• search
  • Live TV
keyboard_backspace

ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ಜಾತಿ ಗಣತಿ ಎಂದ ಅಖಿಲೇಶ್‌ ಯಾದವ್‌

Google Oneindia Kannada News

ಲಕ್ನೋ, ನವೆಂಬರ್‌ 12: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದಲ್ಲಿ (2022) ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಿಂದಾಗಿ ಈಗಾಗಲೇ ಎಲ್ಲಾ ಪಕ್ಷಗಳು ಅಧಿಕಾರವನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ. ತಾವು ಅಧಿಕಾರಕ್ಕೆ ಬಂದರೆ ಮಾಡುವ ಜನೋಪಯೋಗಿ ಕಾರ್ಯಗಳ ಬಗ್ಗೆ ಪಕ್ಷಗಳು ಭರವಸೆ ನೀಡುತ್ತಿದೆ. ಈ ನಡುವೆ ಸಮಾಜವಾದಿ ಪಕ್ಷದ ನಾಯಕ, ಮಾಜಿ ಮಖ್ಯಮಂತ್ರಿ ಅಖಿಲೇಶ್‌ ಯಾದವ್‌, "ನಾವು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ಜನರ ಜಾತಿ ಗಣತಿಯನ್ನು ಮಾಡುತ್ತೇವೆ," ಎಂದು ಭರವಸೆಯನ್ನು ನೀಡಿದ್ದಾರೆ.

"ಬಿಜೆಪಿ ಸರ್ಕಾರವು ಹಿಂದುಳಿದ ವರ್ಗದ ಜನರ ಜಾತಿ ಗಣತಿಯನ್ನು ಮಾಡಲು ಬಯಸಲ್ಲ. ಆದರೆ ಉತ್ತರ ಪ್ರದೇಶದಲ್ಲಿ ನಾವು ಗೆಲುವು ಸಾಧಿಸಿ ಅಧಿಕಾರವನ್ನು ಪಡೆಯಲು ನೀವು ಮತವನ್ನು ಹಾಕಿದರೆ, ನಾವು ಹಿಂದುಳಿದ ವರ್ಗದ ಜನರ ಜಾತಿ ಗಣತಿಯನ್ನು ಮಾಡುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ," ಎಂದು ಮುಜಾಫರ್‌ನಗರದಲ್ಲಿ ಉತ್ತರ ಪ್ರದೇಶದ ಮಾಜಿ ಮಖ್ಯಮಂತ್ರಿ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ತಮ್ಮ ಅಸ್ತಿತ್ವಕ್ಕೆ ಮಾರಕವೆಂದೇ ವೈದಿಕಶಾಹಿಗಳಿಗೆ ಜಾತಿ ಗಣತಿ ಬೇಡದ ಸಂಗತಿತಮ್ಮ ಅಸ್ತಿತ್ವಕ್ಕೆ ಮಾರಕವೆಂದೇ ವೈದಿಕಶಾಹಿಗಳಿಗೆ ಜಾತಿ ಗಣತಿ ಬೇಡದ ಸಂಗತಿ

"ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷವು ಬೇರೆ ಬೇರೆ ಪಕ್ಷಗಳೊಂದಿಗೆ ಮೈತ್ರಿಯನ್ನು ಮಾಡುತ್ತದೆ. ನಮ್ಮ ಪಕ್ಷದಲ್ಲಿ ಹಲವಾರು ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿದೆ. ಶೀಘ್ರದಲ್ಲೇ ಈ ಮೈತ್ರಿಯು ನಡೆಯಲಿದೆ. ಈ ಬಿಜೆಪಿ ಸರ್ಕಾರವು ಅಧಿಕಾರದಲ್ಲಿಯೇ ಉಳಿದರೆ, ಜನರಿಂದ ಈ ಬಿಜೆಪಿ ಸರ್ಕಾರ ಎಲ್ಲವನ್ನೂ ಕಸಿದು ಕೊಳ್ಳುತ್ತದೆ," ಎಂದು ದೂರಿದ್ದಾರೆ.

 ಯೋಗಿ ಆದಿತ್ಯನಾಥ್‌ ವಿರುದ್ಧ ವಾಗ್ದಾಳಿ

ಯೋಗಿ ಆದಿತ್ಯನಾಥ್‌ ವಿರುದ್ಧ ವಾಗ್ದಾಳಿ

ಇನ್ನು ಈ ಸಂದರ್ಭದಲ್ಲೇ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ವಿಚಾರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಅಖಿಲೇಶ್‌ ಯಾದವ್‌ ವಾಗ್ದಾಳಿ ನಡೆಸಿದರು. "ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯು ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಈ ಬಿಜೆಪಿ ಸರ್ಕಾರದಲ್ಲಿ ಹೇಗೆ ಮುಗ್ಧ ಜನರನ್ನು ಕೊಲ್ಲಲಾಗಿದೆ ಎಂದು ನಾನು ಉದಾಹರಣೆಯನ್ನು ನಿಮಗೆ ನೀಡಬಹುದು. ಓರ್ವ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ಪೊಲೀಸ್‌ ಠಾಣೆಯಲ್ಲಿ ಥಳಿಸಿ ಕೊಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಹಲವಾರು ಪೊಲೀಸ್‌ ಕಸ್ಟಡಿ ಪ್ರಕರಣಗಳು ನಡೆದಿದೆ," ಎಂದು ಆರೋಪ ಮಾಡಿದರು. "ಬಿಜೆಪಿ ಪಕ್ಷವು ಈಗಾಗಲೇ ರೈತರ ಮೇಲೆ ಧಮನಕಾರಿ ನೀತಿಯನ್ನು ಹೇರಿದೆ, ಇನ್ನು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ನಾಶ ಮಾಡುತ್ತದೆ," ಎಂದು ಕೂಡಾ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ ದೂರಿದ್ದಾರೆ.

 ಸಮಾಜವಾದಿ ವಿಜಯ ರಥಯಾತ್ರೆ

ಸಮಾಜವಾದಿ ವಿಜಯ ರಥಯಾತ್ರೆ

ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಪಕ್ಷದ ಹೊಸ ಮಿಷನ್‌ 2022 ಅನ್ನು ಸಮಾಜವಾದಿ ವಿಜಯ ರಥಯಾತ್ರೆಗೆ ಚಾಲನೆ ನೀಡುವ ಮೂಲಕ ಆರಂಭ ಮಾಡಿದ್ದಾರೆ. ಈ ರಥಯಾತ್ರೆಯು ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರದಲ್ಲೂ ನಡೆಯಲಿದೆ. 2022 ರಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಿಂದಾಗಿ ಈ ರಥಯಾತ್ರೆಯನ್ನು ನಡೆಸಲಾಗುತ್ತಿದೆ. ಇದು ಮೊದಲ ಹಂತದಲ್ಲಿ ಕಾನ್ಪುರ, ಕಾನ್ಪುರ ದೇಹತ್‌, ಹಮೀರ್‌ಪುರ, ಜಲೌನ್‌ ಮೂಲಕ ಸಾಗಲಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದೌರ್ಜನ್ಯ, ಜನವಿರೋಧಿ ನೀತಿಯ ಬಗ್ಗೆ ಜನರಿಗೆ ಎಚ್ಚರಿಕೆಯನ್ನು ನೀಡುವ ನಿಟ್ಟಿನಲ್ಲಿ ಹಾಗೂ ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಣೆ ಮಾಡುತ್ತೇವೆ ಎಂಬ ದ್ಯೇಯವನ್ನು ಎಸ್‌ಪಿ ಹೊಂದಿದೆ.

'ಹಿಂದುಳಿದ ವರ್ಗದ ಜಾತಿಗಣತಿ ನಿಷ್ಪ್ರಯೋಜಕ, ಕಷ್ಟ' ಎಂದ ಕೇಂದ್ರ ಸರ್ಕಾರ'ಹಿಂದುಳಿದ ವರ್ಗದ ಜಾತಿಗಣತಿ ನಿಷ್ಪ್ರಯೋಜಕ, ಕಷ್ಟ' ಎಂದ ಕೇಂದ್ರ ಸರ್ಕಾರ

 ಜಾತಿಗಣತಿಗೆ ಹಲವು ನಾಯಕರುಗಳ ಒತ್ತಾಯ

ಜಾತಿಗಣತಿಗೆ ಹಲವು ನಾಯಕರುಗಳ ಒತ್ತಾಯ

ದೇಶದಲ್ಲಿ ಜಾತಿ ಗಣತಿ ನಡೆಯಬೇಕು ಎಂದು ಹಲವು ನಾಯಕರುಗಳು ಒತ್ತಾಯ ಮಾಡಿದ್ದಾರೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಜಾತಿ ಗಣತಿಯಿಂದ ಹಿಂದೆ ಸರಿದಿದೆ. 1996 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಕೇವಲ 13 ದಿನಗಳ ಕಾಲ ಅಸ್ತಿತ್ವದಲ್ಲಿದ್ದ ಎನ್‌‌ಡಿಎ ಸರ್ಕಾರವು ತಾನು ಅಧಿಕಾರದಲ್ಲಿದ್ದ 13 ದಿನಗಳಲ್ಲೇ ಜಾತಿ ಗಣತಿಯನ್ನು ನಿಲ್ಲಿಸಬೇಕೆಂಬ ನಿರ್ಧಾರವನ್ನು ಕೈಗೊಂಡಿತು. ಈಗ ಸ್ಥಗಿತ ಮಾಡಿರುವ ಜಾತಿ ಗಣತಿಯನ್ನು ಮತ್ತೆ ಆರಂಭ ಮಾಡಬೇಕು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ರ ಒತ್ತಾಯವಾಗಿದೆ. ಜಾತಿ ಆಧಾರಿತ ಜನಗಣತಿ ನಡೆಸಲು ಒತ್ತಾಯಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಇದು ಸಾಧ್ಯವಿಲ್ಲ ಎಂದು ಹೇಳಿದೆ.

ಜಾತಿ ಆಧಾರಿತ ಜನಗಣತಿಗಾಗಿ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ನಿತೀಶ್, ತೇಜಸ್ವಿಜಾತಿ ಆಧಾರಿತ ಜನಗಣತಿಗಾಗಿ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ ನಿತೀಶ್, ತೇಜಸ್ವಿ

"ಜಾತಿಗಣತಿ ನಿಷ್ಪ್ರಯೋಜಕ" ಎಂದಿರುವ ಕೇಂದ್ರ

ಈ ಜಾತಿಗಣತಿ ವಿಚಾರವು ಸುಪ್ರೀಂ ಕೋರ್ಟ್‌ನ ಮೆಟ್ಟಿಲನ್ನು ಕೂಡಾ ಏರಿದೆ. ಮಹಾರಾಷ್ಟ್ರವು 2021 ರ ಜನಗಣತಿಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಜಾತಿಗಣತಿಯನ್ನು ಕೂಡಾ ಮಾಡಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ರಿಟ್‌ ಅರ್ಜಿಯನ್ನು ಸಲ್ಲಿಕೆ ಮಾಡಿದೆ. ಇದಕ್ಕೆ ಅಫಿಡವಿಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರವು "ಜಾತಿ ಗಣತಿ ನಿಷ್ಪ್ರಯೋಜಕ" ಎಂದು ಹೇಳಿದೆ. "ಹಿಂದುಳಿದ ವರ್ಗಗಳ ಜಾತಿಗಣತಿಯನ್ನು ಮಾಡುವುದು ಆಡಳಿತಾತ್ಮಕವಾಗಿ ಕಷ್ಟ ಹಾಗೂ ತೊಡಕು ಉಂಟಾಗುತ್ತದೆ," ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. "ಸ್ವಾತಂತ್ಯ್ರಕ್ಕೂ ಮೊದಲು ಮಾಡಲಾಗಿರುವ ಜಾತಿಗಣತಿಯಲ್ಲಿ ಡೇಟಾದಲ್ಲಿ ಹಲವಾರು ತೊಂದರೆ ಹಾಗೂ ಸ್ಪಷ್ಟತೆಯ ಕೊರತೆ ಇದ್ದವು. 2011 ರಲ್ಲಿ ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಜಾತಿಗಣತಿಯಲ್ಲಿ (ಎಸ್‌ಇಸಿಸಿ) ಜಾತಿಯ ಡೇಟಾವನ್ನು ಜನರಿಂದ ಪಡೆಯಲಾಗಿದೆ. ಆದರೆ ಅದು ಯಾವುದೇ ಪ್ರಯೋಜನಕ್ಕೆ ಬಂದಿಲ್ಲ. ಬದಲಾಗಿ ಹಲವಾರು ತಾಂತ್ರಿಕ ದೋಷವೇ ಇದೆ," ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮನವಿ ಮಾಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
UP polls 2022: Akhilesh Yadav promises caste census if Samajwadi Party voted to power.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X