Weekend Travel: ಹಿಮಮಳೆಗೆ ಮೈಯೊಡ್ಡಲು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ
ಚಾಮರಾಜನಗರ, ಜೂನ್ 07: ಕಳೆದ ಕೆಲವು ಸಮಯಗಳಲ್ಲಿ ಬಿಸಿಲಿನ ಧಗೆಯ ಜತೆಗೆ ಚುನಾವಣಾ ಪ್ರಚಾರ, ಇನ್ನಿತರ ಕೆಲಸ ಕಾರ್ಯಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಿಬ್ಬಂದಿ ಹೀಗೆ ಎಲ್ಲರೂ ಇದೀಗ ನಿರಾಳರಾಗಿದ್ದು, ಎಲ್ಲಾದರೂ ಒಂದು ಕಡೆ ಹೋಗಿ ಬರೋಣ ಎಂಬ ನಿರ್ಧಾರಕ್ಕೂ ಬಂದಿರಬಹುದು. ಹಾಗಾದರೆ ಎಲ್ಲಿಗೆ ಹೋಗೋಣ ಎಂದು ಯೋಚಿಸುತ್ತಿದ್ದೀರಾ?
ಒತ್ತಡದಿಂದ ಕೆಲಸ ಮಾಡಿದವರೆಲ್ಲರೂ ಸಾಮಾನ್ಯವಾಗಿ ಹೊರಗೆ ಹೋಗಿ ನಿಸರ್ಗದ ಮಡಿಲ ತಾಣಗಳಲ್ಲಿ ಒಂದಷ್ಟು ಸಮಯ ಕಳೆದು ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಜನರು ಮಾನಸಿಕ ಒತ್ತಡಗಳಲ್ಲಿಯೇ ತಮ್ಮ ಸಮಯವನ್ನು ಕಳೆಯುತ್ತಿರುತ್ತಾರೆ. ಹೀಗಾಗಿ ಅವರು ನಿಸರ್ಗದ ಮಡಿಲ ತಾಣವನ್ನು ಬಯಸುವುದು ಸಹಜವಾಗಿದೆ.

ಪ್ರತಿಯೊಬ್ಬರಿಗೂ ನಿಸರ್ಗದ ಮಡಿಲಲ್ಲಿ ಒಂದಷ್ಟು ಸಮಯ ಕಳೆದರೆ ಮೈಮನಕ್ಕೆ ಉಲ್ಲಾಸವಾಗುವುದು ಸಹಜ. ನಿಸರ್ಗದ ನೋಟವೇ ಹಾಗೆ ಅದು ಒಂದು ಕ್ಷಣ ನಮ್ಮೆಲ್ಲ ಜಂಜಾಟವನ್ನು ಮರೆಯಿಸಿ ತನ್ನತ್ತ ತೆರೆದುಕೊಳ್ಳುವಂತೆ ಮಾಡುತ್ತದೆ. ಅದಕ್ಕೆ ಮನುಷ್ಯನನ್ನು ತನ್ನತ್ತ ಸೆಳೆದು, ಆತನ ಮನಸ್ಸಿಗೆ ನೆಮ್ಮದಿ ಕೊಡುವ ಶಕ್ತಿಯಿದೆ.
ನಿಸರ್ಗವೇ ನೆಮ್ಮದಿಯ ಮಡಿಲು
ಪುರಾಣದ ಋಷಿ ಮುನಿಗಳಿಂದ ಹಿಡಿದು ಇಲ್ಲಿಯವರೆಗೆ ಎಲ್ಲರೂ ನಿಸರ್ಗದ ಮಡಿಲಲ್ಲಿಯೇ ತಮ್ಮ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ ಎನ್ನುವುದು ನಮ್ಮ ಮುಂದಿದೆ. ಇನ್ನು ಸುಂದರ ನಿಸರ್ಗದೊಂದಿಗೆ ಅಲ್ಲಿ ದೇಗುಲವಿದ್ದರೆ ಆ ದೇಗುಲಕ್ಕೆ ತೆರಳಿ ದೇವರ ದರ್ಶನ ಮಾಡಿ ಹಾಗೆಯೇ ಪ್ರಕೃತಿಯ ರಮಣೀಯ ತಾಣಗಳಲ್ಲಿ ಮೈಯೊಡ್ಡಿ ಸಮಯ ಕಳೆದರೆ ಮನಸ್ಸು ಹಗರುವಾಗಿ ಮಾನಸಿಕವಾಗಿ ನೆಮ್ಮದಿ ನೀಡುವುದರಲ್ಲಿ ಎರಡು ಮಾತಿಲ್ಲ.

ಹಿಂದಿನ ಋಷಿ ಮುನಿಗಳಿಂದ ಹಿಡಿದು ಸಾಮಾನ್ಯ ಜನರ ತನಕ ಎಲ್ಲರೂ ನಿಸರ್ಗದಿಂದಲೇ ನೆಮ್ಮದಿ ಪಡೆಯುವ ತೀರ್ಮಾನ ಮಾಡುವುದು ಸಹಜ. ಇಷ್ಟಕ್ಕೂ ಇಂತಹ ನೆಮ್ಮದಿ ನೀಡುವ ತಾಣ ಯಾವುದಿದೆ ಎಂಬ ಆಲೋಚನೆ ಮಾಡುವವರಿಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಬಗ್ಗೆ ಸಲಹೆ ನೀಡಬಹುದಾಗಿದೆ.
ಗೋಪಾಲಸ್ವಾಮಿ ಬೆಟ್ಟದಲ್ಲಿ ಹಿಮದ ಮಳೆ
ಈಗಂತೂ ಪೂರ್ವ ಮುಂಗಾರು ಮಳೆ ಎಡೆ ಬಿಡದೆ ಸುರಿದ ಕಾರಣದಿಂದಾಗಿ ನಿಸರ್ಗದಲ್ಲೊಂದು ಹಸಿರ ಕಳೆ ಬಂದಿದೆ. ಬೆಟ್ಟಗುಡ್ಡಗಳ ಹಸಿರ ಜಗತ್ತಂತು ಸುಂದರವಾಗಿ ಕಂಗೊಳಿಸುತ್ತಿದ್ದು ಕಣ್ಣನ್ನು ತಂಪಾಗಿಸುತ್ತಿದೆ. ಎಲ್ಲಿ ನೋಡಿದರೂ ಹಸಿರು ತುಂಬಿರುವುದು ಮನಕ್ಕೆ ಖುಷಿ ಕೊಡುತ್ತದೆ. ಬೇಸಿಗೆಯಲ್ಲಿ ಅನುಭವಿಸಿದ ಧಗೆ ಕಹಿ ಅನುಭವವನ್ನು ಮರೆಸುತ್ತಿದೆ.
ಇನ್ನು ಪ್ರವಾಸಿಗರು ಮುಂಗಾರು ಮಳೆಯ ಅನುಭವವನ್ನು ಎಲ್ಲೆಡೆ ಅನುಭವಿಸಿರುತ್ತಾರೆ. ಆದರೆ ಹಿಮಮಳೆಯ ಅನುಭವ ಆಗಬೇಕಾದರೆ ಅದು ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಾತ್ರ ಸಾಧ್ಯ. ಈಗ ಇಲ್ಲಿನ ಸೌಂದರ್ಯವಂತು ಇಮ್ಮಡಿಗೊಂಡಿದ್ದು ನಿಸರ್ಗದ ಸುಂದರ ನೋಟ ಪ್ರಕೃತಿ ಪ್ರೇಮಿಗಳನ್ನು ಮೂಕಸ್ಮಿತರನ್ನಾಗಿಸುತ್ತಿದೆ.

ಇಡೀ ನಿಸರ್ಗವೇ ಕಾವ್ಯಮಯ
ಮೊದಲಿಗೆ ಬಂದವರು ಇಲ್ಲಿ ನಿಂತು ಕಣ್ಣು ಹಾಯಿಸಿದರೆ ಸುತ್ತಲಿನ ನೋಟ ಮೈನವಿರೇಳಿಸುತ್ತದೆ. ಅದನ್ನು ಕಾವ್ಯಮಯವಾಗಿ ಹೇಳಬೇಕೆಂದರೆ ಎಲ್ಲೆಂದರೆಲ್ಲಿ ಹರಡಿ ನಿಂತ ಗಿರಿಶಿಖರಗಳು.. ಸಣ್ಣಗೆ ಸುರಿಯುವ ಹಿಮಮಳೆ.. ಒಬ್ಬರಿಗೊಬ್ಬರು ಕಾಣಿಸದಷ್ಟು ದಟ್ಟವಾಗಿ ಹರಡಿ ನಿಲ್ಲುವ ಮಂಜು.. ಅದರಾಚೆಗೆ ಸುಯ್ಯೆಂದು ಬೀಸುವ ತಂಗಾಳಿ.. ಆಗೊಮ್ಮೆ ಈಗೊಮ್ಮೆ ಮೌನವನ್ನು ಸೀಳಿಕೊಂಡು ಬರುವ ದೇಗುಲದ ಗಂಟೆಯ ನಿನಾದ.. ಖುಷಿಕೊಡುತ್ತದೆ.
ಬೇಸಿಗೆಯಲ್ಲಿ ಈ ಸರಿಯಾಗಿ ಮಳೆ ಸುರಿಯಲೇ ಇಲ್ಲ. ಆದರೆ ಮೇ ತಿಂಗಳಲ್ಲಿ ಸುರಿದ ಮಳೆ ನಿಸರ್ಗಕ್ಕೆ ಜೀವ ನೀಡಿದೆ. ಒಣಗಿದ ಗಿಡಮರಗಳು ಹಸಿರು ಕಂಡಿವೆ. ಇದರಿಂದಾಗಿ ಇಡೀ ನಿಸರ್ಗ ಹಸಿರಿನಿಂದ ಕಂಗೊಳಿಸುವುದರೊಂದಿಗೆ ಹಸಿರ ಸ್ವರ್ಗವನ್ನು ಕಣ್ಮುಂದೆ ತಂದಿದೆ. ನಿಜ ಹೇಳಬೇಕೆಂದರೆ ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟ ಹಿಮವದ್ ಗೋಪಾಲಸ್ವಾಮಿ ಆಗಿದೆ.
ಆಸ್ತಿಕ-ನಾಸ್ತಿಕರ ಸುಂದರ ತಾಣ
ಈ ಬೆಟ್ಟ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿದೆ. ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಿಂದ ಮುಂದಕ್ಕೆ ರಸ್ತೆಯಲ್ಲಿ ಸಾಗುತ್ತಿದ್ದರೆ ಆಕಾಶ ಭೂಮಿಯನ್ನು ಒಂದಾಗಿಸಿದಂತೆ ಕಾಣುವ ಮೋಡಗಳ ಆಟ, ಜೇನುಹುಳುಗಳ ಝೇಂಕಾರ... ಹಕ್ಕಿಗಳ ಇಂಚರದ ನಡುವೆ ಹಿಮವದ್ ಗೋಪಾಲ ಸ್ವಾಮಿ ಬೆಟ್ಟದ ದೂರದಿಂದಲೇ ಕಾಣಿಸುತ್ತದೆ.
ಇನ್ನು ಸುಮಾರು 1450 ಅಡಿ ಎತ್ತರದ ಈ ಬೆಟ್ಟದಲ್ಲಿ ಶ್ರೀ ಗೋಪಾಲಸ್ವಾಮಿ ನೆಲೆನಿಂತಿದ್ದು, ಕೊಳಲೂದುವ ಶ್ರೀಕೃಷ್ಣನ ಮೂರ್ತಿ ಆಕರ್ಷಕವಾಗಿದೆ. ಇಲ್ಲಿಗೆ ಸಾಮಾನ್ಯವಾಗಿ ಆಸ್ತಿಕರು-ನಾಸ್ತಿಕರನ್ನೆದೆ ಎಲ್ಲರೂ ಬರುತ್ತಾರೆ. ಹೀಗಾಗಿ ಇದೊಂದು ರೀತಿಯಲ್ಲಿ ಚಾರಣ ಪ್ರಿಯರಿಗೆ ಹುರುಪಿನ ತಾಣವಾಗಿಯೂ, ನಿಸರ್ಗ ಪ್ರೇಮಿಗಳಿಗೆ ಮುದ ನೀಡುವ, ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿದೆ.
ಪ್ರವಾಸ ಸುಖಕರವಾಗಿರುವುದಂತು ನಿಜ
ಪ್ರತಿವರ್ಷವೂ ಬೇಸಿಗೆ ಕಳೆದು ಮುಂಗಾರು ಆರಂಭವಾಗುತ್ತಿದ್ದಂತೆಯೇ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಸೌಂದರ್ಯ ಇಮ್ಮಡಿಯಾಗುವುದರೊಂದಿಗೆ ಹಿಮಮಳೆಯ ಸುಂದರ ವಾತಾವರಣ ಸೃಷ್ಟಿಯಾಗಿಬಿಡುತ್ತದೆ. ಹೀಗಾಗಿ ಈ ಸಮಯದಲ್ಲಿ ಸದಾ ಒತ್ತಡಗಳಿಂದ ಕೂಡಿದ ಜೀವನ ನಡೆಸುವವರು, ಪೇಟೆ, ಪಟ್ಟಣಗಳ ಗೌಜುಗದ್ದಲಗಳಲ್ಲಿ ಬದುಕು ಕಟ್ಟಿಕೊಂಡವರು ತಮ್ಮ ವಾರದ ರಜಾ ದಿನಗಳನ್ನು ಕಳೆಯಲು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ.
ಈ ಬಾರಿ ಬೇಸಿಗೆಯ ಧಗೆ, ಚುನಾವಣೆಯ ಬಿಸಿ ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಪ್ರವಾಸಿಗರು, ಭಕ್ತರು ಬೇಸಿಗೆಯಲ್ಲಿ ಎಲ್ಲೂ ಹೋಗಿರಲಿಲ್ಲ. ಇದೀಗ ತಮ್ಮೆಲ್ಲ ಒತ್ತಡಗಳಿಂದ ಹೊರ ಬಂದಿರುವವರು ಟ್ರಿಪ್ ಹೊರಡುತ್ತಿದ್ದು ಅಂತಹವರು ಹಿಮವದ್ ಗೋಪಾಲಸ್ವಾಮಿ ಬೆಟ್ಟದತ್ತ ಮುಖ ಮಾಡಿದರೆ ಪ್ರವಾಸ ಸುಖಕರವಾಗಿರುವುದಂತು ನಿಜ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications