Vande Bharat: 2024ರಲ್ಲಿ ಈ ಮಾರ್ಗಗಳಲ್ಲಿ ಟ್ರ್ಯಾಕ್‌ಗಿಳಿಯಲಿವೆ 60 ಹೊಸ ವಂದೇ ಭಾರತ್ ರೈಲುಗಳು, ಎಲ್ಲೆಲ್ಲಿ?

ನವದೆಹಲಿ, ಜನವರಿ, 21: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಪಡೆಯುತ್ತಲೇ ಇದೆ. ಅಲ್ಲದೆ ಇದೀಗ ಭಾರತೀಯ ರೈಲ್ವೇಯು 2024ರಲ್ಲಿ ದೇಶದ 14 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 60 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲು ಮುಂದಾಗಿದೆ. ಹಾಗಾದರೆ ಯಾವೆಲ್ಲ ಮಾರ್ಗದಲ್ಲಿ ಈ ರೈಲುಗಳು ಸಂಚರಿಸಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇನ್ನು ಭಾರತೀಯ ರೈಲ್ವೇಯು 2023ರಲ್ಲಿ 34 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಿದ್ದು, 2024ರಲ್ಲಿ ಸುಮಾರು 70 ರೈಲುಗಳನ್ನು ತಲುಪಿಸಲು ನಿರೀಕ್ಷೆಯಿದೆ ಮತ್ತು ಅವುಗಳಲ್ಲಿ ಸುಮಾರು 60 ರೈಲುಗಳು ನವೆಂಬರ್ 15ರ ಮೊದಲು ಸಂಚಾರ ಆರಂಭಿಸಲಿದ್ದು, ಇವುಗಳನ್ನು ಹೊಸ ಮಾರ್ಗಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Vande Bharat: 60 new Vande Bharat trains to run by 2024 Including Karnataka, Know routes details

ವಂದೇ ಭಾರತ್‌ನ ಮಾರ್ಗಗಳನ್ನು ರಾಜ್ಯ ಸರ್ಕಾರ, ಭಾರತೀಯ ರೈಲ್ವೆ ಮತ್ತು ಸಲಹೆಗಾರರಿಂದ ಹಲವಾರು ಸುತ್ತಿನ ಚರ್ಚೆಗಳು ಮತ್ತು ಕೇಸ್ ಸ್ಟಡಿಗಳ ಆಧಾರದ ಮೇಲೆ ನಿಗದಿಪಡಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

ವಂದೇ ಭಾರತ್ ರೈಲುಗಳ ಅಗತ್ಯ ಮತ್ತು ದೀರ್ಘಾವಧಿಯ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು, ಹಲವು ಸುತ್ತಿನ ಚರ್ಚೆ ಮತ್ತು ರೈಲ್ವೆ ಮಂಡಳಿಯ ಅನುಮೋದನೆಯ ನಂತರ ಮಾರ್ಗಗಳನ್ನು ನಿರ್ಧರಿಸಲಾಗುತ್ತದೆ. ಇಲ್ಲಿಯವರೆಗೆ, ರೈಲ್ವೇಯು 35 ಜೋಡಿಗಳನ್ನು ಗುರುತಿಸಿದ್ದು, ಅವುಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಪ್ರಾರಂಭಿಸಬಹುದು. ಮತ್ತು ಇನ್ನೂ 50 ಮಾರ್ಗಗಳಲ್ಲಿ ಸಂಚಾರ ಆರಂಭಿಸುವ ಕುರಿತು ಅಧ್ಯಯನಗಳು ನಡೆಯುತ್ತಿವ ಅಂತಲೂ ತಿಳಿಸಿದ್ದಾರೆ.

ರೈಲ್ವೆ ಇಲಾಖೆಯು ಪ್ರಯಾಣಿಯರ ಬೇಡಿಕೆ ಆಧಾರದ ಮೇಲೆ ಹೊಸ ಮಾರ್ಗಗಳನ್ನು ಗುರುತಿಸುವ ಜವಾಬ್ದಾರಿಯನ್ನು ಜೋನ್ಸ್ ಚೀಫ್ ಪ್ಯಾಸೆಂಜರ್ ಟ್ರಾನ್ಸ್‌ಪೋರ್ಟ್ ಮ್ಯಾನೇಜರ್‌ಗಳಿಗೆ ನೀಡಿದೆ. ವಿಮಾನಸೇವೆ ದುಬಾರಿಯಾಗಿದ್ದು, ಕೆಲವೊಂದು ದೊಡ್ಡ ನಗರಗಳಲ್ಲಿ ವಾಯುಸಂಪರ್ಕ ಜಾಲವಿಲ್ಲ. ಅಂತಹ ಕಡೆಗಳಲ್ಲಿ ವಂದೇ ಭಾರತ್ ರೈಲುಗಳನ್ನು ನೀಡಲು ಭಾರತೀಯ ರೈಲ್ವೆ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಬಿಹಾರ ಹಾಗೂ ಕೇರಳ ರಾಜ್ಯ ಸರ್ಕಾರಗಳು, ಸಂಭಾವ್ಯ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಆರಂಭಿಸುವಂತೆ ರೈಲ್ವೆ ಇಲಾಖೆಯನ್ನು ಸಂಪರ್ಕಿಸಿವೆ ಎಂದು ಮತ್ತೋರ್ವ ಅಧಿಕಾರಿ ಹೇಳಿದ್ದಾರೆ ಎಂದು ಮನಿ ಕಂಟ್ರೋಲ್ ತಿಳಿಸಿದೆ.

ರೈಲ್ವೆ ಇಲಾಖೆಯು ಈ ವರ್ಷದ ಜೂನ್ ತಿಂಗಳೊಳಗೆ 18 ನೂತನ ವಂದೇ ಭಾರತ್ ರೈಲುಗಳನ್ನು ಆರಂಭಿಸಬಹುದು. ಬಳಿಕ, ಅಂದರೆ ಜುಲೈನಿಂದ ಪ್ರತಿ 15 ದಿನಗಳಿಗೊಮ್ಮೆ 4 ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಪ್ರಾರಂಭಿಸುವ ಸಾಧ್ಯತೆಯಿದೆ. ಅಲ್ಲದೆ ಭಾರತೀಯ ರೈಲ್ವೆ ಉತ್ತರ ಭಾರತದ ರಾಜ್ಯಗಳಲ್ಲಿ 34 ಹಾಗೂ ದಕ್ಷಿಣ ಭಾರತದ ರಾಜ್ಯಗಳಲ್ಲಿ 25 ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಈ ವರ್ಷ ಮುಂಬೈ-ಶೇಗಾಂವ್, ಪುಣೆ-ಶೇಗಾಂವ್, ಬೆಳಗಾವಿ-ಪುಣೆ, ರಾಯ್‌ಪುರ-ವಾರಣಾಸಿ, ಕೋಲ್ಕತ್ತಾ-ರೂರ್ಕೆಲಾ, ವಡೋದರಾ-ಪುಣೆ, ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಪ್ರಾರಂಭಿಸುವ ಸಾಧ್ಯತೆಯಿದೆ. ಅದರಲ್ಲೂ ಕರ್ನಾಟಕಕ್ಕೆ ಎಷ್ಟು ರೈಲುಗಳು ಸಿಗಲಿವೆ ಎಂಬುದು ವರದಿ ಬರಬೇಕಷ್ಟೇ.

2047ರ ವೇಳೆಗೆ 4,500 ವಂದೇ ಭಾರತ್ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಅವರು ಈ ಹಿಂದೆ ಮಾಹಿತಿ ನೀಡಿದ್ದರು. ಭಾರತೀಯ ರೈಲ್ವೆಯು ಇದುವರೆಗೆ 402 ನೂತನ ವಂದೇ ಭಾರತ್ ರೈಲುಗಳನ್ನು ತಯಾರಿಸಲು ಗುತ್ತಿಗೆ ನೀಡಿದೆ. ಅವುಗಳು ಮಾರ್ಚ್ 2027ರೊಳಗೆ ಸಂಚಾರ ಆರಂಭಿಸಲಿವೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+