• search
  • Live TV
keyboard_backspace

ಆನ್‌ಲೈನ್ ಆಪ್‌ ಗಳಿಂದ ಸಾಲ ಪಡೆದವರಿಗೆ ಸಂತಸದ ಸುದ್ದಿ !

ಬೆಂಗಳೂರು, ಜನವರಿ 14: ಆನ್‌ಲೈನ್ ನಲ್ಲಿ ತುರ್ತು ಸಾಲ ಕೊಟ್ಟು ಜನರ ರಕ್ತ ಹೀರುವ ಜತೆಗೆ, ಖಾಸಗಿ ಸಂಗತಿ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಗುರಿಯಾಗಿರುವ ಆನ್‌ಲೈನ್ ಲೋನ್‌ ಆಪ್‌ಗಳಿಗೆ ಕೆಡುಗಾಲ ಆರಂಭವಾಗಿದೆ. ಜನರ ಭದ್ರತೆ ಹಾಗೂ ಸುರಕ್ಷತಾ ನಿಯಮ ಉಲ್ಲಂಘಿಸಿರುವ ಆನ್‌ಲೈನ್ ಲೋನ್ ಆಪ್‌ಗಳನ್ನು ಗೂಗಲ್ ಸಂಸ್ಥೆ ತನ್ನ ಪ್ಲೇ ಸ್ಟೋರ್ ನಿಂದ ಹೊರ ಹಾಕಿದೆ. ಜನರ ಸುರಕ್ಷತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಇನ್ನೂ ಹಲವು ಆಪ್‌ಗಳನ್ನು ತೆಗೆದು ಹಾಕುವುದಾಗಿ ಟೆಕ್‌ ಗೈಂಟ್ ಗೂಗಲ್ ಸಂಸ್ಥೆ ಪ್ರಕಟಿಸಿದೆ.

ಬಿಡಿಗಾಸು ಸಾಲ ಕೊಟ್ಟ, ಪಾವತಿ ಮಾಡದವರ ಖಾಸಗಿ ವಿಚಾರ ದುರ್ಬಳಕೆ ಮಾಡಿಕೊಂಡು ಜನರ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿರುವ ನೂರಾರು ಆನ್‌ಲೈನ್ ಲೋನ್ ಆಪ್‌ಗಳ ಬಗ್ಗೆ ಟೆಕ್‌ ಗೈಂಟ್ ಗೂಗಲ್ ಸಂಸ್ಥೆ ಪರಿಶೀಲನೆ ನಡೆಸುತ್ತಿದೆ. ಭಾರತೀಯ ತನಿಖಾ ಸಂಸ್ಥೆಗಳು ನೀಡಿದ ದೂರಿನ ಆಧಾರದ ಮೇಲೆ ಈಗಾಗಲೇ ಕೆಲವು ಆಪ್‌ಗಳನ್ನು ಪ್ಲೇ ಸ್ಟೋರ್ ನಿಂದ ಹೊರ ಹಾಕಿರುವ ಗೂಗಲ್ ಸಂಸ್ಥೆ ನೂರಾರು ಆಪ್‌ಗಳ ಸುರಕ್ಷತಾ ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲನೆ ನಡೆಸುತ್ತಿದೆ. "ಮೊದಲ ಹಂತದಲ್ಲಿ ಕೆಲವು ಆನ್‌ಲೈನ್ ಆಪ್‌ಗಳನ್ನು ಹೊರಕ್ಕೆ ಹಾಕಿದೆ. ಬಾಕಿ ಆಪ್‌ಗಳು ಸ್ಥಳೀಯ ಕಾನೂನು, ಬ್ಯಾಂಕಿಂಗ್ ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲು ಆಪ್‌ ತಯಾರಿಸಿದ ಸಂಸ್ಥೆಗಳಿಗೆ ಕೇಳಿದ್ದೇವೆ. ಒಂದು ವೇಳೆ ಆಪ್‌ ಅಭಿವೃದ್ಧಿ ಪಡಿಸಿದ ಸಂಸ್ಥೆಗಳು ಗೂಗಲ್ ಆದೇಶವನ್ನು ಪಾಲಿಸದಿದ್ದರೆ, ಯಾವ ನೋಟಿಸ್ ನೀಡದೇ ಜನರ ಸುರಕ್ಷತೆಗೆ ಧಕ್ಕೆ ತಂದಿರುವ ಎಲ್ಲಾ ಆಪ್‌ಗಳನ್ನು ಮುಲಾಜಿಲ್ಲದೆ ಪ್ಲೇ ಸ್ಟೋರ್ ನಿಂದ ಹೊರ ಹಾಕುವುದಾಗಿ" ಗೂಗಲ್ ಸಂಸ್ಥೆ ಪ್ರಕಟಿಸಿದೆ.

ಆನ್‌ಲೈನ್ ಲೋನ್ ಆಪ್‌ಗಳಿಂದ ಪಡೆದ ಸಾಲ ಮನ್ನಾ: ಪೊಲೀಸರು ಏನಂತಾರೆ?

ಗೂಗಲ್ ಸುರಕ್ಷತೆ:

ಗೂಗಲ್ ಸುರಕ್ಷತೆ:

ತನ್ನ ಗ್ರಾಹಕರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸುವುದು ಗೂಗಲ್ ನ ಮೊದಲ ಆದ್ಯತೆ. ಗೂಗಲ್ ಗ್ರಹಕರ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಮತ್ತಷ್ಟು ನಿಯಮಗಳನ್ನು ರೂಪಿಸಲಾಗುತ್ತಿದ್ದು ಜನರಿಗೆ ಭದ್ರತೆ ಒದಗಿಸುವ ವಿಚಾರದಲ್ಲಿ ನಮ್ಮನ್ನು ನಾವು ಹೆಚ್ಚು ತೊಡಗಿಸಿಕೊಳ್ಳುತ್ತೇವೆ ಎಂದು ಗೂಗಲ್ ಸಂಸ್ಥೆ ಇದೇ ವೇಲೆ ತಿಳಿಸಿದೆ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್ ನಿಂದ ಹಲವು ಆಪ್‌ಗಳು ಕಣ್ಮರೆಯಾಗಿದ್ದು, ಅವುಗಳ ಹೆಸರನ್ನು ಗೂಗಲ್ ಪ್ರಕಟಿಸಿಲ್ಲ. " ತನಿಖಾ ಸಂಸ್ಥೆಗಳು ಹಾಗೂ ಆಪ್‌ ಗ್ರಾಹಕರ ವರದಿ ಆಧಾರದ ಮೇಲೆ ಭಾರತದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದ ಲೋನ್ ಆಪ್‌ಗಳನ್ನು ತೆಗೆದು ಹಾಕಲಾಗಿದೆ. ಇನ್ನೂ ನೂರಾರು ಆಪ್‌ಗಳನ್ನು ತೆಗೆಯುವಂತೆ ಅವುಗಳನ್ನು ಅಭಿವೃದ್ಧಿ ಪಡಿಸಿದವರಿಗೆ ಸೂಚಿಸಿದ್ದೇವೆ. ಒಂದು ವೇಳೆ ತೆಗೆಯದ ಆಪ್‌ ಗಳನ್ನು ಗೂಗಲ್ ತೆಗೆದು ಹಾಕುತ್ತದೆ. ಲೋನ್ ಆಪ್‌ಗಳ ಅಕ್ರಮದ ಬಗ್ಗೆ ಭಾರತದ ತನಿಖಾ ಸಂಸ್ಥೆಗಳಿಗೆ ಗೂಗಲ್ ಸಂಪೂರ್ಣ ಸಹಕಾರ ನೀಡಲಿದೆ" ಎಂದು ಗೂಗಲ್ ತನ್ನ ಬ್ಲಾಗ್ ನಲ್ಲಿ ಪ್ರಕಟಿಸಿದೆ.

ಯಾವ ಆಪ್‌ಗಳು ಉಳಿಯುತ್ತವೆ:

ಯಾವ ಆಪ್‌ಗಳು ಉಳಿಯುತ್ತವೆ:

ಜನರಿಗೆ ಹಣ ತುರ್ತು ಅಗತ್ಯ. ಜನರ ಈ ಬೇಡಿಕೆ ಈಡೇರಿಸುವ ಸಲುವಾಗಿ ಲೋನ್ ಕೊಡುವ ಆಪ್‌ಗಳಿಗೆ ಗೂಗಲ್ ಅವಕಾಶ ಕೊಡಲಿದೆ. ಆದರೆ ಅವುಗಳಿಗೆ ಗೂಗಲ್ ವಿಧಿಸುವ ಷರತ್ತುಗಳನ್ನು ಪಾಲಿಸಲೇಬೇಕು. ಲೋನ್ ಮೊತ್ತ, ಬಡ್ಡಿ ದರ, ಪಾವತಿಸಲು ನೀಡುವ ಸಮಯ, ಈ ನಿಯಮಗಳು ಸಂಬಂಧ ಪಟ್ಟ ಸ್ಥಳೀಯ ಕಾನೂನು ವಿರುದ್ಧ ಇರುವಂತಿಲ್ಲ. ಆನ್‌ಲೈನ್ ಲೋನ್ ಗೆ ಅರ್ಜಿ ಸಲ್ಲಿಸುವರ ಭದ್ರತೆ, ಖಾಸಗಿ ಮಾಹಿತಿ ರಕ್ಷಣೆ, ಸ್ಥಳೀಯ ಕಾನೂನು ಪಾಲನೆ ಕುರಿತ ಆನ್‌ಲೈನ್ ಲೋನ್ ಆಪ್‌ಗಳು ಎಲ್ಲಾ ಷರತ್ತುಗಳನ್ನು ಪಾಲಿಸಬೇಕಾಗಿದೆ. ಎಲ್ಲವೂ ಪಾರದರ್ಶಕವಾಗಿದ್ದರೆ ಮಾತ್ರ ಗೂಗಲ್ ಅಂತಹ ಆರ್ಥಿಕ ಸಂಸ್ಥೆಗಳಿಗೆ ಅವಕಾಶ ನೀಡಲಿದೆ. ಅದೂ ಜನರು ತಮ್ಮ ಕಷ್ಟ ಕಾಲದಲ್ಲಿ ಹಣದ ಅಗತ್ಯತೆ ಪೂರೈಸಿಕೊಳ್ಳಲು ಅವಕಾಶ ನೀಡಿ, ಅದು ಕಾನೂನು ಬದ್ಧವಾಗಿದ್ದರೆ ಮಾತ್ರ ಅದಕ್ಕೆ ಗೂಗಲ್ ಆಸ್ಪದ ನೀಡಲಿದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಗೂಗಲ್ ಈ ನಿರ್ಧಾರದಿಂದ ಬಹುತೇಕ ನೂರಾರು ಆಪ್‌ಗಳು ಬಂದ್ ಆಗುವ ಮುನ್ಸೂಚನೆ ಕೊಟ್ಟಿದೆ.

ತಲೆ ಮೇರೆ ಕೂರುತ್ತೆ ಆನ್‌ಲೈನ್ ಆಪ್‌ಗಳ ಟಾಪಪ್ ಸಾಲ !

ಆರ್ ಬಿಐ ಕಮಿಟಿ ರಚನೆ :

ಆರ್ ಬಿಐ ಕಮಿಟಿ ರಚನೆ :

ಆನ್‌ಲೈನ್ ನಲ್ಲಿ ಕಾನೂನು ಬದ್ಧವಾಗಿ ಲೋನ್ ಕೊಡುವ ಬಗ್ಗೆ ಸಮಗ್ರ ನಿಯಮಗಳನ್ನು ಜಾರಿಗೆ ತರಲು ಭಾರತೀಯ ರಿಸರ್ವ ಬ್ಯಾಂಕ್ ಮುಂದಾಗಿದೆ. ಆನ್‌ಲೈನ್ ಲೋನ್ ಕೊಡಬೇಕಾದರೆ ಆಪ್‌ಗಳು ಪಾಲಿಸಬೇಕಾದ ನಿಯಮಗಳು, ಬಡ್ಡಿಯ ಧರ, ಸಾಲದ ಅವಧಿ, ಸಾಲಗಾರರಿಗೆ ಹಿಂಸೆ ಕೊಡುವರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿಯಮಗಳನ್ನು ರೂಪಿಸುವ ಸಂಬಂಧ ಆರ್ ಬಿಐ ಕಮಿಟಿ ರಚಿಸಿದೆ. ಡಿಜಿಟಲ್ ಸಾಲ ನೀಡುವ ವ್ಯವಸ್ಥೆಗೆ ಅವಕಾಶ ಕಲ್ಪಿಸುವ ಭಾಗವಾಗಿ ಆರ್‌ಬಿಐ ಈ ಕಾರ್ಯಕ್ಕೆ ಮುಂದಾಗಿದೆ. ಆದರೆ, ದುಬಾರಿ ಬಡ್ಡಿ ವಿಧಿಸಿ ಜನರಿಂದ ಸುಲಿಗೆ ಮಾಡಿ ಮರ್ಯಾದೆ ತೆಗೆದ ಆಪ್‌ ಗಳ ಬಗ್ಗೆ ಕ್ರಮ ಜರುಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಆನ್‌ಲೈನ್ ಲೋನ್ ಆಪ್ ಹಗರಣ ಹೊರ ಬೀಳುತ್ತಿದ್ದಂತೆ ಅವು ಯಾವುವೂ ನೋಂದಣಿಯಾಗದ ಅಕ್ರಮ ಸಂಸ್ಥೆಗಳು. ಅಂತಹ ಆಪ್‌ಗಳಲ್ಲಿ ಸಾಲ ಪಡೆದಯದಂತೆ ಆರ್‌ ಬಿಐ ಎಚ್ಚರಿಕೆ ನೀಡಿದ್ದನ್ನು ಸ್ಮರಿಸಬಹುದು.

ಆನ್‌ ಲೈನ್ ಲೋನ್ ಆಪ್‌ ಗಳಿಂದ ಪಡೆದ ಸಾಲ ಮನ್ನಾ ಆದಂಗೆ ?

ಎಪಿಕೆ ಫೈಲ್ ಲಿಂಕ್ :

ಎಪಿಕೆ ಫೈಲ್ ಲಿಂಕ್ :

ಆನ್‌ಲೈನ್ ನಲ್ಲಿ ತುರ್ತು ಸಾಲ ಕೊಡುವ ಮೂಲಕ ಜನರಿಗೆ ಕಿರುಕುಳ ನೀಡಿದ ಆರೋಪದಡಿ ಸೈಬರಾಬಾದ್ ಪೊಲೀಸರು ಸುಮಾರು 417 ಆನ್‌ಲೈನ್ ಲೋನ್ ಆಪ್ ಗಳನ್ನು ಗುರುತಿಸಿದ್ದರು. ಅವುಗಳಲ್ಲಿ ಸುಮಾರು 116 ಆಪ್‌ ಗಳು ಮಾತ್ರ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಾರ್ಯ ನಿರ್ವಹಿಸುವ ಆಪ್‌ಗಳಾಗಿದ್ದು, ಉಳಿದವು ಎಪಿಕೆ ಫೈಲ್ ಆಧಾರಿತ ಆಪ್‌ಗಳು ಎಂಬ ಸಂಗತಿ ಹೊರ ಬಿದ್ದಿತ್ತು. ಗೂಗಲ್ ಅಥವಾ ಐಓಎಸ್ ನಲ್ಲಿ ಇಲ್ಲದ ಈ ಆಪ್‌ಗಳು ವೆಬ್ ತಾಣ ಆಧಾರಿತವಾಗಿದ್ದು, ಒಬ್ಬರಿಂದ ಇನ್ನೊನ್ನರಿಗೆ ಕಳುಹಿರುವ ಲಿಂಕ್ ನಿಂದ ಡೌನ್‌ಲೋಡ್ ಮಾಡಿಕೊಂಡಿರುವ ಆಪ್‌ಗಳು. ಭಾರತದಲ್ಲಿ ಎಪಿಕೆ ಫೈಲ್ ಆಧಾರಿತ ಆನ್‌ಲೈನ್ ಲೋನ್ ಆಪ್‌ಗಳೇ ಹೆಚ್ಚು ಇದ್ದು, ಈ ಬಗ್ಗೆ ತನಿಖಾ ಸಂಸ್ಥೆಗಳು ಮತ್ತು ಆರ್‌ ಬಿ ಐ ಗಂಭೀರವಾಗಿ ಪರಿಗಣಿಸಬೇಕಿದೆ. ತಪ್ಪಿದರೆ ಡಾಟಾ ವಾರ್, ಸೈಬರ್ ಭದ್ರತೆ ವಿಚಾರದಲ್ಲಿ ಭಾರತ ದೊಡ್ಡ ಪೆಟ್ಟು ತಿನ್ನಲಿದೆ ಎಂದು ಸೈಬರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

English summary
Google removes instant loan apps from the play store , which violating user safety policy, Know more..
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X