ವಾಸ್ಕೋ-ವೆಲಂಕಣಿ ವಿಶೇಷ ರೈಲು: ಉತ್ತರ ಕರ್ನಾಟಕಕ್ಕೆ ಅನುಕೂಲ, ನಿಲ್ದಾಣಗಳು
ಹುಬ್ಬಳ್ಳಿ, ಆಗಸ್ಟ್ 09: ನೈಋತ್ಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ವಾಸ್ಕೋ-ಡ-ಗಾಮಾ ಮತ್ತು ತಮಿಳುನಾಡಿನ ವೆಲಂಕಣಿ ನಡುವೆ ವಿಶೇಷ ರೈಲು ಓಡಿಸುತ್ತಿದೆ. ಈ ರೈಲು ಉತ್ತರ ಕರ್ನಾಟಕದ ಮೂಲಕ ಸಾಗಲಿದ್ದು, ಹಲವು ಜಿಲ್ಲೆಗಳಲ್ಲಿ ನಿಲ್ದಾಣಗಳನ್ನು ಹೊಂದಿದೆ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಜನರು ರಾಜಧಾನಿ ಬೆಂಗಳೂರಿಗೆ ಆಗಮಿಸಲು ಸಹ ಸಹಾಯಕವಾಗಿದೆ. ರೈಲು ಸೇವೆಯ ವಿವರ ಇಲ್ಲಿದೆ.
ತಮಿಳುನಾಡಿನ ವೆಲಂಕಣಿಯಲ್ಲಿ ನಡೆಯಲಿರುವ ಹಬ್ಬದ ಪ್ರಯುಕ್ತ ಮತ್ತು ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ಸರಿದೂಗಿಸಲು ವಾಸ್ಕೋ-ಡ-ಗಾಮಾ ಮತ್ತು ತಮಿಳುನಾಡಿನ ವೆಲಂಕಣಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ಈ ರೈಲಿನಿಂದ ಕರ್ನಾಟಕಕ್ಕೂ ಅನುಕೂಲವಾಗಲಿದೆ.

ರೈಲು ವೇಳಾಪಟ್ಟಿ: ರೈಲು ಸಂಖ್ಯೆ 07361/ 07362 ವಾಸ್ಕೋ-ಡ-ಗಾಮಾ ಮತ್ತು ವೆಲಂಕಣಿ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಎರಡು ದಿಕ್ಕಿನಲ್ಲಿ ಒಟ್ಟು 3 ಟ್ರಿಪ್ ಓಡಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ಈ ವಿಶೇಷ ರೈಲು 2 ಎಸಿ ಟು ಟೈಯರ್, 1 ಎಸಿ ತ್ರಿ ಟೈಯರ್, 10 ಸ್ಲೀಪರ್ ಕ್ಲಾಸ್, 2 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್ಎಲ್‌ಆರ್/ ಡಿ ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.
ರೈಲು ಸಂಖ್ಯೆ 07361 ಆಗಸ್ಟ್ 27 ಮತ್ತು ಸೆಪ್ಟೆಂಬರ್ 2 & 6 ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ರಾತ್ರಿ 9.55 ಗಂಟೆಗೆ ಹೊರಟು, ಮೂರನೇ ದಿನ ಮಧ್ಯರಾತ್ರಿ 01.30 ಗಂಟೆಗೆ ವೆಲಂಕಣಿ ನಿಲ್ದಾಣವನ್ನು ತಲುಪಲಿದೆ.
ಅದೇ ರೀತಿ ರೈಲು ಸಂಖ್ಯೆ 07362 ಆಗಸ್ಟ್ 29, ಸೆಪ್ಟೆಂಬರ್ 4 ಮತ್ತು 8 ರಂದು ರಾತ್ರಿ 11.55 ಗಂಟೆಗೆ ವೆಲಂಕಣಿ ನಿಲ್ದಾಣದಿಂದ ಹೊರಟು, ಮೂರನೇ ದಿನ ಮಧ್ಯರಾತ್ರಿ 12.15 ಗಂಟೆಗೆ ವಾಸ್ಕೊ-ಡ-ಗಾಮಾ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡು ಮಾರ್ಗದಲ್ಲಿ ಮಡಗಾಂವ್, ಸ್ಯಾನ್ವೋರ್ಡಮ್, ಕುಲೆಂ, ಕ್ಯಾಸಲ್ ರಾಕ್, ಲೋಂಡಾ, ಧಾರವಾಡ, ಎಸ್‌ಎಸ್ಎಸ್ ಹುಬ್ಬಳ್ಳಿ, ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಕೃಷ್ಣರಾಜಪುರಂ, ವೈಟೇಲ್, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ತಂಜಾವೂರು, ತಿರುವರೂ ಮತ್ತು ನಾಗಪಟ್ಟಣಂ ಈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ಈ ರೈಲಿನಲ್ಲಿ ಸಂಚಾರ ನಡೆಸಲು ಮುಂಗಡ ಬುಕಿಂಗ್ ಮತ್ತು ಇತರ ಮಾಹಿತಿಗಾಗಿ, ಪ್ರಯಾಣಿಕರು www.enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ 139 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಪ್ರಯಾಣಿಕರು ಈ ವಿಶೇಷ ರೈಲು ಸೇವೆಯನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕರಾವಳಿ ಜನರಿಗೆ ಸಿಹಿಸುದ್ದಿ: ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಭಾಗದ ಜಿಲ್ಲೆಗಳಿಗೆ ಸಂಚಾರ ನಡೆಸುವ ಜನರಿಗೆ ನೈಋತ್ಯ ರೈಲ್ವೆ ಸಿಹಿಸುದ್ದಿ ನೀಡಿದೆ. ಹಾಸನ ಜಿಲ್ಲೆಯ ಯಡಕುಮರಿ-ಕಡಗರವಳ್ಳಿ ನಡುವೆ ರೈಲ್ವೆ ಹಳಿಯ ಕೆಳಗೆ ಗುಡ್ಡ ಕುಸಿದು ರೈಲು ಸಂಚಾರ ಸ್ಥಗಿತವಾಗಿತ್ತು.
ಅಧಿಕಾರಿಗಳು, ಸಿಬ್ಬಂದಿ ನಿರಂತರವಾಗಿ ಸುರಿಯುವ ಮಳೆಯ ನಡುವೆಯೇ ದುರಸ್ತಿ ಕಾರ್ಯ ಪೂರ್ಣಗೊಳಿಸಿದ್ದಾರೆ. ಗೂಡ್ಸ್ ಮತ್ತು ಪ್ರಯಾಣಿಕ ರೈಲುಗಳ ಪ್ರಾಯೋಗಿಕ ಸಂಚಾರ ಮಾರ್ಗದಲ್ಲಿ ಆರಂಭವಾಗಿದೆ. ಈ ಮಾರ್ಗದ ಎಲ್ಲಾ ರೈಲುಗಳ ಸಂಚಾರವನ್ನು ಪುನಃ ಆರಂಭಿಸಲಾಗುತ್ತದೆ.
ಆಗಸ್ಟ್ 6ರಂದು ಗೂಡ್ಸ್ ರೈಲನ್ನು ಮಣ್ಣು ಕುಸಿದ ಜಾಗದಲ್ಲಿ 15 ಕೆಎಂಪಿಎಚ್ ವೇಗದಲ್ಲಿ ಓಡಿಸಿ ಪ್ರಾಯೋಗಿಕ ಸಂಚಾರವನ್ನು ನಡೆಸಲಾಗಿತ್ತು. ರೈಲು ನಂಬರ್ 16575 ಯಶವಂತಪುರ-ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗದಲ್ಲಿ ಪ್ರಾಯೋಗಿಕವಾಗಿ ಓಡಿಸಲಾಗಿದೆ. ಎರಡೂ ರೈಲುಗಳ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.












Click it and Unblock the Notifications