Travel Guide: ನವರಾತ್ರಿಯಲ್ಲಿ ಭೇಟಿ ನೀಡಬೇಕಾದ 6 ಪ್ರಮುಖ ದುರ್ಗಾದೇವಿ ದೇವಾಲಯಗಳು
ನವರಾತ್ರಿ ಹಿಂದೂಗಳ ಪ್ರಮುಖ ಹಬ್ಬ. ಹೆಸರೇ ಹೇಳುವಂತೆ ಒಂಬತ್ತು ದಿನಗಳಲ್ಲಿ ಒಂಬತ್ತು ವಿಭಿನ್ನ ರೂಪಗಳ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ. ಅಕ್ಟೋಬರ್ 15 ರಿಂದ ಅಕ್ಟೋಬರ್ 23ರವರೆಗೆ ದುರ್ಗಾದೇವಿಯನ್ನು ಪೂಜಿಸುವ ಮೂಲಕ ಅಕ್ಟೋಬರ್ 24ರಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಸಾಲು ಸಾಲು ರಜೆಗಳಿವೆ. ಹಲವಾರು ಭಕ್ತರು ಅನೇಕ ದೇವಿಯ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.
ಯುದ್ಧದಲ್ಲಿ ರಾಕ್ಷಸ ಮಹಿಷಾಸುರನನ್ನು ಸೋಲಿಸಿದ ದುರ್ಗಾದೇವಿಯನ್ನು ಗೌರವಿಸಲು ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಜನರು ಭಾರತದ ವಿವಿಧ ಭಾಗಗಳಲ್ಲಿ ನೆಲೆಗೊಂಡಿರುವ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ದೇವಿಗೆ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.
ನಮ್ಮ ದೇಶದ ವಿವಿಧ ದೇವಾಲಯಗಳು ದುರ್ಗಾ ದೇವಿಗೆ ಸಂಬಂಧಿಸಿವೆ. ಈ ದೇವಸ್ಥಾನಗಳಲ್ಲಿ ನವರಾತ್ರಿ ಆಚರಣೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ದುರ್ಗಾ ದೇವಿಗೆ ಸಮರ್ಪಿತವಾದ ಪ್ರತಿಯೊಂದು ದೇವಾಲಯವು ಸಾಕಷ್ಟು ಹೂವುಗಳು, ದೀಪಗಳಿಂದ ಅಲಂಕರಿಸಲ್ಪಟ್ಟಿರುತ್ತವೆ. ಇಂತಹ ಸ್ಥಳಗಳನ್ನು ಕಣ್ತುಂಬಿಕೊಳ್ಳುವುದು ನಿಜಕ್ಕೂ ಪುಣ್ಯವೇ ಸರಿ.
ನೀವೇನಾದರು ನವರಾತ್ರಿಯ ಸಮಯದಲ್ಲಿ ಇಂತಹ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಬೇಕು ಅಂದುಕೊಂಡಿದ್ದರೆ ಭಾರತದ ಪ್ರಮುಖ 6 ದೇವಾಲಯಗಳ ಪಟ್ಟಿ ಇಲ್ಲಿದೆ.

ವೈಷ್ಣೋ ದೇವಿ ದೇವಸ್ಥಾನ, ಕತ್ರಾ
ಜಮ್ಮುವಿನ ಕತ್ರಾ ನಗರದಲ್ಲಿರುವ ವೈಷ್ಣೋದೇವಿ ದೇವಸ್ಥಾನವು ದುರ್ಗಾ ದೇವಿಯ ಪ್ರಮುಖ ಮತ್ತು ದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ 1584 ಮೀಟರ್ ಎತ್ತರದಲ್ಲಿರುವ ತ್ರಿಕೂಟ ಪರ್ವತದಲ್ಲಿದೆ.
ಪೌರಾಣಿಕ ಕಥೆಯ ಪ್ರಕಾರ ಭಾವ್ರೋ ನಾಥ್ ಎಂಬ ಹೆಸರಿನ ತಂತ್ರಿಯೊಬ್ಬನಿದ್ದನು. ಅವನು ದೇವಿಯನ್ನು ಈ ಸ್ಥಳಕ್ಕೆ ಓಡಿಸಿದನು ಎಂದು ಕಥೆ ಹೇಳುತ್ತದೆ. ರಾಕ್ಷಸನಿಂದ ದೇವಿಯು ತನ್ನನ್ನು ರಕ್ಷಿಸಿಕೊಳ್ಳಲು ಗುಹೆಯಲ್ಲಿ ಅಡಗಿಕೊಂಡಿದ್ದಳು. ಹೀಗಾಗಿ ಭಾವ್ರೋ ನಾಥ್ ರಾಕ್ಷಸನು 9 ತಿಂಗಳವರೆಗೆ ಅವಳನ್ನು ಹುಡುಕಲು ಸಾಧ್ಯವಾಗಲಿಲ್ಲ. ದೇವಿ ಅಡಗಿರುವ ಸ್ಥಳವು ಈಗ ಅತ್ಯಂತ ಜನಪ್ರಿಯವಾದ ವೈಷ್ಣೋ ದೇವಿ ದೇವಾಲಯವಾಗಿದೆ. ನವರಾತ್ರಿಯ ಸಮಯದಲ್ಲಿ ಭಕ್ತ ಸಾಗರವೇ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತದೆ.

ಮಾನಸಾ ದೇವಿ ದೇವಸ್ಥಾನ, ಉತ್ತರಾಖಂಡ
ಮಾನಸಾ ದೇವಿ ದೇವಸ್ಥಾನ ಹರಿದ್ವಾರಕ್ಕೆ ಹೋಗುವ ಮಾರ್ಗದಲ್ಲಿರುವ ಪ್ರಮುಖ ಯಾತ್ರಾ ಸ್ಥಳವಾಗಿದೆ. ಗಂಗಾ ನದಿಯ ಜನ್ಮಸ್ಥಳಕ್ಕೆ ತೆರಳುವಾಗ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ನವರಾತ್ರಿಯ ಸಮಯದಲ್ಲಿ ಬಹಳಷ್ಟು ಅನುಯಾಯಿಗಳು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ದೇವಿಗೆ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.
ಈ ದೇವಾಲಯವನ್ನು 1975 ರಲ್ಲಿ ನಿರ್ಮಿಸಲಾಯಿತು. ಅಂದಿನಿಂದ ಇದು ದೇಶದ ಪ್ರಮುಖ ದುರ್ಗಾ ಮಾತಾ ದೇವಾಲಯಗಳಲ್ಲಿ ಒಂದಾಗಿದೆ. ನವರಾತ್ರಿಯ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವುದು ಉತ್ತರಾಖಂಡದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ.

ಕಾಮಖ್ಯ ದೇವಸ್ಥಾನ, ಅಸ್ಸಾಂ
ಅಸ್ಸಾಂನ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಕಾಮಖ್ಯ ದೇವಾಲಯ. ಗುವಾಹಟಿಯ ನಗರ ಕೇಂದ್ರದಿಂದ ಕೇವಲ 8 ಕಿಮೀ ದೂರದಲ್ಲಿರುವ ಈ ದೇವಾಲಯವನ್ನು ಸ್ತ್ರೀ ಶಕ್ತಿಯ ದೇವತೆ ಎಂದು ಪರಿಗಣಿಸಲಾಗಿರುವ ಕಾಮ್‌ಖಾಯಾಗೆ ಸಮರ್ಪಿಸಲಾಗಿದೆ.
ಇದು ದುರ್ಗಾ ದೇವಿಯ 108 ಶಕ್ತಿ ಪೀಠಗಳ ಭಾಗವಾಗಿದೆ. ದೇವಾಲಯವು ನೈಸರ್ಗಿಕ ಗುಹೆಯ ನಡುವೆ ನೆಲೆಗೊಂಡಿದೆ. ಅಂಬುಬಾಚಿ ಜಾತ್ರೆ ಮತ್ತು ದುರ್ಗಾ ಪೂಜೆಯ ಸಮಯದಲ್ಲಿ ಭಕ್ತ ಸಾಗರವೇ ನೆರೆದಿರುತ್ತದೆ. ನಂಬಿ ಬಂದ ಭಕ್ತರನ್ನು ಈ ದೇವೆ ಕೈ ಬಿಡದೆ ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಇದೆ.

ಅಂಬಾ ಮಾತಾ ದೇವಸ್ಥಾನ, ಗುಜರಾತ್
ಅಂಬಾ ದೇವಿ ದೇವಸ್ಥಾನ ದುರ್ಗಾ ದೇವಿಯ ಪ್ರಮುಖ ದೇವಾಲಯವಾಗಿದೆ. ಈ ದೇವಾಲಯವು ಜುನಾಗಢ್‌ನಲ್ಲಿದೆ. ಇದು ಗುಜರಾತ್ ರಾಜ್ಯದ ದೇವಾಲಯಗಳು ಮತ್ತು ಹಲವಾರು ಯಾತ್ರಾ ಸ್ಥಳಗಳಿಂದ ತುಂಬಿರುವ ಒಂದು ಸುಂದರವಾದ ಪಟ್ಟಣವಾಗಿದೆ. ವರ್ಷವಿಡೀ ಭಕ್ತಾದಿಗಳ ಕೊರತೆ ಈ ದೇವಸ್ಥಾನದಲ್ಲಿ ಕಾಣಸಿಗುವುದಿಲ್ಲ.
ನಿತ್ಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ನವರಾತ್ರಿಯ ಸಮಯದಲ್ಲಿ ಈ ಸ್ಥಳವು ಹೆಚ್ಚು ಜನಸಂದಣಿಯಿಂದ ಕೂಡಿರುತ್ತದೆ. ಇದು 12 ನೇ ಶತಮಾನದಷ್ಟು ಹಿಂದಿನದು. ಮದುವೆಯಾದ ತಕ್ಷಣ ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಸಂತೋಷದ ದಾಂಪತ್ಯ ಜೀವನ ಹೊಂದುತ್ತಾರೆ ಎಂಬ ನಂಬಿಕೆ ಇದೆ.

ದಕಿನೇಶ್ವರ ಕಾಳಿ ಮಂದಿರ, ಕೋಲ್ಕತ್ತಾ
ಹೂಗ್ಲಿ ನದಿಯ ಪೂರ್ವ ದಡದಲ್ಲಿ ನೆಲೆಗೊಂಡಿರುವ ಈ ದೇವಾಲಯವನ್ನು ರಾಣಿ ರಶೋಮಣಿ ಅವರು 1847 ರಲ್ಲಿ ನಿರ್ಮಿಸಿದರು. ಇವರು ಪ್ರಸಿದ್ಧ ಭಾರತೀಯ ಉದ್ಯಮಿ ಮತ್ತು ತತ್ವಜ್ಞಾನಿ. ಈ ಕಾಳಿ ಮಾತಾ ದೇವಾಲಯವು ಇಡೀ ಕೋಲ್ಕತ್ತಾ ನಗರದಲ್ಲಿ ಅತಿ ಹೆಚ್ಚು ಭೇಟಿ ನೀಡುವ ತಾಣವಾಗಿದೆ. ದುರ್ಗಾ ಪೂಜೆಯ ಸಮಯದಲ್ಲಿ ದೇವಾಲಯದ ಸುತ್ತಮುತ್ತಲಿನ ಪ್ರದೇಶದಿಂದ ಸಾಕಷ್ಟು ಜನರು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಕಾಳಿ ಮಾತೆಯ ಜೊತೆಗೆ ಸುತ್ತಮುತ್ತಲಿನ 12 ದೇವಾಲಯಗಳು ಶಿವನಿಗೆ ಸಮರ್ಪಿತವಾಗಿವೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವ ಭಕ್ತಾಧಿಗಳ ಸಂಖ್ಯೆ ಅಧಿಕವಾಗಿದೆ.

ಕಲ್ಕಾಜಿ ದೇವಸ್ಥಾನ, ನವದೆಹಲಿ
ರಾಷ್ಟ್ರ ರಾಜಧಾನಿಯಲ್ಲಿ ನೆಲೆಗೊಂಡಿರುವ ಕಲ್ಕಾಜಿ ದೇವಸ್ಥಾನವು ದುರ್ಗಾ ದೇವಿಯ ಕಾಳಿ ಮಾತಾ ಅವತಾರಕ್ಕೆ ಸಮರ್ಪಿತವಾಗಿದೆ. ಕ್ರಿ.ಶ 1764 ರಲ್ಲಿ ದೇವಾಲಯವನ್ನು ನಿರ್ಮಿಸಲಾಯಿತು. ಮಹಾಭಾರತದ ಪಾಂಡವರು ದೇವಿಯನ್ನು ಪೂಜಿಸಲು ಇಲ್ಲಿಗೆ ಬರುತ್ತಿದ್ದರು ಎಂದು ನಂಬಲಾಗುತ್ತದೆ.
ನವರಾತ್ರಿಯ ಸಮಯದಲ್ಲಿ ಕಾಳಿ ಮಾತೆಯು ದುರ್ಗಾ ಮಾತೆಯ ಪ್ರಮುಖ ರೂಪಗಳಲ್ಲಿ ಒಂದಾಗಿರುವುದರಿಂದ ದೇವಾಲಯವು ಜನಸಂದಣಿಯಿಂದ ಕೂಡಿರುತ್ತದೆ. ಸಂಜೆಯ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದರಿಂದ ಬೆಳಕಿನಿಂದ ತುಂಬಿದ ದೇವಾಲಯದ ರಮಣೀಯ ನೋಟವನ್ನು ಕಣ್ತುಂಬಿಕೊಳ್ಳಬಹುದು.
ಹೀಗೆ ನಮ್ಮ ದೇಶದಲ್ಲಿ ನೆಲೆಗೊಂಡಿರುವ ದುರ್ಗಾ ದೇವಿಯ ಕೆಲವು ಪ್ರಮುಖ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ನವರಾತ್ರಿಯನ್ನು ಹಬ್ಬವನ್ನು ಆನಂದಿಸಿ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications