಕಾಯಿತೇ?

ತೆರಿಗೆ ನೀತಿಯಿಂದ ದೇಶ ತೊರೆಯಬೇಕಾಯಿತೇ?

ಕಳೆದ ಆರು ವರ್ಷಗಳ ಹಿಂದೆ ದೆಹಲಿ ಮೂಲದ ಉತ್ತಮ ಕುಟುಂಬದ ಎರಡನೇ ತಲೆಮಾರಿನ ಕುಡಿ ಆಗಿರುವ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಅವರಿಗೆ ದೇಶ ತೊರೆಯುವಂತೆ ಕರೆ ನೀಡಲಾಗಿತ್ತು. ಅವರು 'ಸೂರ್ಯೋದಯ ವಲಯ' ಎಂದು ಕರೆಯಲ್ಪಡುವ ಏಕಸ್ವಾಮ್ಯದೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ರಫ್ತು ವ್ಯವಹಾರವನ್ನು ಹೊಂದಿದ್ದು, ಇದು ಉತ್ತಮ ಭವಿಷ್ಯದ ನಿರೀಕ್ಷೆಗಳನ್ನು ಹೊಂದಿರುವ ಉದ್ಯಮವಾಗಿತ್ತು.

ಆದರೆ ಕಂಪನಿಯ ಸಾಗರೋತ್ತರ ವಿಸ್ತರಣೆಯನ್ನು ನೋಡಿಕೊಳ್ಳಲು ಅವರು ಎಲ್ಲವನ್ನೂ ಬಿಟ್ಟು 2015ರಲ್ಲಿ ದುಬೈಗೆ ತೆರಳಿದರು. ಕೆರಿಬಿಯನ್ ರಾಷ್ಟ್ರವೊಂದರಲ್ಲಿ ಹೂಡಿಕೆಯ ಮೂಲಕ ಅವರು ಪೌರತ್ವವನ್ನು ಪಡೆದರು. ಹೀಗೆ ದೇಶ ತೊರೆದು ಹೋಗುವುದಕ್ಕೆ ಭಾರತದಲ್ಲಿನ ಜಾರಿ ನಿರ್ದೇಶನಾಲಯದ ತೆರಿಗೆ ಅಧಿಕಾರಿಗಳು ನೀಡಿದ ಕಿರುಕುಳವೂ ಒಂದು ಪ್ರಮುಖ ಕಾರಣವಾಗಿತ್ತು ಎಂದು ರಾಜೇಶ್ ಆರೋಪಿಸಿದ್ದಾರೆ.

ತೆರಗೆ ಕಿರುಕುಳದ ಬಗ್ಗೆ ರಾಜೇಶ್ ಆರೋಪ

ತೆರಗೆ ಕಿರುಕುಳದ ಬಗ್ಗೆ ರಾಜೇಶ್ ಆರೋಪ

"ಜಗತ್ತಿನಾದ್ಯಂತ ವ್ಯಾಪಾರವನ್ನು ಹೊಂದಿರುವ ಯಾರೇ ಆಗಿದ್ದರೂ ಇಂಥ ತೆರಿಗೆ ನೀತಿಯು ಕಿರುಕುಳದಂತೆ ಭಾಸವಾಗುತ್ತದೆ. ಇದರಿಂದ ಉದ್ಯಮಿಗಳಿಗೆ ಸಮಸ್ಯೆ ಆಗಿರುವುದನ್ನೂ ನಾನು ಕಂಡಿದ್ದೇನೆ. ವಿದೇಶಿ ಪಾಸ್‌ಪೋರ್ಟ್‌ನೊಂದಿಗೆ, ರೆಡ್ ಟೇಪ್ ಗಣನೀಯವಾಗಿ ಕಡಿಮೆಯಾಗಿದೆ. ಮನಬಂದಂತೆ ತೆರಿಗೆ ವಿಧಿಸುವ ಹೊಡೆತದಿಂದ ನಾನು ಅಷ್ಟಾಗಿ ಚಿಂತಿಸುವುದಿಲ್ಲ," ಎಂದು ರಾಜೇಶ್ ಹೇಳಿದ್ದಾರೆ.

ಕಚ್ಚಾತೈಲದ ನಂಟು: ಭಾರತದಲ್ಲಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲದ ಬೆಲೆ ಏಕೆ ದುಬಾರಿ!?ಕಚ್ಚಾತೈಲದ ನಂಟು: ಭಾರತದಲ್ಲಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲದ ಬೆಲೆ ಏಕೆ ದುಬಾರಿ!?

ತೆರಿಗೆ ಕುಣಿಕೆಗೆ ಬೆದರುತ್ತಿರುವ ಉದ್ಯಮಿಗಳು

ತೆರಿಗೆ ಕುಣಿಕೆಗೆ ಬೆದರುತ್ತಿರುವ ಉದ್ಯಮಿಗಳು

ಭಾರತದ ಕಾರ್ಪೋರೇಟ್ ಉದ್ಯಮಿಗಳ ಮೇಲೆ "ತೆರಿಗೆ ಭಯೋತ್ಪಾದನೆ"ಯು ಹಿಡಿತ ಸಾಧಿಸುತ್ತಿದೆ. ಭಾರತದ ಅತಿದೊಡ್ಡ ಕೆಫೆ ಕಾಫಿ ಡೇ ಸಂಸ್ಥಾಪಕ ಮತ್ತು ಮಾಲೀಕ ಸಿದ್ಧಾರ್ಥ್ ಹೆಗ್ಡೆ ಕಳೆದ 2019ರಲ್ಲಿ ನಿಧನರಾಗಿದ್ದು, ಈ ವೇಳೆ ಆದಾಯ ತೆರಿಗೆ ಇಲಾಖೆಯ ಮಾಜಿ ಮಹಾನಿರ್ದೇಶಕರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಅದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ವ್ಯಾಪಾರಿಗಳು ಮತ್ತು ಉದ್ಯಮಿಗಳ ಸುತ್ತ ಸರ್ಕಾರದ ತೆರಿಗೆಯ ಕುಣಿಕೆಯನ್ನು ಬಿಗಿಗೊಳಿಸುತ್ತಿದೆ.

ತೆರಿಗೆ ನೀತಿ ಬಗ್ಗೆ ಸರ್ಕಾರ ಮಂಡಿಸುತ್ತಿರುವ ವಾದ?

ತೆರಿಗೆ ನೀತಿ ಬಗ್ಗೆ ಸರ್ಕಾರ ಮಂಡಿಸುತ್ತಿರುವ ವಾದ?

"ಕಪ್ಪುಹಣ - ಅಕ್ರಮ ನಗದು, ತೆರಿಗೆ ಅಧಿಕಾರಿಗಳಿಂದ ತೆರಿಗೆ ವಂಚನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ವಾದ ಮಂಡಿಸುತ್ತಿದೆ. ಆದರೆ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಲು ಮತ್ತು ತನ್ನ ಗುರಿಯನ್ನು ತಲುಪುವ ಅಧಿಕಾರಶಾಹಿಗಳ ಮೇಲಿನ ಒತ್ತಡ ನಿವಾರಿಸಿಕೊಳ್ಳಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಿಮರ್ಶಕರು ದೂಷಿಸುತ್ತಿದ್ದಾರೆ.

ಆದರೆ ತೆರಿಗೆದಾರರ ಮೇಲೆ ಒತ್ತಡ ಹೇರುವುದಕ್ಕೆ ಸರ್ಕಾರದ ಈ ಕ್ರಮವು ಕೇವಲ ಒಂದು ಕಾರಣ ಎಂದು ರಾಜೇಶ್ ಹೇಳಿದ್ದಾರೆ. ಸರ್ಕಾರದ ನಿರ್ಧಾರವು ಭಾರತದಲ್ಲಿ "ಒಡೆದು ಆಳುವ ರಾಜಕೀಯ" ನೀತಿಯಿಂದ ಪ್ರೇರೇಪಿಸಲ್ಪಟ್ಟಿದೆ. ಭಾರತದ ಹೆಚ್ಚುತ್ತಿರುವ ಧ್ರುವೀಕರಣದ ವಾತಾವರಣದಲ್ಲಿ ತನ್ನ ಮಕ್ಕಳು ಬೆಳೆಯುವುದು ನನಗೆ ಇಷ್ಟವಿಲ್ಲ ಎಂದು ರಾಜೇಶ್ ತಿಳಿಸಿದ್ದಾರೆ. ಅಲ್ಲದೇ ತಮ್ಮೊಂದಿಗೆ ಹಲವು ಉದ್ಯಮಿಗಳು ಬೇರೆ ರಾಷ್ಟ್ರಗಳಲ್ಲಿ ಪೌರತ್ವವನ್ನು ಪಡೆದುಕೊಂಡು ಭಾರತದಿಂದ ನಿರ್ಗಮಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಸೇರಿಸಲು ಸಕಾಲವಲ್ಲ: ಸೀತಾರಾಮನ್ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಸೇರಿಸಲು ಸಕಾಲವಲ್ಲ: ಸೀತಾರಾಮನ್

ಭಾರತದಿಂದ 4 ವರ್ಷದಲ್ಲಿ 23,000 ಶ್ರೀಮಂತರ ನಿರ್ಗಮನ

ಭಾರತದಿಂದ 4 ವರ್ಷದಲ್ಲಿ 23,000 ಶ್ರೀಮಂತರ ನಿರ್ಗಮನ

ಕಳೆದ 2014ರಿಂದ 2018ರ ಅವಧಿಯಲ್ಲಿ ಒಟ್ಟು 23,000 ಶ್ರೀಮಂತರು ದೇಶವನ್ನು ತೊರೆದು ವಿದೇಶದಲ್ಲಿ ಪೌರತ್ವ ಪಡೆದುಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂಬುದು 2018ರ ವಾಲ್-ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಮೋರ್ಗಾನ್ ಸ್ಟಾನ್ಲಿಯ ಅಂಕಿಅಂಶಗಳಿಂದ ತಿಳಿದು ಬಂದಿದೆ.

ಗ್ಲೋಬಲ್ ವೆಲ್ತ್ ಮೈಗ್ರೇಶನ್ ರಿವ್ಯೂ ವರದಿ ಪ್ರಕಾರ, 2020ರ ವರ್ಷವೊಂದರಲ್ಲೇ ಸುಮಾರು 5,000 ಮಿಲಿಯನೇರ್‌ಗಳು ಅಥವಾ ಭಾರತದಲ್ಲಿನ ಒಟ್ಟು ನಿವ್ವಳ ಆದಾಯವನ್ನು ಹೊಂದಿರುವ ಶೇ.2ರಷ್ಟು ಜನರು ದೇಶದಿಂದ ನಿರ್ಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂಡವಾಳ ಹೂಡಿಕೆಗಳಿಗೆ ಪ್ರತಿಯಾಗಿ ಇತರ ದೇಶಗಳಲ್ಲಿ ಪೌರತ್ವ ಅಥವಾ ನಿವಾಸದ ಹಕ್ಕು ಬಯಸುತ್ತಿರುವವರ ಪಟ್ಟಿಯಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ ಎಂದು ಜಾಗತಿಕ ಪೌರತ್ವ ಮತ್ತು ನಿವಾಸ ಸಲಹೆಗಾರ ಹೆನ್ಲಿ ಮತ್ತು ಪಾರ್ಟನರ್ಸ್(H&P) ತಿಳಿಸಿದೆ.

ಕೊವಿಡ್-19 ಪಿಡುಗು ಜಾಗತೀಕರಣಕ್ಕೊಂದು ಪೂರಕ ಅಂಶ

ಕೊವಿಡ್-19 ಪಿಡುಗು ಜಾಗತೀಕರಣಕ್ಕೊಂದು ಪೂರಕ ಅಂಶ

H&P ಪ್ರಕಾರ "ತಮ್ಮ ಜೀವನ ಮತ್ತು ಸ್ವತ್ತುಗಳನ್ನು ಜಾಗತೀಕರಣಗೊಳಿಸಲು" ಬಯಸುವ ಭಾರತೀಯರ ಶ್ರೀಮಂತರ ಪ್ರವೃತ್ತಿಗೆ Covid-19 ಒಂದು ಪೂರಕ ಅಂಶವಾಯಿತು. ಕಳೆದ ವರ್ಷ ಲಾಕ್‌ಡೌನ್‌ನ ಮಧ್ಯದಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಸಂಸ್ಥೆಯು ತನ್ನ ಕಚೇರಿಯನ್ನು ಸ್ಥಾಪಿಸಿತು. "ಸಾಂಕ್ರಾಮಿಕ ರೋಗದ ಎರಡನೇ ಅಥವಾ ಮೂರನೇ ಅಲೆಯವರೆಗೆ ಕಾಯಲು ಬಯಸುವುದಿಲ್ಲ ಅಂತಾ ಅವರು ಅರಿತುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಗ್ರಾಹಕರು ಈಗ ಮನೆಯಲ್ಲಿ ಕುಳಿತಿರುವಾಗ ಪೇಪರ್‌ಗಳನ್ನು ಹೊಂದಲು ಬಯಸುತ್ತಾರೆ. ಇದನ್ನು ನಾವು ವಿಮಾ ಪಾಲಿಸಿ ಅಥವಾ ಪ್ಲಾನ್ ಬಿ ಎಂದು ಉಲ್ಲೇಖಿಸುತ್ತೇವೆ," ಎಂದು HP ಖಾಸಗಿ ಕಂಪನಿ ಮುಖ್ಯಸ್ಥ ಡೊಮಿನಿಕ್ ವೊಲೆಕ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಕೊರೊನಾವೈರಸ್ ಪಿಡುಗಿನಿಂದ ಸಂಪತ್ತಿನ ವೈವಿದ್ಯೀಕರಣ

ಕೊರೊನಾವೈರಸ್ ಪಿಡುಗಿನಿಂದ ಸಂಪತ್ತಿನ ವೈವಿದ್ಯೀಕರಣ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಶ್ರೀಮಂತರು ಮತ್ತು ಉದ್ಯಮಿಗಳಿಗೆ ವಲಸೆ ಹೋಗುವ ಕುರಿತು ಆಲೋಚಿಸುವಂತೆ ಮಾಡಿದೆ. ಇದು ಕೇವಲ ವೀಸಾ ಮುಕ್ತ ಸಂಚಾರದ ವಿಷಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಂಕ್ರಾಮಿಕ ಪಿಡುಗಿನಿಂದ ಉದ್ಯಮಿಗಳು ಸಂಪತ್ತಿನ ವೈವಿಧ್ಯೀಕರಣ, ಉತ್ತಮ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆಯೂ ಚಿಂತಿಸುವಂತೆ ಮಾಡಿದೆ ಎಂದು ಡೊಮಿನಿಕ್ ವೊಲೆಕ್ ಉಲ್ಲೇಖಿಸಿದ್ದಾರೆ.

H&P ಪ್ರಕಾರ, 'ಗೋಲ್ಡನ್ ವೀಸಾ' ಕಾರ್ಯಕ್ರಮವನ್ನು ನಡೆಸುತ್ತಿರುವ ಪೋರ್ಚುಗಲ್‌ನಂತಹ ದೇಶಗಳು ಮತ್ತು ಮಾಲ್ಟಾ ಮತ್ತು ಸೈಪ್ರಸ್‌ನಂತಹ ದೇಶಗಳು ಭಾರತದ ಉತ್ತಮ ಆದ್ಯತೆಯ ತಾಣಗಳಾಗಿವೆ.

ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಉತ್ತಮ ಬೆಳವಣಿಗೆಯಲ್ಲ

ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಉತ್ತಮ ಬೆಳವಣಿಗೆಯಲ್ಲ

ದೊಡ್ಡ ಪ್ರಮಾಣದ ಹಣವನ್ನು ತೆಗೆದುಕೊಂಡು ಬೇರೆ ದೇಶಗಳಲ್ಲಿ ಹೋಗುತ್ತಿರುವ ಬೆಳವಣಿಗೆಯು ಶಾಶ್ವತವಲ್ಲ. ಜನರು ತಮ್ಮ ಎಲ್ಲಾ ಹಣವನ್ನು ತಾಯ್ನಾಡಿನಿಂದ ತೆಗೆದುಕೊಂಡು ಹೋಗಿ ಬೇರೆ ರಾಷ್ಟ್ರಗಳಲ್ಲಿ ಹೂಡಿಕೆ ಮಾಡುತ್ತಾರೆ. ಇತ್ತ ಸ್ವದೇಶದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಕಡಿದುಕೊಳ್ಳುತ್ತಾರೆ. ಇಂಥ ಬೆಳವಣಿಗೆಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಉತ್ತಮವಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

"ಈ ರೀತಿ ಬೆಳವಣಿಗೆಗಳು ನಡೆದಾಗ ಅಂಥ ಉದ್ಯಮಿಗಳು ತಮ್ಮ ಉದ್ಯಮಶೀಲತಾ ಸಾಮರ್ಥ್ಯ ಮತ್ತು ತಮ್ಮ ಆದಾಯ ಮತ್ತು ಸಂಪತ್ತನ್ನು ತೆರಿಗೆ ಪಟ್ಟಿಯಿಂದ ತೆಗೆದು ಹಾಕುತ್ತಾರೆ. ಇದು ದೀರ್ಘಾವಧಿಯಲ್ಲಿ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಉದ್ಯಮಿಗಳು ಮತ್ತು ಶ್ರೀಮಂತರ ನಿರ್ಗಮನವು ಭಾರತದಲ್ಲಿ ವ್ಯಾಪಾರಿ ಮಾರಕಟ್ಟೆಯ ಅಭಿವೃದ್ಧಿಗೆ ವಿರುದ್ಧವಾಗಿರುತ್ತದೆ. ಉದ್ಯಮಶೀಲ ಪರಿಸರದಲ್ಲಿ ಕಳಪೆ ಸಂಕೇತವನ್ನು ತೋರಿಸುತ್ತದೆ," ಎಂದು ಕೆನಡಾದ ಏಷ್ಯಾ ಪೆಸಿಫಿಕ್ ಫೌಂಡೇಶನ್‌ನಲ್ಲಿ ಡಿಸ್ಟಿಂಗ್ವಿಶ್ಡ್ ಫೆಲೋ ರೂಪಾ ಸುಬ್ರಹ್ಮಣ್ಯ ಹೇಳಿದ್ದಾರೆ.

ಭಾರತ ಬಿಟ್ಟು ಹೋಗುತ್ತಾರಾ ರಿಲಾಯನ್ಸ್ ಮಾಲೀಕ?

ಭಾರತ ಬಿಟ್ಟು ಹೋಗುತ್ತಾರಾ ರಿಲಾಯನ್ಸ್ ಮಾಲೀಕ?

ಭಾರತದ ಪ್ರಸಿದ್ಧ ಉದ್ಯಮಿ ಎನಿಸಿರುವ ರಿಲಾಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರು ಲಂಡನ್‌ನ ಸ್ಟೋಕ್ ಪಾರ್ಕ್‌ನಲ್ಲಿ ಭಾಗಶಃ ವಾಸಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ. ಈ ಕುರಿತಾಗಿ ಪ್ರಕಟಿಸಲಾದ ವರದಿಗಳೆಲ್ಲ ಅಧಾರ ರಹಿತವಾದದ್ದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಮೂಹವು ಶುಕ್ರವಾರ ಸ್ಪಷ್ಟಪಡಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಮುಖ್ಯಸ್ಥರು ಮತ್ತು ಅವರ ಕುಟುಂಬದ ಸದಸ್ಯರು ಲಂಡನ್ ನಲ್ಲಾಗಲೀ ಅಥವಾ ವಿಶ್ವದ ಬೇರೆ ಯಾವ ದೇಶಕ್ಕೂ ಸ್ಥಳಾಂತರಗೊಳ್ಳುವ ಅಥವಾ ವಾಸಿಸುವ ಉದ್ದೇಶ ಹೊಂದಿಲ್ಲ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಸಮೂಹವು ಸ್ಪಷ್ಟವಾಗಿ ಹೇಳಿದೆ.

ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ವಿರುದ್ಧ ಸರ್ಕಾರದ ಅಸ್ತ್ರ

ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ವಿರುದ್ಧ ಸರ್ಕಾರದ ಅಸ್ತ್ರ

ಒಂದು ಕಾಲದಲ್ಲಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ ಅಲಿಬಾಬಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಹಾಗೂ ಉದ್ಯಮಿ ಜಾಕ್ ಮಾ ಮತ್ತು ಚೀನಾ ಸರ್ಕಾರದ ವಿರುದ್ಧ ತೀವ್ರ ಸಂಘರ್ಷ ನಡೆದಿತ್ತು. ಚೀನಾದ ಕಮ್ಯುನಿಷ್ಟ್ ಸರ್ಕಾರದ ವಿರುದ್ಧ ಬಹಿರಂಗವಾಗಿ ಆರೋಪಿಸಿದ್ದ ಜಾಕ್ ಮಾ, ಅಕ್ಟೋಬರ್ ನಂತರ ಎರಡ್ಮೂರು ತಿಂಗಳ ಕಾಲ ಕಣ್ಮರೆಯಾಗಿದ್ದರು. ಸರ್ಕಾರದ ತೆರಿಗೆ ನೀತಿ ಮತ್ತು ನಿಯಮಗಳ ವಿರುದ್ಧ ಮಾತನಾಡಿದ್ದ ಜಾಕ್ ಮಾ ಅವರನ್ನು ಸರ್ಕಾರವೇ ಹಿಡಿದಿಟ್ಟುಕೊಂಡಿತ್ತು ಎಂಬ ಆರೋಪಗಳೂ ಈ ಮಧ್ಯೆದಲ್ಲಿ ಕೇಳಿ ಬಂದಿದ್ದವು.

English summary
How Covid-19 Accelerates India's Millionaire Exit For Other Nations: Here Read in Detail.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion