ಚಾಮುಂಡಿ ಬೆಟ್ಟದದಲ್ಲಿ ಊಟಿ ವೈಭವ ಸೃಷ್ಟಿ: ಮಂಜಿನ ಮಳೆಯಲಿ ಮಿಂದೇಳಲು ಈಗಲೇ ಭೇಟಿ ನೀಡಿ
ಮೈಸೂರು, ಸೆಪ್ಟೆಂಬರ್ 30: ನಿಸರ್ಗದ ಸ್ವರ್ಗದಲ್ಲಿ ಮಂಜಿನತೆರೆಯಲ್ಲಿ ತೇಲುತ್ತಾ ಸಾಗುವುದೆಂದರೆ ಅದರ ಮಜಾವೇ ಬೇರೆ. ತಣ್ಣಗೆ ಬೀಸುವ ಗಾಳಿಯಲಿ ರಾಚುವ ಮಂಜಿನ ಸಿಂಚನಕ್ಕೆ ಮುಖಕೊಟ್ಟು ನಡೆಯುವುದೆಂದರೆ ಅದೊಂತರ ಸುಖ. ಇಂತಹದೊಂದು ಸುಂದರ ಅನುಭವ ಎಲ್ಲಲ್ಲೂ ಎಲ್ಲ ಕಾಲದಲ್ಲೂ ಸಿಗಲಾರದು. ಇಂತಹ ಕ್ಷಣಗಳನ್ನು ಅನುಭವಿಸಲೆಂದೇ ಕೆಲವರು ಊಟಿಗೋ ಮತ್ತೆ ಕೆಲವರು ಮಡಿಕೇರಿಗೋ ಹೋಗುತ್ತಾರೆ.
ಸಾಮಾನ್ಯವಾಗಿ ಈ ದಿನಗಳಲ್ಲಿ ಮುಂಜಾನೆ ಕೆಲವೆಡೆ ಮಂಜಿನಾಟ ಕಾಣಸಿಗುತ್ತದೆಯಾದರೂ ಅದನ್ನು ಎಂಜಾಯ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮಂಜಿನ ಸುಂದರ ಕ್ಷಣಗಳನ್ನು ಮನಸಾರೆ ಅನುಭವಿಸಲು ಮೈಸೂರಿನಲ್ಲೂ ಸಾಧ್ಯವಿದೆ ಎಂದರೆ ಅಚ್ಚರಿಯಾಗಬಹುದು. ಆದರೂ ನಿಜ. ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮುಂಜಾನೆ ಬಂದರೆ ಆ ಸುಂದರ ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ. ಈ ದಿನಗಳಲ್ಲಂತೂ ಚಾಮುಂಡಿಬೆಟ್ಟ ಹಸಿರು ಹಚ್ಚಡದೊಂದಿಗೆ ಕಂಗೊಳಿಸುತ್ತಿದ್ದು, ನಿಸರ್ಗ ಪ್ರಿಯರನ್ನು ತನ್ನಡೆಗೆ ಸೆಳೆಯುತ್ತಿದೆ. ಹೀಗಾಗಿ ಮುಂಜಾನೆ ಬಂದವರಿಗಷ್ಟೆ ಇಲ್ಲಿನ ಸುಂದರ ದೃಶ್ಯ ಸವಿಯಲು ಸಾಧ್ಯ.

ಚುಮುಚುಮು ಬೆಳಕಿನಲ್ಲಿ ತಣ್ಣಗೆ ಬೀಸುವ ತಂಗಾಳಿಯಲಿ ಮುತ್ತಿಕ್ಕುವ ಮಂಜಿ ಹೆಜ್ಜೆಯಿಡುತ್ತಾ ಖುಷಿಪಡುವುದು ಎಲ್ಲಿಲ್ಲದ ಮಜಾ, ಅದರಲ್ಲೂ ಚಿಲಿಪಿಲಿ ಗುಟ್ಟುವ ಹಕ್ಕಿಗಳು. ಕಣ್ಣು ಹಾಯಿಸಿದುದ್ದಕ್ಕೂ ಹಸಿರ ನೋಟ. ಹೊಸದೊಂದು ಅನುಭವ ನೀಡುವುದರಲ್ಲಿ ಎರಡು ಮಾತಿಲ್ಲ. ಇಂತಹದೊಂದು ಮುಂಜಾನೆಯ ಸುಂದರ ಕ್ಷಣಗಳನ್ನು ಅನುಭವಿಸಿದವರು ಮತ್ತೆ, ಮತ್ತೆ ಆ ಸುಂದರ ಕ್ಷಣಗಳನ್ನು ಅನುಭವಿಸಲೆಂದೇ ಪ್ರವಾಸಿಗರು ಮುಂಜಾನೆ ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಾರೆ. ಅದರಲ್ಲೂ ಕಾನನದ ನಡುವಿನ ಮೆಟ್ಟಿಲ ಮೇಲೆ ಒಂದೊಂದೇ ಹೆಜ್ಜೆಯಿಡುತ್ತಾ ನಿಸರ್ಗದ ನೋಟವನ್ನು ಸವಿಯುವುದು ಮರೆಯಲಾರದ ಅನುಭವ.
ಹಚ್ಚಹಸಿರು ಹೊದ್ದು ಮಲಗಿದ ಚಾಮುಂಡಿ ಬೆಟ್ಟ
ಕಾಡಿನ ನಡುವೆ ನಿರ್ಮಿಸಿದ ಮೆಟ್ಟಿಲಲ್ಲಿ ಸಾಗುತ್ತಾ ಅಲ್ಲಲ್ಲಿ ಇರುವ ನಿಸರ್ಗ ನಿರ್ಮಿತ ವೀಕ್ಷಣಾ ತಾಣ(ವ್ಯೂಪಾಯಿಂಟ್) ಗಳಿಂದ ನಿಂತು ಒಮ್ಮೆ ಕಣ್ಣು ಹಾಯಿಸಿದರೆ ಕಾಣಸಿಗುವ ಮೈಸೂರು ನಗರದ ನೋಟ ಮುದನೀಡುತ್ತದೆ. ಜತೆಗೆ ನಿಸರ್ಗದ ನಡುವೆ ಪ್ರಶಾಂತ ವಾತಾವರಣದಲ್ಲಿ ಒಂದಷ್ಟು ಹೊತ್ತು ಕಳೆದು ಹೋದರೆ ನಿತ್ಯದ ಜಂಜಾಟಗಳ ನಡುವೆಯೂ ಮನಸ್ಸು ಹಗುರವಾಗುತ್ತದೆ.

ಪ್ರಕೃತಿಯ ನಡುವೆ ಒಂದಷ್ಟು ಹೊತ್ತನ್ನು ಕಳೆಯುವ ಮೂಲಕ ಒಂದೊಳ್ಳೆಯ ಗಾಳಿ ಬೆಳಕಿಗೆ ಮೈಯೊಡ್ಡಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದನ್ನೇ ರೂಢಿ ಮಾಡಿಕೊಂಡಿರುವ ಬಹಳಷ್ಟು ಮಂದಿ ಮುಂಜಾನೆ ತಪ್ಪದೇ ಇಲ್ಲಿಗೆ ಬಂದೇ ಬರುತ್ತಾರೆ. ಹೀಗೆ ಬಂದವರು ದೂರದಿಂದಲೇ ಹಚ್ಚಹಸಿರು ಹೊದ್ದು ಮಲಗಿದಂತೆ ಕಾಣುವ ಚಾಮುಂಡಿ ಬೆಟ್ಟದ ವಿಹಂಗಮ ನೋಟ ಅದರ ಮೇಲೆ ಮಂಜಿನ ತೆರೆಯ ನಾಗಾಲೋಟವನ್ನು ಮನಸಾರೆ ಸವಿಯುತ್ತಾರೆ.
ಮೈಮನಕ್ಕೆ ಮುದ ನೀಡುವ ತಂಗಾಳಿ
ಚಾಮುಂಡಿಬೆಟ್ಟವು ಸಮುದ್ರ ಮಟ್ಟಕ್ಕಿಂತ 3489 ಅಡಿ ಎತ್ತರದಲ್ಲಿದ್ದು, ಬೆಟ್ಟದ ಪಾದದಿಂದ ದೇವಾಲಯಕ್ಕೆ ಹತ್ತಿಕೊಂಡು ಹೋಗಲು ದೊಡ್ಡದೇವರಾಜ ಒಡೆಯರ್ ಒಂದು ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 700 ಮೆಟ್ಟಿಲುಗಳನ್ನೇರಿದಾಗ ಸಮತಟ್ಟಾದ ಸ್ಥಳ ಸಿಗುತ್ತದೆ. ಮೆಟ್ಟಿಲೇರಿ ಬಂದವರಿಗೆ ಇಲ್ಲೊಂದಿಷ್ಟು ವಿಶ್ರಾಂತಿ ಸಿಗುತ್ತದೆ. ಜತೆಗೆ ಬೀಸಿ ಬರುವ ತಂಗಾಳಿ ಸುಸ್ತಾದ ಮನಕ್ಕೆ ಉಲ್ಲಾಸವನ್ನು ನೀಡುತ್ತದೆ. ಇಲ್ಲಿರುವ ರಸ್ತೆಯಲ್ಲಿ ನಡೆಯುತ್ತಾ ಹಸಿರ ರಾಶಿಯನ್ನು ಕಣ್ತುಂಬಿಕೊಳ್ಳಬಹುದು.

ಇನ್ನು ಪಾದದಿಂದ ಮೆಟ್ಟಿಲ ಮೂಲಕ ಸಾಗುವವರಿಗೆ ಸುಮಾರು ಐನೂರು ಮೆಟ್ಟಿಲೇರಿದರೆ ಇಲ್ಲೊಂದು ಪುಟ್ಟ ಕಲ್ಯಾಣಿ ಕಾಣಸಿಗುತ್ತದೆ.. ಅಲ್ಲಿಂದ ಮುಂದೆ ಮೆಟ್ಟಿಲೇರುತ್ತಾ ನಂದಿಯನ್ನು ದಾಟಿ ಮುಂದೆ ಹೋದರೆ ಹಾಸುಬಂಡೆಯ ಒಂದಷ್ಟು ವಿಶಾಲ ಜಾಗ ಕಾಣಿಸುತ್ತದೆ. ಇದೊಂದು ವೀಕ್ಷಣತಾಣವಾಗಿದ್ದು, ಇಲ್ಲಿಂದ ನಿಂತು ನೋಡಿದರೆ ಮೈಸೂರು ನಗರದ ಸುಂದರ ನೋಟ ಲಭ್ಯವಾಗುತ್ತದೆ. ಜೊತೆಗೆ ದೂರದ ಕೃಷ್ಣರಾಜಸಾಗರ ಜಲಾಶಯದ ಅಲೆಯಾಡುವ ನೀರಿನ ನೋಟವೂ ಲಭ್ಯವಾಗುತ್ತದೆ.
ಚಾಮುಂಡಿ ಬೆಟ್ಟದತ್ತ ಬರಲು ಮರೆಯಬೇಡಿ
ಇದೆಲ್ಲದರ ನಡುವೆ ರಸ್ತೆ ಮೂಲಕ ವಾಹನಗಳಲ್ಲಿ ತೆರಳಿದರೆ ಹಲವು ಕಡೆ ವ್ಯೂ ಪಾಯಿಂಟ್‌ಗಳಿದ್ದು ಅಲ್ಲಿಂದರೂ ಚಾಮುಂಡಿಬೆಟ್ಟದ ನಿಸರ್ಗ ಸೌಂದರ್ಯ ಮಾತ್ರವಲ್ಲದೆ, ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳ ನೈಜ ಸುಂದರತೆ ಕಣ್ತುಂಬಿ ಬರುತ್ತದೆ. ಸದಾ ಕೆಲಸ ಮತ್ತು ಇತರೆ ಒತ್ತಡದಲ್ಲಿ ಸಿಲುಕಿ ನಲುಗಿದವರು ತಮ್ಮ ಜಂಜಾಟವನ್ನೆಲ್ಲ ಬದಿಗೊತ್ತಿ ಒಂದಷ್ಟು ಸಮಯವನ್ನು ಪ್ರಕೃತಿ ಮಡಿಲಲ್ಲಿ ಕಳೆಯಬೇಕೆಂಬ ಮನಸಿದ್ದರೆ ಮುಂಜಾನೆ ಚಾಮುಂಡಿಬೆಟ್ಟದತ್ತ ಬಂದರೆ ನಿಸರ್ಗದ ಒಡನಾಟದಲ್ಲಿ ನಮ್ಮ ಒತ್ತಡಗಳನ್ನು ಮರೆತು ಮನಶಾಂತಿ ಪಡೆಯಬಹುದು.
ವಾರಾಂತ್ಯದ ದಿನಗಳಲ್ಲಿ ಹೆಚ್ಚೆಚ್ಚು ಪ್ರವಾಸಿಗರು ಮೈಸೂರಿನತ್ತ ಬರುತ್ತಿದ್ದು, ಹೀಗೆ ಬರುವ ಪ್ರವಾಸಿಗರು ಮುಂಜಾನೆ ಚಾಮುಂಡಿಬೆಟ್ಟದತ್ತ ತೆರಳಿದರೆ ಮಂಜಿನ ಲಾಸ್ಯವನ್ನು ನೋಡಲು ಸಾಧ್ಯವಾಗುತ್ತದೆ. ಭೂಮಿ ಮತ್ತು ಆಗಸವನ್ನು ಒಂದಾಗಿಸಿ ನಮ್ಮನ್ನು ಅದರೊಳಗೆ ಬಂಧಿಯಾಗಿಸುವ ಆ ನೋಟ ಮತ್ತು ಅನುಭವ ಸದಾ ನೆನಪಾಗಿ ಉಳಿಯುತ್ತದೆ. ಇಂತಹದೊಂದು ಅನುಭವ ನಿಮಗೂ ಆಗಬೇಕಾ? ಹಾಗಿದ್ದರೆ ಮುಂಜಾನೆ ಚಾಮುಂಡಿಬೆಟ್ಟದತ್ತ ಬರುವುದನ್ನು ಮರೆಯಬೇಡಿ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications