Bengaluru Agartala Flight: ಬೆಂಗಳೂರು-ಅಗರ್ತಲ ನೇರ ವಿಮಾನ; ದಿನಾಂಕ, ದರದ ಮಾಹಿತಿ

ಬೆಂಗಳೂರು, ಮೇ 31; ಬೆಂಗಳೂರು ಮತ್ತು ತ್ರಿಪುರಾ ರಾಜ್ಯದ ರಾಜಧಾನಿ ಅಗರ್ತಲ ನಡುವೆ ಮತ್ತೊಂದು ನೇರ ವಿಮಾನಯಾನ ಸೇವೆ ಆಗಸ್ಟ್‌ನಿಂದ ಆರಂಭವಾಗಲಿವೆ. ಈಗಾಗಲೇ ಬೆಂಗಳೂರು ನಗರಿಂದ ಮೂರು ವಿಮಾನಗಳು ಈಶಾನ್ಯ ಭಾರತದ ರಾಜ್ಯವನ್ನು ಸಂಪರ್ಕಿಸುತ್ತಿವೆ.

ವಿಸ್ತಾರ ವಿಮಾನಯಾನ ಸಂಸ್ಥೆ ಆಗಸ್ಟ್‌ 1 ರಿಂದ ಬೆಂಗಳೂರು-ಅಗರ್ತಲ ನಡುವೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಹೇಳಿದೆ. ಆದರೆ ವಾರದಲ್ಲಿ ಎಷ್ಟು ದಿನ ಈ ವಿಮಾನ ಸಂಚಾರ ನಡೆಸಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

Bengaluru Agartala Flight

ಇಂಡಿಗೋ ಮತ್ತು ಆಕಾಶ್‌ ಏರ್‌ಲೈನ್ಸ್‌ ಬೆಂಗಳೂರು ಮತ್ತು ಅಗರ್ತಲ ಮಾರ್ಗದಲ್ಲಿ ಮೂರು ವಿಮಾನಗಳನ್ನು ಓಡಿಸುತ್ತಿವೆ. ಈಗ ವಿಸ್ತಾರ ಸಂಸ್ಥೆ ಸಹ ಇದೇ ಮಾರ್ಗದಲ್ಲಿ ವಿಮಾನ ಸಂಚಾರ ಆರಂಭ ಮಾಡುವುದಾಗಿ ಘೋಷಣೆ ಮಾಡಿದೆ.

ಬೆಂಗಳೂರು-ಅಗರ್ತಲ ವಿಮಾನ; ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣದ ನಿರ್ದೇಶಕ ಕೆ. ಸಿ. ಮೀನಾ ಈ ಕುರಿತು ಮಾಹಿತಿ ನೀಡಿದ್ದಾರೆ. "ವಿಸ್ತಾರ ಬೆಂಗಳೂರು-ಅಗರ್ತಲ ನಡುವೆ ನೇರ ವಿಮಾನ ಆರಂಭಿಸಲಿದೆ. ಆಗಸ್ಟ್‌ 1ರಿಂದ ಈ ಸೇವೆ ಆರಂಭವಾಗಲಿದೆ" ಎದು ಹೇಳಿದ್ದಾರೆ.

Bengaluru Agartala Flight

ಬೆಂಗಳೂರು ನಗರದಿಂದ ಹೊರಡುವ ವಿಮಾನ ನೇರವಾಗಿ ಅಗರ್ತಲಕ್ಕೆ ಆಗಮಿಸಲಿದೆ. ಆದರೆ ವಾಪಸ್ ತೆರಳುವ ಮಾರ್ಗದಲ್ಲಿ ಅಗರ್ತಲದಿಂದ ಹೊರಡುವ ವಿಮಾನ ಗೌಹಾತಿಯನ್ನು ತಲುಪಿ ಅಲ್ಲಿಂದ ಬೆಂಗಳೂರಿಗೆ ಸಾಗಲಿದೆ.

ಸ್ಪೈಸ್ ಜೆಟ್ ಸಹ ಅಗರ್ತಲ ಮತ್ತು ಬಾಂಗ್ಲಾದೇಶದ ಚಿತ್ತಗಾಂಗ್ ನಡುವೆ ನೇರ ವಿಮಾನ ಆರಂಭಿಸಲು ಮುಂದಾಗಿದೆ. ಆದರೆ ಕೇಂದ್ರ ಗೃಹ ಇಲಾಖೆ ಇನ್ನೂ ಅಗತ್ಯ ಅನುಮತಿಯನ್ನು ನೀಡಿಲ್ಲ ಎಂದು ಕೆ. ಸಿ. ಮೀನಾ ಹೇಳಿದರು.

ಅಗರ್ತಲ-ಚಿತ್ತಗಾಂಗ್ ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಅಗತ್ಯವಾಗಿ ಅನುಮತಿಯನ್ನು ಪಡೆಯಲು ನಾವು ಪ್ರಯತ್ನ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ಜೂನ್ ತಿಂಗಳಿನಿಂದಲೇ ವಿಮಾನ ಹಾರಾಟ ಆರಂಭಿಸಲು ಸಂಸ್ಥೆಗಳು ಸಿದ್ಧವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ವಿಮಾನಗಳ ಹಾರಾಟ; ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ 34-36 ವಿಮಾನಗಳು ಆಗಮಿಸುತ್ತಿವೆ. ದಿನದ ಪ್ರಯಾಣಿಕರ ಸಂಖ್ಯೆ 4,500ಕ್ಕೂ ಹೆಚ್ಚು. ಆಗಸ್ಟ್‌ನಲ್ಲಿ ಬೆಂಗಳೂರು-ಅಗರ್ತಲ ವಿಮಾನ ಆರಂಭವಾದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಸ್ತಾರ ವಿಮಾನಯಾನ ಸಂಸ್ಥೆ ಆಗಸ್ಟ್‌ 1ರಿಂದ ಬೆಂಗಳೂರು-ಅಗರ್ತಲ ಮಾರ್ಗದಲ್ಲಿ ಒಂದು ವಿಮಾನ ಓಡಿಸಲು ತೀರ್ಮಾನಿಸಿದೆ. ಬೆಂಗಳೂರಿನಿಂದ ಹೊರಡುವ ವಿಮಾನ ಅಗರ್ತಲ ತಲುಪಿ, ಅಲ್ಲಿಂದ ಹೊರಟು ಗೌಹಾತಿ ಮೂಲಕ ಬೆಂಗಳೂರು ನಗರಕ್ಕೆ ವಾಪಸ್ ಆಗಲಿದೆ.

ಈಶಾನ್ಯ ಭಾರತದ ಸಾವಿರಾರು ಜನರು ಬೆಂಗಳೂರಿನಲ್ಲಿ ವ್ಯಾಸಂಗ, ಉದ್ಯೋಗ ಹೀಗೆ ವಿವಿಧ ಕಾರಣದಿಂದ ನೆಲಸಿದ್ದಾರೆ. ಈ ವಿಮಾನದಿಂದ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಣಿಪುರಕ್ಕೆ ಸಾಗುವ ಜನರಿಗೆ ಅನುಕೂಲವಾಗಲಿದೆ.

ಬೆಂಗಳೂರು ಈಶಾನ್ಯ ಭಾರತದ ಎಲ್ಲಾ ನಗರಳಿಗೂ ವಿಮಾನ ಸಂಪರ್ಕವನ್ನು ಹೊಂದಿವೆ. ಹೆಚ್ಚು ವಿಮಾನಗಳು ಗೌಹಾತಿಗೆ ಸಂಪರ್ಕಿಸುತ್ತವೆ. ತ್ರಿಪುರಾ-ಬೆಂಗಳೂರು ಮಾರ್ಗಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ತ್ರಿಪುರಾ ಮುಖ್ಯಮಂತ್ರಿ ಕೇಂದ್ರ ವಿಮಾನಯಾನ ಸಚಿವರ ಗಮನ ಸೆಳೆದಿದ್ದರು.

ಬೆಂಗಳೂರು-ಅಗರ್ತಲ ನಡುವಿನ ವಿಮಾನಯಾನ ದರ 7,500 ರಿಂದ 10,000 ರೂ. ತನಕ ಇದೆ. ವಿಮಾನಯಾನ ಸಂಸ್ಥೆಗಳ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರಯಾಣಿಕರು ಮುಂಗಡವಾಗಿ ಟಕೆಟ್ ಕಾಯ್ದಿರಿಸಲು ಅವಕಾಶವಿದೆ. ವಾರದಲ್ಲಿ ಎಷ್ಟು ದಿನ ಈ ವಿಮಾನ ಹಾರಾಟ ನಡೆಸಲಿದೆ? ಎಂದು ವಿಸ್ತಾರ ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+