ಕೊಡಗು ಜಿಲ್ಲೆಗೂ ಶ್ರೀರಾಮನಿಗೂ ಇರುವ ನಂಟೇನು? ಇರ್ಪುವಿನ ಜಲಪಾತ ಪರಮ ಪವಿತ್ರ ಏಕೆ?
ಮಡಿಕೇರಿ, ಜನವರಿ 09: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆ ಹೊತ್ತಿನಲ್ಲಿ ದೇಶದಾದ್ಯಂತ ರಾಮನ ವಿಶೇಷತೆ ಮತ್ತು ಆತ ಬಿಟ್ಟು ಹೋದ ಹೆಜ್ಜೆಗುರುತುಗಳನ್ನು ಪರಿಚಯಿಸುವ ಕೆಲಸಗಳು ನಡೆಯುತ್ತಿವೆ. ಆತನ ಪ್ರತಿ ಊರಿನಲ್ಲೂ ಆತನ ಮಹಿಮೆಯಿದೆ ಅಷ್ಟೇ ಅಲ್ಲದೆ ಪಾದಸ್ಪರ್ಶದಿಂದ ಊರು ಪಾವನವಾಗಿದೆ. ದಟ್ಟ ಕಾಡಿನಿಂದಾವೃತವಾಗಿದ್ದ ಪ್ರದೇಶಗಳಿಗೆ ಸೀತೆಯನ್ನು ಹುಡುಕುತ್ತಾ ಬಂದಿದ್ದ ಎಂಬ ಪೌರಾಣಿಕ ಕಥೆಗಳು ಅದಕ್ಕೆ ಸಾಕ್ಷಿ ಎಂಬಂತೆ ಪ್ರಕೃತಿಯಲ್ಲಿ ಲೀನವಾದ ಪವಾಡಗಳು ನಮ್ಮ ಮುಂದಿವೆ.
ವನವಾಸದ ಕಾಲದಲ್ಲಿ ಸೀತೆಯನ್ನು ಅರಸುತ್ತಾ ಕೊಡಗಿಗೆ ಲಕ್ಷ್ಮಣ ಸಮೇತ ಶ್ರೀರಾಮ ಬಂದಿದ್ದ ಎಂಬ ಐಹತ್ಯವಿದೆ. ಅಷ್ಟೇ ಅಲ್ಲದೆ ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲವೇ ಇವತ್ತು ಕೊಡಗಿನಿಂದ ಹರಿದು ಬಂದು ಕಾವೇರಿನ್ನು ಸೇರುವ ಲಕ್ಷ್ಮಣ ತೀರ್ಥ ನದಿ ಎಂದು ಜನ ನಂಬಿದ್ದಾರೆ. ಕೊಡಗಿನ ಮಟ್ಟಿಗೆ ಪ್ರಮುಖ ದೈವ ತಾಣ ಮತ್ತು ಪ್ರವಾಸಿ ತಾಣಗಳಲ್ಲೊಂದಾದ ಇರ್ಪು ಕ್ಷೇತ್ರ ರಾಮ ಭೇಟಿ ನೀಡಿದ ತಾಣವೆಂದು ಹೇಳಲಾಗಿದೆ. ಇಲ್ಲಿ ರಾಮ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದ ಎಂಬ ನಂಬಿಕೆಯೂ ಇದೆ.

ಇವತ್ತು ಇರ್ಪು ಪ್ರವಾಸಿ ತಾಣವಾಗಿ ಗಮನಸೆಳೆಯುತ್ತಿದ್ದರೆ ಅದಕ್ಕೆ ಕಾರಣ ಇಲ್ಲಿ ಧುಮ್ಮಿಕ್ಕುವ ಜಲಪಾತ ಮತ್ತು ಕೇರಳ ಶೈಲಿಯಲ್ಲಿರುವ ಶ್ರೀರಾಮನ ದೇಗುಲ. ಪ್ರಕೃತಿಯ ನಡುವೆ ಬೆಟ್ಟಗುಡ್ಡಗಳಿಂದ ಆವೃತವಾದ ಸುಂದರವಾದ ಸ್ಥ್ಳದಲ್ಲಿ ನೆಲೆ ನಿಂತ ಈ ತಾಣಕ್ಕೆ ತೆರಳಿದವರಿಗೆ ಇಲ್ಲಿ ಮನಶಾಂತಿ ಸಿಗುತ್ತದೆ. ಏನೋ ಒಂದು ಶಕ್ತಿ ನಮ್ಮನ್ನು ಜಂಜಾಟಗಳಿಂದ ದೂರ ಮಾಡಿದ ಅನುಭವ ನೀಡುತ್ತದೆ.
ಇರ್ಪುವಿನ ಜಲಪಾತ ಪರಮ ಪವಿತ್ರ ಏಕೆ?
ಕೊಡಗಿನಲ್ಲಿ ಹತ್ತಾರು ಜಲಪಾತಗಳಿವೆ. ಆದರೆ ಇರ್ಪು ಜಲಪಾತ ಮಾತ್ರ ವಿಶಿಷ್ಟವಾಗಿದೆ. ಈ ಜಲಪಾತವನ್ನು ಪರಮ ಪವಿತ್ರ ಎಂದು ನಂಬುತ್ತಾರೆ, ಹೀಗಾಗಿಯೇ ಇಲ್ಲಿ ಸ್ನಾನ ಮಾಡಿ ಪುನೀತರಾಗುತ್ತಾರೆ. ಅದರಲ್ಲೂ ಶಿವರಾತ್ರಿಯಂದು ಈ ತೀರ್ಥಕ್ಕೆ ತಲೆಕೊಟ್ಟು ಮಿಂದರೆ ಇಷ್ಟಾರ್ಥ ನೆರವೇರುವುದರೊಂದಿಗೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆಯಿದೆ. ಇನ್ನು ಈ ಕ್ಷೇತ್ರಕ್ಕೆ ಶ್ರೀರಾಮನ ಪಾದಸ್ಪರ್ಶ ಹೇಗಾಯಿತು? ಇರ್ಪು ಜಲಪಾತದ ಸೃಷ್ಟಿ ಹೇಗಾಯಿತು? ಹೀಗೆ ಪ್ರಶ್ನೆಗಳಿಗೆಲ್ಲ ಜನವಲಯದಲ್ಲಿರುವ ಕಥೆಗಳು ಉತ್ತರ ಹೇಳುತ್ತವೆ.

ಸೀತೆಯನ್ನು ಅರಸುತ್ತಾ ವಾನರಾದಿಯಾಗಿ ಹೊರಟ ರಾಮಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎದುರಾಗುತ್ತದೆ. ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಮುನ್ನಡೆಯುತ್ತಿದ್ದರೆ ಲಕ್ಷ್ಮಣ ಮಾತ್ರ ಮುಂದಕ್ಕೆ ಹೆಜ್ಜೆಯಿರಿಸದೆ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ಕೂರದ ಆತ ಅಂದು ಕುಳಿತ ಜಾಗವೇ ಮಲಯಾಳದಲ್ಲಿ ಇರಿಕ್ಕನ್ (ಕುಳಿತುಕೊಳ್ಳುವುದು) ಪದದಿಂದ ಇರ್ಪು ಹುಟ್ಟಿತೆಂದು ಹೇಳಲಾಗುತ್ತಿದೆ.
ಇದು ಲಕ್ಷ್ಮಣ ಸೃಷ್ಟಿಸಿದ ಜಲಧಾರೆ
ಇದಾದ ಬಳಿಕ ತನ್ನ ವರ್ತನೆಗೆ ಬೇಸರಗೊಂಡ ಆತ ಅಣ್ಣ ಶ್ರೀರಾಮನಿಗೆ ಬೇಸರ ಮಾಡಿಬಿಟ್ಟೆ ಎಂಬ ನೋವಿನಲ್ಲಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಆತನಿಗೆ ಸಮಾಧಾನ ಹೇಳಿದನಂತೆ ನಂತರ ಸಂತಸಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ಆರಿಸಲು(ನಂದಿಸಲು) ಬಾಣಬಿಟ್ಟನಂತೆ ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತಂತೆ. ಅವತ್ತು ಲಕ್ಷ್ಮಣ ಸೃಷ್ಟಿಸಿದ ಜಲಧಾರೆಯೇ ಇಂದಿನ ಇರ್ಪು ಜಲಧಾರೆಯಾಗಿದ್ದು, ಇದಕ್ಕೆ ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿದ ಎಂಬುದು ಎಲ್ಲರ ನಂಬಿಕೆಯಾಗಿದೆ.

ಇರ್ಪುವಿನಲ್ಲಿರುವ ರಾಮೆಶ್ವರ ದೇವಾಲಯ ಕೇರಳೀಯರ ವಾಸ್ತುಶಿಲ್ಪದೊಂದಿಗೆ ವೃತ್ತಾಕಾರದ ಗರ್ಭಗುಡಿಯನ್ನು ಹೊಂದಿ ಬಲು ಸೊಗಸಾಗಿ ನಿರ್ಮಿಸಲ್ಪಟ್ಟಿದೆ. ಇದು ಜಿಲ್ಲೆಯಲ್ಲಿರುವ ಇತರೆ ದೇವಾಲಯಕ್ಕಿಂತ ಭಿನ್ನವಾಗಿ ಗೋಚರಿಸುತ್ತದೆ. ಇರ್ಪು ಮಡಿಕೇರಿಯಿಂದ 85 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಮಡಿಕೇರಿ ಕಡೆಯಿಂದ ಬರುವವರು ಮೂರ್ನಾಡು, ವೀರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಅಥವಾ ಹುಣಸೂರು ನಾಗರಹೊಳೆ ಮೂಲಕವೂ ಬರಬಹುದಾಗಿದೆ.
ಒಂದಷ್ಟು ವಿಶೇಷತೆಗಳು ಇಲ್ಲಿವೆ
ಒತ್ತೊತ್ತಾಗಿರುವ ಅರಣ್ಯಗಳನ್ನೊಳಗೊಂಡ ಗಿರಿಶಿಖರಗಳು, ಭೋರ್ಗರೆದು ಧುಮುಕುವ ಜಲಪಾತ, ವಿಶಾಲ ಗದ್ದೆ ಬಯಲುಗಳ ನಡುವೆ ನೆಲೆ ನಿಂತ ರಾಮೇಶ್ವರ ದೇಗುಲ ಪ್ರಶಾಂತತೆಯನ್ನು ಸೀಳಿ ಬರುವ ಗಂಟೆಯ ನಿನಾದ ಮನಸ್ಸಿಗೆ ಮುದ ನೀಡಿದರೆ, ಪಶ್ಚಿಮಘಟ್ಟ ಪ್ರದೇಶಕ್ಕೆ ಸೀಮಿತವಾದ ಮಲಬಾರ್ ಬ್ಯಾಂಡೆಡ್ ಪೀಕಾಕ್ (ಪ್ಯಾಪಿಲಿಯೋ ಬುದ್ದಾ) ಎಂಬ ಚಿಟ್ಟೆ, ರಾಮೇಶ್ವರ ದೇವಾಲಯ ಆವರಣದಲ್ಲಿ ಅಶೋಕ ವೃಕ್ಷ, ಬೆಟ್ಟ ಸಾಲಲ್ಲಿರುವ ಮುನಿಕಲ್ ಗುಹೆ ವಿಶೇಷತೆಗಳಾಗಿವೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications