Get Updates
Get notified of breaking news, exclusive insights, and must-see stories!

Weekend getaways: ವಾರಾಂತ್ಯಕ್ಕೆ ಮೈಸೂರಿನಲ್ಲಿ ನೀವು ನೋಡಲೇಬೇಕಾದ ಪಾರಂಪರಿಕ ತಾಣಗಳಿವು, ಅದ್ಭುತಗಳ ವಿವರ ಇಲ್ಲಿದೆ

ಮೈಸೂರು, ಜುಲೈ, 14: ಸಾಮಾನ್ಯವಾಗಿ ವಾರಾಂತ್ಯ ಬಂತೆಂದರೆ ಸಾಕು ಪ್ರವಾಸಿ ತಾಣಗಳಿಗೆ ಹೋಗುವವರ ಸಂಖೈ ತುಸು ಹೆಚ್ಚಾಗಿಯೇ ಇರುತ್ತದೆ. ಅದರಲ್ಲೂ ಮಳೆ ಪಡೆಯುವ ತಾಣಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಇನ್ನು ಕೆಲವರು ಸ್ಮಾರಕಗಳಿಗೆ ಭೇಟಿ ನೀಡಿ ಅಲ್ಲಿನ ಇತಿಹಾಸಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಅದೇ ರೀತಿ ನೀವು ನೋಡಲೇಬೇಕಾದ ಪಾರಂಪರಿಕ ತಾಣಗಳು ಸಾಂಸ್ಕೃತಿಕ ನಗರಿಯಲ್ಲೂ ಇವೆ. ಹಾಗಾದರೆ ಮತ್ಯಾಕೆ ತಡ ಈ ಅದ್ಭುತಗಳನ್ನು ಸವಿಯಲು ತಯಾರಾಗಿ.

ಮೈಸೂರು ಸಾಂಸ್ಕೃತಿಕ ನಗರಿ ಹೇಗೋ, ಪಾರಂಪರಿಕ ನಗರ ಕೂಡ ಹೌದು. ಇಲ್ಲಿರುವ ಕಟ್ಟಡಗಳು ನಮ್ಮ ಸಂಸ್ಕತಿಯ ಪ್ರತೀಕವಾಗಿವೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುವುದರೊಂದಿಗೆ ಅವು ಮೈಸೂರಿನ ಹಿರಿಮೆಯಾಗಿವೆ. ಹಾಗಾದರೆ ಮೈಸೂರಿನಲ್ಲಿ ನೀವು ನೋಡಲೇಬೇಕಾದ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ತಿಳಿಯಿರಿ.

Weekend getaways

ಮೈಸೂರಿನಲ್ಲಿ 200ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ. ಅದರಲ್ಲಿ ಸರ್ಕಾರ ಅಧಿಕೃತವಾಗಿ 131 ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಘೋಷಿಸಿದೆ. ಹಾಗೆ ನೋಡಿದರೆ ಪಾರಂಪರಿಕತೆಯಿಂದ ಮೈಸೂರು ಹೆಸರುವಾಸಿ ಆಗಿದೆ. ಮೈಸೂರು ರಾಜರು ಹಾಗೂ‌ ಬ್ರಿಟೀಷರ ಕಾಲದಲ್ಲಿ ಹಲವಾರು ಪಾರಂಪರಿಕ ಕಟ್ಟಡಗಳನ್ನು ಕಟ್ಟಲಾಗಿದೆ. ಇಂಡೋ ಸಾರ್ಸೆನಿಕ್, ಗೋಥಿಕ್, ಗ್ರೀಕ್ ರೋಮನ್ ಹಾಗೂ ಹಿಂದೂ ಸಾಂಪ್ರದಾಯಿಕ ಶೈಲಿಯಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಮೈಸೂರು ಅರಮನೆ: ಮೈಸೂರು ಅರಮನೆಯು ನಗರದ ಅತ್ಯಂತ ಅದ್ಭುತವಾದ ಕಟ್ಟಡವಾಗಿದೆ. ಅಲ್ಲದೆ, ವಿಶ್ವದಲ್ಲೇ ಆಕರ್ಷಣೀಯ ತಾಣವಾಗಿದೆ. 41 ಲಕ್ಷದಲ್ಲಿ ಅರಮನೆಯನ್ನು 1912ರಲ್ಲಿ ಕಟ್ಟಲಾಯಿತು. ಹಳೆ ಮರದ ಅರಮನೆ ಬೆಂಕಿಗೆ ಭಸ್ಮವಾದ ಮೇಲೆ ಈ ಅರಮನೆ ಕಟ್ಟಲಾಯಿತು. ಇಂದಿಗೂ ರಾಜಮನೆತನದವರು ಇಲ್ಲಿ ವಾಸವಿದ್ದಾರೆ. ಹೆನ್ರಿ ಇರ್ವಿನ್ ಇದರ ವಾಸ್ತುಶಿಲ್ಪಿ ಆಗಿದ್ದಾರೆ.

ಜಗನ್ಮೋಹನ ಅರಮನೆ: ಮೈಸೂರು ರಾಜರು ನಿರ್ಮಿಸಿರುವ ಹಲವಾರು ಪಾರಂಪರಿಕ ಕಟ್ಟಡಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಜಗನ್ಮೋಹನ ಅರಮನೆ. 1861ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಅರಮನೆಯನ್ನು ನಿರ್ಮಿಸಿದರು. ಇಲ್ಲಿ ಪ್ರಜಾಪ್ರತಿನಿಧಿ ಸಭೆ ನಡೆಯುತ್ತಿತ್ತು. ಅಲ್ಲದೆ, ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಕೂಡ ನಡೆದಿತ್ತು. ರವಿವರ್ಮ ಸೇರಿದಂತೆ ಹಲವರ ಚಿತ್ರಪಟಗಳನ್ನು ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ.

ವೆಲ್ಲಿಂಗ್ಟನ್ ಹೌಸ್‌: ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ವೆಲ್ಲಿಂಗ್ಟನ್ ಹೌಸ್ ಅನ್ನು 1799ರಲ್ಲಿ ಟಿಪ್ಪು ಸುಲ್ತಾನನ ಸೋಲಿನ ನಂತರ ಬ್ರಿಟೀಷರು ತರಾತುರಿಯಲ್ಲಿ ಈ ಕಟ್ಟಡವನ್ನು ಪೂರ್ಣಗೊಳಿಸಿದರು. ಇದರ ಮೊದಲ ನಿವಾಸಿ ಆರ್ಥರ್ ವೆಲ್ಲೆಸ್ಲಿ. ಇದು ಮೈಸೂರಿನ ಕಮಿಷನರ್‌ಗಳ ಮೊದಲ ಪ್ರಧಾನ ಕಛೇರಿಯಾಗಿತ್ತು. ಈ ಕಟ್ಟಡವು ವಿವಿಧ ಸರ್ಕಾರಿ ಕಚೇರಿಗಳಿಗೆ ಬಳಸಲ್ಪಟ್ಟಿತ್ತು. ನಂತರ ನಿಧಾನವಾಗಿ ಪಾಳು ಬೀಳಲು ಪ್ರಾರಂಭಿಸಿತು. ಪ್ರಸ್ತುತ ರಾಷ್ಟ್ರೀಯ ಮಾನವ ಸಂಗ್ರಹಾಲಯವು ವಹಿಸಿಕೊಂಡು ಕಟ್ಟಡವನ್ನು ನವೀಕರಿಸಿದೆ.

ಲಲಿತ ಮಹಲ್ ಪ್ಯಾಲೇಸ್: ಇದು ಮೈಸೂರಿನ ಎರಡನೇ ಅತಿದೊಡ್ಡ ಅರಮನೆಯಾಗಿದೆ. ಮೈಸೂರು ರಾಜರು ಭಾರತದ ವ್ಯಾಸರಾಯ್‌ಗಳು ಹಾಗೂ ಯುರೋಪ್ ಅತಿಥಿಗಳು ಬಂದರೆ ಉಳಿದುಕೊಳ್ಳಲು 1931ರಲ್ಲಿ ಈ ಅರಮನೆಯನ್ನು ಕಟ್ಟಿದ್ದರು.‌ ಅರಮನೆಯನ್ನು ಶುದ್ಧ ಬಿಳಿ ಬಣ್ಣದಿಂದ ಅಲಂಕೃತಗೊಳಿಸಲಾಗಿದೆ. ಇದನ್ನು 1974ರಲ್ಲಿ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಯಿತು. ಎರಡು ಅಂತಸ್ತಿನ ಈ ಕಟ್ಟಡ ಯುರೋಪಿಯನ್ ಶೈಲಿಯಲ್ಲಿದೆ.

ಸೇಂಟ್ ಫಿಲೋಮಿನಾ ಚರ್ಚ್: 1804ರಲ್ಲಿ ಗೋಥಿಕ್ ಶೈಲಿಯ ಇದು ಅವಳಿ ಚರ್ಚ್ ಆಗಿದ್ದು, 175 ಅಡಿ ಎತ್ತರವಿದೆ. ಪ್ರವಾಸಿಗರ ಪ್ರಮುಖ‌ ಆಕರ್ಷಣೀಯ ಕೇಂದ್ರಬಿಂದುವಾಗಿದೆ. ಯೇಸುವಿನ ಜೀವನದ ಪ್ರಮುಖ ದೃಶ್ಯಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಚರ್ಚ್‌ನ ಗೋಡೆಗಳ ಮೇಲೆ ಬೈಬಲ್‌ನ ಚಿತ್ರಗಳನ್ನು ಬರೆಯಲಾಗಿದೆ. ಇದನ್ನು 1933 ಮತ್ತು 1941ರ ನಡುವೆ ಮೈಸೂರಿನ ಬಿಷಪ್‌ ರೆವರೆಂಡ್ ರೆನೆ ಪ್ಯೂಗಾ ಅವರ ಕೋರಿಕೆಯ ಮೇರೆಗೆ ನಿರ್ಮಿಸಲಾಯಿತು.

ಚಾಮುಂಡಿ ದೇವಸ್ಥಾನ: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನವೂ ಒಂದಾಗಿದೆ. 1659ರಲ್ಲಿ ಚಾಮುಂಡೇಶ್ವರಿ ದೇವಿಯನ್ನು ನೋಡಲು ಭಕ್ತರಿಗೆ ಅನುಕೂಲವಾಗಲೆಂದು ಬೆಟ್ಟಕ್ಕೆ ಸಾವಿರ ಮೆಟ್ಟಿಲು ನಿರ್ಮಿಸಲಾಯಿತು. ದೇವಾಲಯವು ದ್ರಾವಿಡ ಶೈಲಿಯ ವಾಸ್ತುಶಿಲ್ಪ ಮಾದರಿಯಿಂದ ನಿರ್ಮಿಸಲ್ಪಟ್ಟಿದ್ದು, ರಚನೆಯಲ್ಲಿ ಚತುರ್ಭುಜಾಕಾರವಾಗಿದೆ. ಆಷಾಢ ಮಾಸ ಸೇರಿದಂತೆ ಬೆಟ್ಟದ ತಾಯಿ ನೋಡಲು ಸಾವಿರಾರು ಭಕ್ತರು ಬರುತ್ತಾರೆ.

ದೊಡ್ಡ‌ಗಡಿಯಾರ: ಚಾಮರಾಜ ಸರ್ಕಲ್ ಮತ್ತು ಟೌನ್ ಹಾಲ್ ಪಕ್ಕದಲ್ಲಿರುವ ಮೈಸೂರಿನ ಗಡಿಯಾರ ಗೋಪುರ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 25 ವರ್ಷಗಳ ಆಡಳಿತದ ನೆನಪಿಗಾಗಿ 1927ರಲ್ಲಿ ಕಣ್ಮನ ಸೆಳೆಯುವ ಗಡಿಯಾರ ಗೋಪುರವನ್ನು ನಿರ್ಮಿಸಲಾಯಿತು. ಗಡಿಯಾರವು 75 ಅಡಿ ಎತ್ತರವನ್ನು ಇಂಡೋ ಸರಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮೇಲಿನ ಗುಮ್ಮಟವು ರಾಜಸ್ಥಾನದ ಅರಮನೆಗಳನ್ನು ಹೋಲುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+